ಹಾಸನ: ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಸಾಧಕರ ಶ್ರೀ ಮಾತಾ ಪ್ರಕಾಶನ (ರಿ ) ಕರ್ನಾಟಕ ಹಾಗೂ ದಿ ಜರ್ನಿ ಆಫ್ ಸೊಸೈಟಿ (ರಿ ) ದೆಹಲಿ ಇದರ ಸಂಸ್ಥಾಪಕರಾದಂತಹ ಡಾ|ನಾಗರಾಜ ತಂಬ್ರಹಳ್ಳಿರವರು ಕುಮಾರಿ ಟೀಷ್ಮಾ ಗೌಡ ಕೆಆರ್ ರವರಿಗೆ “ಅಭಿನವ ಶಾರದೆ ಪ್ರಶಸ್ತಿ”ಗೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಮ್ಮ ಸಂಸ್ಥೆಯ ವತಿಯಿಂದ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್, 40 ಮ್ಯಾಕ್ಸ್ ಮುಲ್ಲರ್ ಮಾರ್ಗ, ಲೋದಿ ರೋಡ್, ನವದೆಹಲಿಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಸಂದರ್ಭದಲ್ಲಿ ಇವರಿಗೆ ಅಭಿನವ ಶಾರದೆ ಪ್ರಶಸ್ತಿಯನ್ನು ಗೌರವಪೂರ್ವಕವಾಗಿ ನೀಡಿ, ಬಹುಮುಖ ಪ್ರತಿಭೆಯಾದ ಬಾಲ ಪ್ರತಿಭೆ, ಸರಸ್ವತಿ, ಶಾರದೆ ಸೇವೆ ಹೀಗೆ ಮುಂದುವರಿಯಲೆಂದು ಹಾರೈಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಮಾರಿ ಟೀಷ್ಮಾ ಗೌಡ ಕೆಆರ್ ಏಳನೇ ತರಗತಿಯಲ್ಲಿ ಹಾಸನದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು, ಸಾಂಸ್ಕೃತಿಕ, ಸಾಹಿತಿಕ, ಶೈಕ್ಷಣಿಕ, ಸಾಮಾಜಿಕ, ಚಟುವಟಿಕೆಯಲ್ಲಿ ಭಾಗವಹಿಸುವುದು ಅಭ್ಯಾಸವಾಗಿದೆ. ಇವರು ಶ್ರೀಮತಿ ಹೆಚ್ ಎಸ್ ಪ್ರತಿಮಾ ಹಾಸನ್ ಸಾಹಿತಿ, ಶಿಕ್ಷಕಿ, ಹಾಸನ ಇವರ ಪ್ರಥಮ ಪುತ್ರಿಯಾಗಿದ್ದು, ಜಿಲ್ಲಾ ಮಟ್ಟದ ನೃತ್ಯಗಾರ್ತಿಯಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದಕ್ಕೆ ಪ್ರೋತ್ಸಾಹವನ್ನು ಅಜ್ಜಿ ನೀಲಮ್ಮ ಮತ್ತು ಮಾವ ಮಂಜುನಾಥ್ ಹೆಚ್.ಎಸ್ (ಆರೋಗ್ಯ ನಿರೀಕ್ಷಣಾಧಿಕಾರಿ)ಯವರು ಬೆಳವಣಿಗೆಗೆ ಸಹಕಾರ ನೀಡುತ್ತಿದ್ದಾರೆ. ರೈಸಿಂಗ್ ಸ್ಟಾರ್ ನೃತ್ಯ ಶಾಲೆಯಲ್ಲಿ ನೃತ್ಯಭ್ಯಾಸವನ್ನು ಮಾಡುತ್ತಿದ್ದು “ನೃತ್ಯ ಕಲಾ ಶಾರದೆ” ಎಂಬ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಹಲವಾರು ಅಭಿನಂದನಾ ಪತ್ರವನ್ನು ಪಡೆದಿರುತ್ತಾರೆ. ಹಲವಾರು ದೊಡ್ಡ ಸಮಾರಂಭಗಳಲ್ಲಿ ತನ್ನ ನೃತ್ಯದಿಂದ ಎಲ್ಲರ ಮನಸೆಳೆದು ಪ್ರಸಿದ್ದಿ ಪಡೆದಿರುತ್ತಾರೆ. ತಾಲೂಕು, ಜಿಲ್ಲೆಗಳಲ್ಲಿ ಪ್ರಶಸ್ತಿಯನ್ನು, ಬಹುಮಾನಗಳನ್ನು ಪಡೆದಿರುತ್ತಾರೆ. ತಾಯಿಯೊಂದಿಗೆ ಸಮಾಜಸೇವೆಯಲ್ಲಿ, ರಜೆಯ ದಿನ ಸ್ವಚ್ಛತಾ ಕಾರ್ಯಕ್ರಮಗಳಿಗೆ ಭಾಗವಹಿಸುತ್ತಾರೆ.
