ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೊಳ ಗ್ರಾಮದಲ್ಲಿ ಏ.18 ಮಂಗಳವಾರದಂದು ಹೆಚ್.ಡಿ.ದೇವೇಗೌಡ ಸರ್ಕಲ್, ಆರ್.ಎಂ.ಸಿ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಪ್ರಥಮ ವರ್ಷದ ಭಗವಾನ್ ಬಾಹುಬಲಿ ಸವಿತಾ ಮಹರ್ಷಿ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಮಾಡಲಾಗಿದೆ ಎಂದು ಆಯೋಜಕರಾದ ಎಸ್.ಕುಮಾರ್ ತಿಳಿಸಿದರು.
ಚನ್ನರಾಯಪಟ್ಟಣದ ಮಾಧ್ಯಮದ ಮಿತ್ರರೊಂದಿಗೆ ಮಾತನಾಡಿದ ಕ್ರಿಕೆಟ್ ಪಂದ್ಯಾವಳಿಯ ಆಯೋಜಕ ಎಸ್.ಕುಮಾರ್ ಶ್ರವಣಬೆಳಗೊಳ ಹೋಬಳಿ ಕೇಂದ್ರದಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ. ಈ ಕ್ರಿಕೆಟ್ ಪಂದ್ಯಾವಳಿಗೆ ಪ್ರವೇಶ ಶುಲ್ಕ 1,500 ರೂಪಾಯಿಗಳನ್ನು ನಿಗದಿ ಮಾಡಲಾಗಿದೆ. ಪ್ರಥಮ ಬಹುಮಾನ 25,000 ನಗದು ಮತ್ತು ಆಕರ್ಷಕ ಟ್ರೋಫಿ, ಎರಡನೇ ಬಹುಮಾನ 15,000 ನಗದು ಮತ್ತು ಆಕರ್ಷಕ ಟ್ರೋಫಿ, ಮೂರನೇ ಬಹುಮಾನ 10,000 ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದರು.
ಸವಿತಾ ಸಮಾಜದ ಬಾಂಧವರು ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ, ಸವಿತಾ ಸಮಾಜದ ಗುರುತಿನ ಚೀಟಿಯನ್ನು ಅಥವಾ ಜಾತಿ ಪ್ರಮಾಣ ಪತ್ರವನ್ನು ತರಬೇಕೆಂದು ಸೂಚಿಸಲಾಗಿದೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಆಟಗಾರರಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಯೋಜಕರಾದ ಎಸ್. ಕುಮಾರ್, ಎ.ಎಸ್.ಮಣಿಕಂಠ, ಎಸ್.ಜಿ.ಗಿರೀಶ, ಎಂ.ಡಿ. ನಂದೀಶ, ಸವಿತಾ ಸಮಾಜದ ಹೋಬಳಿ ಅಧ್ಯಕ್ಷ ಶೇಷಣ್ಣ, ತಾಲೂಕು ಸವಿತಾ ಸಮಾಜದ ಪ್ರತಿನಿಧಿಯಾದ ಸಿ.ಆರ್. ಕುಮಾರ, ತಾಲೂಕು ಸವಿತಾ ಸಮಾಜದ ಖಜಾಂಚಿಯಾದ ಗೋಪಾಲ ಸೇರಿದಂತೆ ಇತರರು ಹಾಜರಿದ್ದರು.