ಬೇಲೂರು: ಪಟ್ಟಣದ ವಿದ್ಯಾ ವಿಕಾಸ ಕಾಲೇಜಿನ ಖಾಸಿಂ ಎಂಬ ವಿಶೇಷ ಚೇತನನಿಗೆ ಅದೇ ಕಾಲೇಜಿನ ಪ್ರಥಮ ಪಿಯುಸಿಯ ತಾಸೀನ್ ಎಂಬ ವಿದ್ಯಾರ್ಥಿ ಪರೀಕ್ಷೆ ಬರೆಯಲು ಸಹಾಯ ಮಾಡಲಾಗಿದ್ದು, ಅದೇ ಕಾಲೇಜಿನ ದೀಕ್ಷಿತ ಎಂಬ ವಿದ್ಯಾರ್ಥಿನಿಗೆ ೧ ಗಂಟೆ ಹೆಚ್ಚುವರಿಯಾಗಿ ಬರೆಯಲು ಕಾಲಾವಕಾಶವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.
ಇನ್ನೂ ತಾಲೂಕಿನಲ್ಲಿ ಒಟ್ಟು ೮೦೮ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದು, ತಾಲೂಕಿನಲ್ಲಿ ಎರಡು ಪರೀಕ್ಷೆ ಕೇಂದ್ರಗಳಿದ್ದು, ಜೂನಿಯರ್ ಕಾಲೇಜುನಲ್ಲಿ ೩೫೮ ವಿದ್ಯಾರ್ಥಿಗಳು ಹಾಗೂ ಜಿಜಿಪಿಸಿ ಬಾಲಕಿಯರ ಪದವಿ ಕಾಲೇಜಿನಲ್ಲಿ ೪೫೦ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆದರು.