ಹಾಸನ: ನಗರದ ವಿದ್ಯಾನಗರದ ಶ್ರೀರಂಗ ಕ್ಷಿನಿಕ್ ಹತ್ತಿರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕ ಪೆನ್ಷನ್ ಮೊಹಲ್ಲಾ, ಶ್ರೀರಾಮ ನವಮಿ ಸಮಿತಿ, ಶ್ರೀರಂಗ ಮೆಡಿಕಲ್, ಕೂಲ್ ಪಾಯಿಂಟ್ ಇವರುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ನೂರಾರು ಜನರು ರಕ್ತದಾನ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
ಶೌರ್ಯ ವಿಪತ್ತು ನಿರ್ವಹಣಾ ಘಟಕ ಪೆನ್ಷನ್ ಮೊಹಲ್ಲಾ ಸದಸ್ಯರಾದ ಶರತ್ ಮಾತನಾಡುತ್ತಾ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕ, ಶ್ರೀರಾಮ ನವಮಿ ಸಮಿತಿ, ಶ್ರೀರಂಗ ಮೆಡಿಕಲ್, ಕೂಲ್ ಪಾಯಿಂಟ್ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿರುವುದು ಉತ್ತಮವಾಗಿದೆ. ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ಶಿವಸ್ವಾಮಿ ಕೂಡ ಸಹಕಾರ ನೀಡಿದ್ದಾರೆ ಎಂದರು. ಹಿಂದಿನ ದಿನಗಳಲ್ಲಿ ಒಬ್ಬರು ಕೊಟ್ಟು ರಕ್ತ ಒಬ್ಬರಿಗೆ ಮಾತ್ರ ಉಪಯೋಗವಾಗುತಿತ್ತು. ಈಗ ನಾಲ್ಕು ಜನರಿಗೆ ಅನುಕೂಲವಾಗಲಿದೆ. ನಾವು ಯಾವುದನ್ನು ಸೇವೆ ಎಂದು ನಿರ್ವಹಿಸುತ್ತೇವೆ ಆ ಸೇವೆಯೆ ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೂಯ್ಯುತ್ತದೆ. ನಾವು ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟು ಶ್ರೀ ಮಂಜುನಾಥನ ದರ್ಶನವನ್ನು ಮಾಡುತ್ತೇವೆ ಎಂದು ಹೇಳಿದರು. ವಿಫತ್ತಿನ ವೇಳೆ ಶ್ರೀರಂಗ ಮೆಡಿಕಲ್ ಅವರು ಉಚಿತವಾಗಿ ಔಷಧಿಯನ್ನು ನೀಡುತ್ತಾ ಬಂದಿದ್ದಾರೆ. ಶ್ರೀ ವೀರೇಂದ್ರ ಹೆಗಡೆ ಹಾಗೂ ಮಾತೃಶ್ರೀ ಅಮ್ಮನವರಿಗೆ ಸ್ಮರಿಸುತ್ತಾ ಇಂತಹ ಕಾರ್ಯಕ್ರಮಗಳನ್ನು ಇನ್ನು ಮುಂದೆ ಹೆಚ್ಚೆಚ್ಚು ಏರ್ಪಡಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ಶಿವಸ್ವಾಮಿ, ಸ್ಕೌಟ್ ಅಂಡ್ ಗೈಡ್ಸ್‌ನ ಕಾಂಚನಾ ಮಾಲಾ, ಗಿರೀಶ, ರವಿಕುಮಾರ, ವಿಪತ್ತು ಘಟಕದ ಸೋಮು, ದರ್ಶನ, ಕುಮಾರಸ್ವಾಮಿ, ಜಲಜಾ, ಇತರರು ಉಪಸ್ಥಿತರಿದ್ದರು.