ಹಾಸನ: ಉಲಿವಾಲ ಸ್ಕೂಲ್ ಆಫ್ ಡ್ರಾಮಾ, ಇನ್ನರ್ ವೀಲ್ ಕ್ಲಬ್ ಸಹಕಾರದೊಂದಿಗೆ ಶ್ರೀ ಹಾಡ್ಲಹಳ್ಳಿ ನಾಗರಾಜ್ ಅವರ ಕಾದಂಬರಿ ಆಧಾರಿತ ಕಡವೆ ಬೇಟೆ ನಾಟಕ ಮಾ. ೧೮ರಂದು ಪ್ರದರ್ಶನವಾಗಲಿದೆ ಎಂದು ನಿರ್ದೇಶಕ ಹೆಚ್. ಜಿ. ರತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಮಾರ್ಚ್ ೧೮ರ ಸಂಜೆ ೭ ಗಂಟೆಗೆ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಮಲೆನಾಡು ಪ್ರದೇಶದಲ್ಲಿನ ವನ್ಯಜೀವಿಗಳ ಶಿಕಾರಿ ಜೀವನಾಧಾರಿತ ಹಾಗೂ ಮನುಷ್ಯರ ನಡುವೆ ನಡೆಯುವ ಭಾವನಾತ್ಮಕ ಶಿಕಾರಿಯು ನಾಟಕದ ವಸ್ತುವಾಗಿದೆ ಎಂದರು.
ಹಾಡ್ಲಹಳ್ಳಿ ಪಬ್ಲಿಕೇಶನ್ ಸಹಕಾರದೊಂದಿಗೆ ಕಡವೆ ಭೇಟಿ ಸಾಮಾಜಿಕ ಕಳಕಳಿಯ ನಾಟಕ ಪ್ರದರ್ಶನ ಮಾಡಲಾಗುತ್ತಿದ್ದು, ಹಾಸನಾಂಬ ಕಲಾ ಕ್ಷೇತ್ರದಲ್ಲಿ ಉಚಿತ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಸುಮಾರು ೫೦೦ಕ್ಕೂ ಹೆಚ್ಚು ಮಂದಿಗೆ ನಾಟಕ ನೋಡುವ ಅವಕಾಶ ದೊರೆಯಲಿದೆ ಎಂದರು. ತನುಜಾ, ನಳಿನಿ, ಮಮತಾ, ಅರುಣ್ ಕುಮಾರ್ ಇದ್ದರು.