ಆಲೂರು: ಪಟ್ಟಣದ ಆಟೋ ನಿಲ್ದಾಣದಲ್ಲಿ ಇಂದು ಸಂವಿಧಾನ ಶಿಲ್ಪಿ ಡಾ| ಬಿಆರ್ ಅಂಬೇಡ್ಕರ್ ರವರ 132ನೇ ಜನ್ಮ ದಿನಾಚರಣೆಯನ್ನು ಭಾವಚಿತ್ರಕ್ಕೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆ ಮಾಡುವುದರ ಮೂಲಕ ಜಯಂತಿ ಆಚರಿಸಿದರು.
ಆಟೋ ನಿಲ್ದಾಣದಲ್ಲಿ ಆಟೋ ಚಾಲಕರು ಮತ್ತು ಮಾಲೀಕರು ಸೇರಿ ಆಚರಿಸಿದ ನಂತರ ಆಟೋ ನಿಲ್ದಾಣ ಅಧ್ಯಕ್ಷ ಮಾತನಾಡಿ ಅಂಬೇಡ್ಕರ್ ಅವರು ಬರೆದ ಸಂವಿಧಾನ ದೀನ ದಲಿತರಿಗೆ ಮಾತ್ರ ಸೀಮಿತವಲ್ಲ, ಎಲ್ಲ ಜನಾಂಗದವರಿಗೂ ಅನುಕೂಲ ಆಗೋ ರೀತಿಯಲ್ಲಿ ಸಂವಿಧಾನವನ್ನು ಬರೆದಿದ್ದಾರೆ. ಇದನ್ನು ಎಲ್ಲಾ ಜನರು ಅರಿತುಕೊಂಡು ಅಂಬೇಡ್ಕರ್ ಜಯಂತಿಯನ್ನು ಪ್ರತಿಯೊಂದು ಜನಾಂಗದವರು ಸೇರಿ ಅತ್ಯುನ್ನತವಾಗಿ ಆಚರಿಸಬೇಕು ಎಂದು ಈ ಸಂದರ್ಭದಲ್ಲಿ ಕಳಕಳಿಯಾಗಿ ಕೇಳಿಕೊಳ್ಳುತ್ತೇನೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಮಾತನಾಡಿ, ಅಂಬೇಡ್ಕರ್ ಅವರ ಜಯಂತಿಯನ್ನು ಮುಂದಿನ ದಿನಗಳಲ್ಲಿ ಎಲ್ಲಾ ಹಳ್ಳಿ ಹಳ್ಳಿಗಳಲ್ಲೂ ಹಬ್ಬದ ರೀತಿಯಲ್ಲಿ ಆಚರಿಸಬೇಕಾಗಿ ಕೇಳಿಕೊಂಡರು ಹಾಗೂ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಎಲ್ಲರೂ ಪಾಲಿಸಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಮೂರ್ತಿ ಹೊಸಳ್ಳಿ ಹಾಗೂ ಹುಣಸವಳ್ಳಿ ಗ್ರಾಮ ಪಂಚಾಯತಿಯ ಸದಸ್ಯ ಹರೀಶ್ ಭರತವಳ್ಳಿ ಹಾಗೂ ದಲಿತ ಮುಖಂಡರುಗಳಾದ ರಂಗಯ್ಯ ಅಜ್ಜನಳ್ಳಿ, ಧರ್ಮಣ್ಣ, ಅರಸಪ್ಪ, ಈರಯ್ಯ, ಪುಟ್ಟರಾಜು, ಸಣ್ಣಿ, ಆಟೋ ಸ್ವಾಮಿ, ಸಲೀಂ, ಫಾರೂಖ್, ಜಗದೀಶ್, ಭೀಮ್, ಆರ್ಮಿ ನವೀನ್, ಪರ್ವೀಜ್ ಮತ್ತು ಪತ್ರಕರ್ತರಾದ ಸಲೀಂ ಹಾಜರಿದ್ದರು.