ಹಾಸನ: ತಾಲೂಕಿನ ಗಾಡೇನಹಳ್ಳಿಯಲ್ಲಿರುವ ಕೆಎಸ್‌ಆರ್‌ಪಿ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಭಾರತ ಸೇವಾ ದಳದ ವತಿಯಿಂದ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಕುರಿತು ಮಾಹಿತಿ ಮತ್ತು ತರಬೇತಿಯನ್ನು ಕೆಎಸ್‌ಆರ್‌ಪಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಕೊಡಲಾಯಿತು.
ಇದೇ ಸಂದರ್ಭದಲ್ಲಿ 134 ಜನ ಶಿಭಿರಾರ್ಥಿಗಳಿದ್ದರು. ಇದೆ ವೇಳೆ ಪ್ರೊಭೆಷನರಿ ಸಬ್ ಇನ್ಸ್‌ಪೆಕ್ಟರ ಅಜಯ್, ಕಮಾಂಡೆಂಟ್ ಪ್ರವೀಣ ಆಳ್ವ, ರಿಸರ್ವ್ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜು, ಭಾರತ ಸೇವಾ ದಳದ ಜಿಲ್ಲಾ ಸಂಚಾಲಕಿ ವಿ.ಎಸ್. ರಾಣಿ ಇತರರು ಉಪಸ್ಥಿತರಿದ್ದರು.