ಸಕಲೇಶಪುರ: ಪೋಲಿಸ್ ಉಪಠಾಣೆ ಹಾನುಬಾಳ್ ನಲ್ಲಿ ತೆರೆಯುವ ಮೂಲಕ ಎಸಿ ಅನ್ಮೂಲ್ ಜೈನ್ ಉದ್ಘಾಟನೆ ಮಾಡಿದರು. ಉಪ ಠಾಣೆ ಹಾನುಬಾಳ್‌ನಲ್ಲಿ ತೆರೆದಿರುವುದು ಸಂತೋಷದ ವಿಷಯ. ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತದೆ. ಉಪ ಠಾಣೆ ತೆರೆಯಲು ಕಾರಣವಾದ ಎಎಸ್‌ಪಿ. ಗ್ರಾ.ಪಂ. ಅಧ್ಯಕ್ಷರು, ಪಿಡಿಓ, ಸದಸ್ಯರು ಸ್ಥಳೀಯ ಮುಖಂಡರು, ನಾಗರಿಕರಿಗೆ ಅಬಿನಂದಿಸಿದರು.
ಪೋಲಿಸ್ ಉಪಠಾಣೆ ತೆರೆಯಲು ಎಸ್‌ಪಿ ಸಾಹೇಬರ ಮಾರ್ಗದರ್ಶನದಲ್ಲಿ ಹಾನುಬಾಳ್‌ನಲ್ಲಿ ತಾತ್ಕಾಲಿಕವಾಗಿ ತೆರೆದಿದ್ದೇವೆ. ಚುನಾವಣೆ ಸಂಬಂಧ ಅಹಿತಕರ ಘಟನೆಗಳು ನಡೆಯುವುದು ಸಹಜ. ಕಾನೂನು ಸುವ್ಯವಸ್ಥೆ ಕಾಪಾಡಲು ಮಾಡಿದ್ದೇವೆ. ಸ್ಥಳೀಯರ ಸಹಕಾರ ಮತ್ತು ಮೇಲಾಧಿಕಾರಿಗಳ ಮಾರ್ಗದಲ್ಲಿ ಕೆಲಸ ಮಾಡಿಕೊಂಡು ಹೋಗಲು ಮತ್ತು ಜನಸಾಮಾನ್ಯರ ಸಮಸ್ಯೆಗೆ ತಕ್ಷಣ ಸ್ಪಂದಿಸಲು ಉಪಠಾಣೆ ಪ್ರಾರಂಭಿಸಿದ್ದೇವೆ. ನಾಗರಿಕರ ಸಹಕಾರ ಮುಖ್ಯ ಎಂದು ಹೇಳಿ, ಸಹಕರಿಸಿದ ಎಲ್ಲಾ ನಾಗರಿಕರಿಗೆ, ಅಧಿಕಾರಿಗಳಿಗೆ ಧನ್ಯವಾದ ಹೇಳಿದರು.
ಗ್ರಾ.ಪಂ ಸದಸ್ಯ ಮೋಹನ್ ಕುಮಾರ್ ಅಚ್ಚರಡಿ ಮಾತನಾಡಿ ಜನಸಾಮಾನ್ಯರು ಸಮಸ್ಯೆಗೆ ಸಕಲೇಶಪುರ ಪಟ್ಟಣಕ್ಕೆ ದೂರು ನೀಡಲು ಹೋಗಬೇಕಾದಂತಹ ಪರಿಸ್ಥಿತಿ ಇದೆ. ನಮಗೆ ತಾತ್ಕಾಲಿಕ ಉಪ ಠಾಣೆ ಬೇಡ, ಶಾಶ್ವತವಾಗಿ ಉಪಠಾಣೆ ಮಾಡಲು ಎಎಸ್ಪಿ ಮಿಥುನ್ ಅವರಲ್ಲಿ ಗ್ರಾಮಸ್ಥರ ಪರವಾಗಿ ಮನವಿ ಮಾಡಿದರು. ನಿರೂಪಣೆ ಗ್ರಾಮಾಂತರ ಪೋಲಿಸ್ ಠಾಣೆ ಎಸ್‌ಐ ಬಸವರಾಜು ಮಾತನಾಡಿದರು. ಸರ್ಕಲ್ ಇನ್ಸೆಫೆಕ್ಟರ್ ಚೈತನ್ಯ. ಗ್ರಾ.ಪಂ ಅಧ್ಯಕ್ಷೆ ವಿಮಲ ರಾಜು, ಪಿಡಿಓ ಹರಿಶ್, ಗ್ರಾ.ಪಂ ಸದಸ್ಯರು, ಮೋಹನ್, ಹರೀಶ್ ಹಾಗೂ ಮುಖಂಡರು, ನಾಗರಿಕರು ಉಪಸ್ಥಿತರಿದ್ದರು.