ಸಕಲೇಶಪುರ: ಪಟ್ಟಣದ ನಗರ ರೈಲ್ವೆ ಹಳಿ ಬಳಿಯ ರಸ್ತೆಯಲ್ಲಿ ವಳಲ ಹಳ್ಳಿ ಪ್ರಸಾದ್ ಹಾಗೂ ಸ್ನೇಹಿತರಾದ ಸಲಾಂ ಬೇಕಲ, ಪ್ರದೀಪ ಸಕಲೇಶಪುರ ಹೋಗುತ್ತಿದ್ದಾಗ ಹಣ ಹಾಗೂ ದಾಖಲೆಗಳಿರುವ ಪರ್ಸು ಬಿದ್ದಿತ್ತು.
ಆ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಇನ್ಸೂರೆನ್ಸ್ ಕಾಫಿ, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ 21,000 ನಗದು ಹಣ ಕೂಡ ಇತ್ತು ಇದನ್ನು ಗಮನಿಸಿದ ವಳಲಹಳ್ಳಿ ಪ್ರಸಾದ್ ಹಾಗೂ ಸ್ನೇಹಿತರು ಆ ಹಣ ಪ್ರವೀಣ ಬೆಳ್ಳೂರು ಎಂಬವರಿಗೆ ಸೇರಿದ್ದು ಎಂದು ಗೊತ್ತಾಗಿ, ಅವರಿಗೆ ಮೊಬೈಲ್ ಮೂಲಕ ಸಂಪರ್ಕ ಮಾಡಿ ಆ ಹಣ ಹಾಗೂ ದಾಖಲೆಗಳನ್ನು ಅವರಿಗೆ ಒಪ್ಪಿಸಿ ಮಾನವೀಯತೆ ಮೆರೆದರು.
ದಾರಿಯಲ್ಲಿ ಸಿಕ್ಕ ಒಂದು ರೂಪಾಯಿಯಾದರೂ ಯಾರಿಗೂ ತಿಳಿಯದಂತೆ ನೇರವಾಗಿ ಜೇಬಿಗೆ ಇಳಿಸುವ ಜನರ ಮಧ್ಯೆ 21,000 ನಗದು ಹಣವನ್ನು ಕಳೆದುಕೊಂಡವರನ್ನು ಮತ್ತೆ ಸಂಪರ್ಕಿಸಿ ಅವರಿಗೆ ನೀಡಿರುವುದು ಜನ ಮೆಚ್ಚುವ ವಿಷಯವಾಗಿದೆ. ಈ ಮೂರು ಮಂದಿಯ ಪ್ರಾಮಾಣಿಕ ಕಾರ್ಯ ಜನರ ಮೆಚ್ಚುಗೆ ಗಳಿಸಿ ಜನರ ಪ್ರಸಂಶೆಗೆ ಕಾರಣವಾಯಿತು.