ಹಾಸನ: ಮಹಿಳೆಯನ್ನು ಎಲ್ಲಿ ಗೌರವದಿಂದ ಕಾಣುತ್ತಾರೆ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಹಿರಿಯರಾದ ಕಾಂಚನಾ ಮಾಲಾ ತಿಳಿಸಿದರು.
ನಗರದ ಅರಳೇಪೇಟೆ ರಸ್ತೆ ಬಳಿ ಇರುವ ಮಾನವ ಬಂಧುತ್ವ ವೇದಿಕೆ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಚಾರ ವಿರೋಧಿ ಆಂದೋಲನ ವೇದಿಕೆಯಿಂದ ಮಂಗಳವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆಯನ್ನು ಕೇಕ್ ಕತ್ತರಿಸುವುದರ ಮೂಲಕ ಉದ್ಘಾಟಿಸಿ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಹಿಳೆ ಎಂದರೇ ಇಂದು ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗಿಲ್ಲ. ಆಕೆಯನ್ನು ಎಲ್ಲಿ ಗೌರವದಿಂದ ಕಾಣುತ್ತಾರೆ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಅಂತಹ ಪೂಜ್ಯ ಕೆಲಸವನ್ನು ಸಯ್ಯಾದ್ ಏಜಾಜ್ ಮಾಡುತ್ತಿದ್ದಾರೆ. ಎಲ್ಲಾರನ್ನು ಸಹೋದರಿ ಮತ್ತು ಮಾತೆಯರೆಂದು ಹೇಳಿ ಮಹಿಳೆಯರನು ಗೌರವಿಸಲಾಗುತ್ತಿರುವುದು ಸಂತೋಷ ತಂದಿದೆ ಎಂದರು.
ಸ್ವಾತಂತ್ರ ಹೋರಾಟಗಾರ ಹೆಚ್. ಎಂ. ಶಿವಣ್ಣ ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆಯನ್ನು ಎಲ್ಲೆಡೆ ಆಚರಿಸಲಾಗುತ್ತಿದ್ದು, ಈ ವೇಳೆ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ಮಹಿಳೆಯರು ಎಂದರೇ ಹಿಂದೆ ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದರು. ಪ್ರಸ್ತುತದಲ್ಲಿ ಜಟಕ, ಆಟೋ, ಲಾರಿ, ಬಸ್ಸು ಇತರೆ ಎಲ್ಲಾ ವಾಹನವನ್ನು ಚಾಲನೆ ಮಾಡುವುದರ ಜೊತೆಯಲ್ಲಿ ವಿಮಾನದಲ್ಲಿ ಫೈಲೆಟ್ ಆಗಿದ್ದಾರೆ. ಜೊತೆಗೆ ರೈಲನ್ನು ಓಡಿಸುತ್ತಾರೆ ಎಂದರು.
ಇಂದು ಮಹಿಳೆಯರು ಸಬಲರಾಗಿದ್ದಾರೆ. ಇನ್ನೂ ಶಿಕ್ಷಣ ಕ್ಷೇತ್ರದಲ್ಲೂ ಅಪಾರ ಸೇವೆ ಸಲ್ಲಿಸಿದ್ದಾರೆ. ಮನೆಯಲ್ಲಿ ತಾಯಿಯಾಗಿ, ಮಗಳಾಗಿ, ಹೆಂಡತಿಯಾಗಿ ಎಲ್ಲಾ ರೀತಿಯ ಸೇವೆ ಸಲ್ಲಿಸುತ್ತಿದ್ದು, ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು.
ಇದೇ ವೇಳೆ ವಿಶ್ವಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಚಾರ ವಿರೋಧಿ ಆಂದೋಲನ ವೇದಿಕೆಯ ಜಿಲ್ಲಾಧ್ಯಕ್ಷ ಸಯ್ಯಾದ್ ಏಜಾಜ್, ಗೌರವಾಧ್ಯಕ್ಷೆ ಭಾನುಮತಿ, ಪದಾಧಿಕಾರಿಗಳಾದ ಶಾಮ್, ಕಮಲಮ್ಮ, ಅನು, ಮೀನಾ, ಸುಧಾ, ಹೇಮಾ, ರೇಷ್ಮಾ, ಡಿ.ಸುಧಾ, ಶ್ವೇತಾ, ರುಕ್ಮಿಣಿ, ಸ್ವಾತಿ, ಸಯ್ಯಾದ್ ಉಸ್ಮಾನ್, ಬಿ.ವಿಜಿಕುಮಾರ್, ಶಹಬ್ಜ್, ಇಮ್ತಾಜ್, ಮಹಾಂತೇಶ, ವೆಂಕಟೇಶ ಇತರರು ಉಪಸ್ಥಿತರಿದ್ದರು.