ಹಾಸನ: ಪ್ರತಿನಿತ್ಯ ಒಂದಿಷ್ಟು ಸಮಯವನ್ನು ಸೈಕಲ್ ಸವಾರಿ ಮಾಡುವುದಕ್ಕೆ ಮೀಸಲಿಟ್ಟರೇ ನಾನಾ ಖಾಯಿಲೆಗಳಿಂದ ದೂರ ಇದ್ದು, ಉತ್ತಮ ಆರೋಗ್ಯ ಪಡೆಯಬಹುದಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಬಿ.ಎನ್. ಶಿವಸ್ವಾಮಿ ಸಲಹೆ ನೀಡಿದರು.
ನಗರದ ಸಾಲಗಾಮೆ ರಸ್ತೆ ಬಳಿ ಇರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಛೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯಕರ ಮಹಿಳೆಯಿಂದ ಆರೋಗ್ಯವಂತ ಭಾರತ ಎನ್ನುವ ಶೀರ್ಷಿಕೆಯಡಿ ಸೈಕಲ್ ಜಾಥಾ ಜಾಗೃತಿ ಕಾರ್ಯಕ್ರಮವನ್ನು ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಜಾಥವನ್ನು ಹಮ್ಮಿಕೊಳ್ಳಲಾಗಿದೆ. ದೈಹಿಕ ವ್ಯಾಯಾಮದಿಂದ ಮಧುಮೇಹ, ಬಿ.ಪಿ. ಇತರೆ ಖಾಯಿಲೆಗಳನ್ನು ಕಡಿಮೆ ಮಾಡಬಹುದು ಎಂದರು. ಈ ಸೈಕಲ್ ಜಾಥ ಮಾಡುವುದರಿಂದ ನಮಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಲವಾರು ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದರು.
ನಾವು ದಿನನಿತ್ಯ ವ್ಯಾಯಾಮ ಮಾಡುವಂತೆ ಸೈಕಲ್ ಹೊಡೆಯುವುದರಿಂದ ಕೂಡ ಹಲವಾರು ಲಾಭಗಳಿವೆ. ಸೈಕಲ್ ಬಳಕೆ ಮಾಡುವುದರಿಂದ ಪರಿಸರ ಮಾಲಿನ್ಯವನ್ನು ನಿಯಂತ್ರಿಸಬಹುದು. ಸಣ್ಣ ಪುಟ್ಟ ಸ್ಥಳಕ್ಕೆ ವಾಹನ ಚಾಲನೆ ಮಾಡುವುದನ್ನು ನಿಯಂತ್ರಿಸಿ ಸೈಕಲ್ ಬಳಕೆ ಮಾಡಿದರೇ ದೇಹಕ್ಕೆ ಆರೋಗ್ಯ ನೀಡುವುದಲ್ಲದೇ ಇದರಿಂದ ಅನೇಕ ಉಪಯೋಗ ಪಡೆಯುತ್ತೇವೆ. ಈ ಜಾಥ ಮತ್ತೊಬ್ಬರಿಗೆ ಜಾಗರತಿಯಾಗಿ ಪ್ರತಿಯೊಬ್ಬರೂ ಸೈಕಲ್ ಬಳಕೆ ಮಾಡುವಂತಾಗಬೇಕು ಎಂದು ಕರೆ ನೀಡಿದರು.
ಇದೆ ವೇಳೆ ಜಿಲ್ಲಾ ಆರೋಗ್ಯ ಡಿಎಸ್ಓ ಡಾ. ಶಿವಶಂಕರ್, ಡಾ. ಸಂದ್ಯಾ, ತಾಲೂಕು ಆರೋಗ್ಯಾಧಿಕಾರಿ ಡಾ. ವಿಜಯ್, ಡಾ. ಮಂಜುನಾಥ, ಗೀತಾ, ಸೈಕಲ್ ಜಾಥದ ತಂಡದ ಮುಖಂಡ ಪೆಡಲ್, ಹಿರಿಯ ಕಲಾವಿದ ಮತ್ತು ಪ್ರಶಸ್ತಿ ವಿಜೇತ ಬಿ.ಟಿ. ಮಾನವ ಇತರರು ಉಪಸ್ಥಿತರಿದ್ದರು.