ತಾಯಿಯೊಂದಿಗೆ ಸಾಹಿತ್ಯ ಕ್ಷೇತ್ರದಲ್ಲೂ ಸಹ ಕವನ ವಾಚನವನ್ನು ಮಾಡುವುದು, ಹಾಡುಗಳನ್ನು ಹಾಡುವುದು. ಚುಟುಕುಗಳನ್ನು ತಾಯಿಯ ಮಾರ್ಗದರ್ಶನದಲ್ಲಿ ರಚಿಸುವುದು, ಹಾಯ್ಕು, ಟಂಕಾಗಳನ್ನು, ರುಬಾಯಿಯನ್ನು ರಚಿಸುವುದನ್ನು ಕಲಿಯುತ್ತಿದ್ದಾರೆ. ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು ಪ್ರಕಟವಾಗಿದೆ. ಪುಟ್ಟ ಕಥೆಗಳು ಸಹ ಪ್ರಕಟವಾಗಿದೆ. ಹಲವಾರು ಸಮ್ಮೇಳನಗಳಲ್ಲಿ ಅಭಿನಂದನಾ ಪತ್ರಗಳನ್ನು ಪಡೆದಿರುತ್ತಾರೆ. ಬಹುಮುಖ ಪ್ರತಿಭೆಯಾದ ಕುಮಾರಿ ಟೀಷ್ಮಾ ಗೌಡ ಕೆಆರ್ ರವರ ಶ್ರಮಕ್ಕೆ ಈ “ಅಭಿನವ ಶಾರದ ಪ್ರಶಸ್ತಿ” ಲಭಿಸಿದ್ದು, ತಾಯಿ ಶ್ರೀಮತಿ ಹೆಚ್.ಎಸ್ ಪ್ರತಿಮಾ ಹಾಸನ್, ಪೋಷಕ ಸ್ಥಾನದಲ್ಲಿ ಇರುವ ಅಜ್ಜಿ ಶ್ರೀಮತಿ ನೀಲಮ್ಮ ಸುರೇಶ್ ಮತ್ತು ಮಾವ ಹೆಚ್.ಎಸ್ ಮಂಜುನಾಥ, ಸಮಾಜ ಸೇವಕರಾದ ದೇವರಾಜ್ ರವರು (ಜೆಡಿಎಸ್ ಯುವನಾಯಕ ), ಹಾಸನ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಬಾನಂ ಲೋಕೇಶ್, ಕರ್ನಾಟಕ ರಾಜ್ಯ ಮುಕ್ತಕ ಕವಿ ಪರಿಷತ್ ನ ಸಂಸ್ಥಾಪಕ ಮುತ್ತುಸ್ವಾಮಿರವರು, ಹಾಸನ ಮಾನವ ಹಕ್ಕುಗಳ ಜನ ಸೇವಾ ಸಮಿತಿ ಜಿಲ್ಲಾಧ್ಯಕ್ಷ ರವಿಕಿರಣ್ ಮತ್ತು ಮುಖ್ಯ ಪ್ರಧಾನ ಕಾರ್ಯದರ್ಶಿ ತಿಲಕ್ ರಾಜ್ ಮತ್ತು ಎಲ್ಲಾ ಪದಾಧಿಕಾರಿಗಳು, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಬಹುಮುಖ ಪ್ರತಿಭೆಯಾದ ಬಾಲ ಪ್ರತಿಭೆ ಟೀಷ್ಮಾಗೌಡ ಕೆಆರ್ ರವರಿಗೆ ಅಭಿನವ ಶಾರದೆ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ಅಭಿನಂದನೆಯನ್ನು ತಿಳಿಸುತ್ತ ಬಾಲ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.