ಹಾಸನ: ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದ ಸಾಧಕರ ಶ್ರೀ ಮಾತಾ ಪ್ರಕಾಶನ (ರಿ ) ಕರ್ನಾಟಕ ಹಾಗೂ ದಿ ಜರ್ನಿ ಆಫ್ ಸೊಸೈಟಿ (ರಿ) ದೆಹಲಿ ಇದರ ಸಂಸ್ಥಾಪಕರಾದಂತಹ ಡಾ|ನಾಗರಾಜ ತಂಬ್ರಹಳ್ಳಿರವರು ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನರವರನ್ನು ಸಾಧಕ ರತ್ನ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇವರನ್ನು ನಮ್ಮ ಸಂಸ್ಥೆಯ ವತಿಯಿಂದ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್, 40 ಮ್ಯಾಕ್ಸ್ ಮುಲ್ಲರ್ ಮಾರ್ಗ, ಲೋದಿ ರೋಡ್, ನವದೆಹಲಿಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಸಂದರ್ಭದಲ್ಲಿ ಇವರಿಗೆ ಸಾಧಕ ರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ಗೌರವಪೂರ್ವಕವಾಗಿ ನೀಡಿ, ಇವರ ಸೇವೆ ಹೀಗೆ ಮುಂದುವರಿಯಲೆಂದು ಹಾರೈಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪ್ರಶಸ್ತಿಯನ್ನು ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನರವರಿಗೆ ಶೈಕ್ಷಣಿಕ, ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ, ಎಲ್ಲಾ ಕ್ಷೇತ್ರದ ಸಾಧನೆಯನ್ನು ಗಣನೆಗೆ ತೆಗೆದುಕೊಂಡು ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಇವರು ಗಾಯಕಿಯಾಗಿದ್ದು, ಮುಕ್ತಕ, ಚುಟುಕು, ಲೇಖನ, ಕವಿತೆ, ಟಂಕಾ, ರುಬಾಯು, ಗಜಲ್, ವಿಮರ್ಶೆ, ಹೀಗೆ ಹಲವಾರು ಪ್ರಕಾರಗಳನ್ನು ಬರೆಯುತ್ತಿದ್ದು, ದಿನ ನಿತ್ಯ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದೆ. ರಾಜ್ಯದ್ಯಂತ ಇವರ ಬರಹಗಳು ಪ್ರಕಟಗೊಳ್ಳುತ್ತಿದ್ದು, ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದು, ಬಹುಮುಖ ಪ್ರತಿಭೆಯಾಗಿ, ಸದಾ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಈ ಕಾರ್ಯಸಾಧನೆಗೆ ಕಾರಣಕರ್ತರಾಗಿದ್ದವರು ತಾಯಿ ಮತ್ತು ಸೋದರ, ಸಾಧಕ ರತ್ನ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಆಗಿರುವುದನ್ನು ಕಂಡು ತಾಯಿ ನೀಲಮ್ಮ ಸುರೇಶ್ ಮತ್ತು ಸೋದರ ಹೆಚ್‌ಎಸ್ ಮಂಜುನಾಥ (ಆರೋಗ್ಯ ನಿರೀಕ್ಷಣಾಧಿಕಾರಿ) ಮತ್ತು ಕುಟುಂಬ ವರ್ಗದವರು, ಸ್ನೇಹಿತರು, ಹಿರಿಯ ಮತ್ತು ಕಿರಿಯ ಸಾಹಿತಿಗಳು, ಸಮಾಜ ಸೇವಕರು, ಸಂಘ-ಸಂಸ್ಥೆ ಅವರು ಪತ್ರಿಕಾ ಬಳಗದವರು, ಚುಟುಕು ಸಾಹಿತ್ಯ ಪರಿಷತ್ತಿನ ಹಾಸನ ಜಿಲ್ಲಾಧ್ಯಕ್ಷರಾದ ಬಾನಂ ಲೋಕೇಶ್ ಮತ್ತು ಎಲ್ಲಾ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಮುಕ್ತಕ ಕವಿ ಪರಿಷತ್ತಿನ ಸಂಸ್ಥಾಪಕರಾದ ಮುತ್ತು ಸ್ವಾಮಿ ಮತ್ತು ಎಲ್ಲಾ ಪದಾಧಿಕಾರಿಗಳು, ಸ್ಟೇಟ್ ಹ್ಯೂಮನ್ ರೈಟ್ಸ್ ನ ಎಲ್ಲಾ ಪದಾಧಿಕಾರಿಗಳು ಅಭಿನಂದನೆಯನ್ನು ಕೋರುತ್ತಿದ್ದಾರೆ.