ಬೇಲೂರು: ಪರಿಸರ ಜಾಗೃತಿಗಾಗಿ ಸುಮಾರು 50 ಸಾವಿರ ಕಿ.ಮೀ ಕ್ರಮಿಸುತ್ತಿರುವ ಅಂದ್ರದ ನಲ್ಲೂರಿನ ಯುವಕ ಚೈತನ್ಯ. ಸೈಕಲ್ ಜಾಥದ ಮೂಲಕ ಪರಿಸರ ಜಾಗೃತಿ ಮೂಡಿಸುವಲ್ಲಿ ಯುವಕ ಸಾಮಾಜಿಕ ಚಿಂತನೆ ಮೂಲಕ ಹೊರಟ ಯುವಕನ ಸಾಧನೆಗೆ ಬೇಲೂರಿನ ವಾಸವಿ ಆರ್ಯವೈಶ್ಯ ಪೇಟೆ ಸಂಘದಿಂದ ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಾಸವಿ ಸೇವಾ ಮಂಡಳಿಯ ಅಧ್ಯಕ್ಷ ಕೃಷ್ಣ ಕುಮಾರ್ ಇತ್ತೀಚಿನ ದಿನಗಳಲ್ಲಿ ಯುವ ಜನಾಂಗ ಪರಿಸರದ ಬಗ್ಗೆ ಕಾಳಜಿ ಇಲ್ಲದ ಸಂದರ್ಭದಲ್ಲಿ ನಮ್ಮ ಜನಾಂಗದ ಯುವಕ ಆಂದ್ರ ಪ್ರದೇಶದ ನಲ್ಲೂರಿನ ಯುವಕ ಚೈತನ್ಯ ಸುಮಾರು 50 ಸಾವಿರ ಕಿ.ಮೀ ನಲ್ಲಿ ಸೈಕಲ್ ಜಾಥ ಮೂಲಕವೇ ಇಡೀ ದೇಶಾದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ. ಈಗಾಗಲೇ ಚೈತನ್ಯರವರು ಆಂದ್ರಪ್ರದೇಶದಿಂದ ಡಿಸೆಂಬರ್ 25 ರಂದು ಹೊರಟು ಕೇರಳ, ತಮಿಳ್ ನಾಡು, ಪಾಂಡಿಚೇರಿ ಮೂಲಕ ಕರ್ನಾಟಕಕ್ಕೆ ಬಂದು 150ನೇ ದಿನವನ್ನು ಪೂರೈಸಿದ್ದಾರೆ. ಇಲ್ಲಿಂದ ಚಿಕ್ಕಮಗಳೂರು ಮೂಲಕ ಮಹಾರಾಷ್ಟ್ರ ಸೇರಿದಂತೆ ಅವರ ಪ್ರವಾಸ ಜಾಗೃತಿ ಮುಂದುವರೆಯುತ್ತಿದ್ದು, ತಾಯಿ ವಾಸವಿ ಮಾತೆ ಅವರಿಗೆ ಆರ್ಶಿರ್ವಾದ ನೀಡುವ ಮೂಲಕ ಶಕ್ತಿ ನೀಡಲಿ ಹಾರೈಸಿದರು.
ನಂತರ ಮಾತನಾಡಿದ ವಾಸವಿ ಯುವ ಜನಾಂಗದ ಅಧ್ಯಕ್ಷ ಸುದೀಂದ್ರ ಮಾತನಾಡಿ ದೇಶದ ಹಿತಕ್ಕಾಗಿ ಹೋರಾಡುವ ಸೈನಿಕರಂತೆ ನಮ್ಮಲ್ಲಿ ಸ್ವಚ್ಚತೆ ಆಂದೋಲನಕ್ಕಾಗಿ ಪರಿಸರ ಉಳಿವಿಗಾಗಿ ಜಾಗೃತಿ ಮೂಡಿಸುತ್ತಿರುವ ನಾವೆಲ್ಲರೂ ಸಹ ಅವರನ್ನು ತುಂಬು ಹೃದಯದಿಂದ ಹರಿಸುತ್ತಿದ್ದು, ಪ್ರತಿಯೊಬ್ಬ ಯುವ ಜನಾಂಗವು ಪರಿಸರದ ಬಗ್ಗೆ ಜಾಗೃತಿ ಇದ್ದಾಗ ಮಾತ್ರ ದೇಶ ಹಾಗೂ ನಮ್ಮ ನಾಡು ಸುಭೀಕ್ಷವಾಗುತ್ತದೆ ಎಂದು ಶುಭ ಹಾರೈಸಿ ಸೈಕಲ್ ಜಾಥದ ಬಗ್ಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ವಾಸವಿ ಸಂಘದ ಅಧ್ಯಕ್ಷ ಗೋವಿಂದರಾಜು, ಕೃಷ್ಣಕುಮಾರ್, ಸುಮಿತ್ರಾ, ಪ್ರತಿಮಾ, ಸುರೇಶ್, ಕೃಷ್ಣಮೂರ್ತಿ, ಸೌಮ್ಯ, ರೇಖಾ, ಮಂಜುನಾಥ್, ಪ್ರಶಾಂತ್ ಸೇರಿದಂತೆ ಇತರರು ಹಾಜರಿದ್ದರು.