ಬೇಲೂರು: ಟೆಂಪಲ್ ಆಫ್ ಮಾರ್ಷಲ್ ಆರ್ಟ್ಸ್ ಓಕಿನೋವನ್ ಷೊಟೋಕಾನ್ ಕರಾಟೆ ಡೂ ಇಂಟರ್ನ್ಯಾಷನಲ್ ಇವರ ವತಿಯಿಂದ ಕಥಾ ಮತ್ತು ಕುಮಿತೆಯ ಕರಾಟೆ ಪ್ರದರ್ಶನ ಹಾಗೂ ಬೆಲ್ಟ್ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರಾಟೆ ಪಟುಗಳು ತಮ್ಮ ಕಲಾ ಪ್ರದರ್ಶನವನ್ನು ಪೋಷಕರು ಹಾಗೂ ಪ್ರಾಯೋಜಕರಿಗೆ ತೋರಿಸುವ ಮೂಲಕ ಮನ ತಣಿಸಿದರು.
ಇದೇ ವೇಳೆ ಮಾತನಾಡಿದ ಟೆಂಪಲ್ ಆಫ್ ಮಾರ್ಷಲ್ ಆರ್ಟ್ಸ್ ಓಕಿನೋವನ್ ಷೊಟೋಕಾನ್ ಕರಾಟೆ ಡೂ ಇಂಟರ್ನ್ಯಾಷನಲ್ ಸಂಸ್ಥಾಪಕದ ಅಧ್ಯಕ್ಷರಾದ ಎ.ಪಿ ನಾಗೇಂದ್ರ ಬಾಬು ಮಾತನಾಡಿ ನಮ್ಮ ಸಂಸ್ಥೆಯಿಂದ ಕರಾಟೆ ಪಟುಗಳಿಗೆ ಉತ್ತಮ ಪ್ರದರ್ಶನ ತೋರಿದವರಿಗೆ ನಾವು ಬೆಲ್ಟ್ ವಿತರಣೆ ಮಾಡುತಿದ್ದು, ಅವರಿಗೆ ಪರೀಕ್ಷಾ ಸ್ಪರ್ಧೆಯನ್ನು ಕೂಡ ನಡೆಸುತ್ತಿದ್ದೇವೆ. ಈಗಾಗಲೇ ನಮ್ಮ ಸಂಸ್ಥೆಯಿಂದ ಹಾಸನದಲ್ಲಿ ಕೂಡ ಇಂತಹ ಕಾರ್ಯಕ್ರಮ ಮಾಡಿದ್ದು, ೨೦೨೪ರ ವೇಳೆಗೆ ಕಥಾ ಕುಮಿತೆ ಭಾಗದಲ್ಲಿ ಕರಾಟೆ ಕಲಿತಂತಹ ಉತ್ತಮ ಪಟುಗಳನ್ನು ಒಂದು ತಂಡ ಕಟ್ಟಿ ರಾಜ್ಯ ಹಾಗೂ ಅಂತರರಾಜ್ಯಗಳಲ್ಲಿ ತಮ್ಮ ಪ್ರದರ್ಶನ ಮಾಡಲಿದ್ದಾರೆ. ಹಾಸನ ಜಿಲ್ಲೆಯಿಂದ ಉತ್ತಮ ಕ್ರೀಡಾಪಟುಗಳನ್ನು ನಾವು ಕರಾಟೆ ಪ್ರದರ್ಶನಕ್ಕೆ ಕಳುಹಿಸಿಕೊಡಲಾಗುತ್ತಿದ್ದು, ನಮ್ಮ ಕರಾಟೆ ಸಂಸ್ಥೆಯಲ್ಲೂ ಉತ್ತಮ ಕರಾಟೆ ಪಟುಗಳಿದ್ದಾರೆ. ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ತಿಳಿಸಿದರು.
ರಾಷ್ಟ್ರೀಯ ಕರಾಟೆ ವಿಜೇತರಾದ ಗೀತಾ .ಬಿ ಸಂಸ್ಥೆಯ ಪ್ರತಿನಿಧಿಗಳಾದ ನಂದೀಶ್, ಕೃಪಾ ನಂದೀಶ್ ಹಾಗೂ ಪೋಷಕರು ಹಾಜರಿದ್ದರು.