ಬೇಲೂರು: ಅರೇಹಳ್ಳಿಯ ಮುಖ್ಯ ರಸ್ತೆಯಲ್ಲಿಂದು ಅರಣ್ಯ ಇಲಾಖೆ-ಜಿಲ್ಲಾ ಆನೆ ಕಾರ್ಯಪಡೆ ವಿಭಾಗ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಕಲೇಶಪುರ ಇವರ ವತಿಯಿಂದ ಪ್ರಾಕೃತಿಕ ವನ್ಯಜೀವಿ ಸಂರಕ್ಷಣೆ ಮತ್ತು ವನ್ಯಜೀವಿ ಸಂಘರ್ಷ ನಿಯಂತ್ರಣ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಅರೇಹಳ್ಳಿ ಆರಕ್ಷಕ ಠಾಣೆಯ ಎ.ಎಸ್.ಐ ಧರ್ಮಯ್ಯ ಚಾಲನೆಗೊಳಿಸಿದರು. ನಂತರ ಕಾರ್ಯಕ್ರಮದ ಕುರಿತು ಬೇಲೂರು ವಲಯ ಅರೇಹಳ್ಳಿ ವಿಭಾಗದ ಗಸ್ತು ಅಧಿಕಾರಿ ರಘು ಏಚ್.ಬಿ ಮಾತನಾಡಿದರು. ಅರೇಹಳ್ಳಿ,
ಬೀಕ್ಕೊಡು ಹಾಗು ಸುತ್ತಮುತ್ತಲಿನ ಭಾಗಗಳಲ್ಲಿ ಆನೆ ಮತ್ತು ಇತರೆ ಕಾಡು ಪ್ರಾಣಿಗಳ ಸಂಚಾರ ಇರುವುದರಿಂದ ಎಲ್ಲಾ ರೈತ ವರ್ಗದವರು, ಕಾಫಿ ಬೆಳೆಗಾರರು ಹಾಗು ಸಾರ್ವಜನಿಕ ಬಾಂಧವರು ನಮ್ಮೊಂದಿಗೆ ಕೈಜೋಡಿಸಿ ಯಾರಿಗೂ ಆನಾನುಕೂಲವಾಗದ ರೀತಿಯಲ್ಲಿ ಸಹಕರಿಸುತ್ತ ಕಾಡಾನೆಗಳ ಮತ್ತು ಕಾಡು ಪ್ರಾಣಿಗಳ ಸಂಘರ್ಷವನ್ನು ಕಡಿಮೆ ಮಾಡಲು ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಎಲ್ಲರೂ ಆನುಸರಿಸಬೇಕು. ನಿಮ್ಮ ಜೀವ ಅತ್ಯಮೂಲ್ಯವಾದದ್ದು, ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ. ಅದೇ ರೀತಿ ವನ್ಯಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಮನವಿ ಮಾಡಿದರು.
ಹಾಸನದ ಬಿ.ಟಿ ಮಾನವ ಮತ್ತು ತಂಡದವರು, ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು, ಗಜ ಕಾರ್ಯಪಡೆ ಸದಸ್ಯರು ಹಾಗು ಸಾರ್ವಜನಿಕರು ಉಪಸ್ಥಿತರಿದ್ದರು.