ಹಾಸನ: ನಗರದ ಜೀವ ಜ್ಯೋತಿ ಆಸ್ಪತ್ರೆಯಲ್ಲಿ ಅಪರೂಪ ಹಾಗೂ ಕ್ಲಿಷ್ಟಕರವಾದ ಮೆದುಳಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿದೆ ಎಂದು ನರರೋಗ ತಜ್ಞರಾದ ಡಾ. ಅರ್ಜುನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ತಾಲೂಕಿನ ಮಂಚನಹಳ್ಳಿ ಗ್ರಾಮದ ನಿವಾಸಿ ಸಾಕಮ್ಮ (೩೮)ವರ್ಷ ವಯೋಮಾನದವರಿಗೆ ಹಲವು ತಿಂಗಳಿನಿಂದ ತಲೆನೋವು ಹಾಗೂ ತಲೆಸುತ್ತಿನಿಂದ ತೀವ್ರತರವಾಗಿ ಬಳಲುತ್ತಿದ್ದರು, ಜೊತೆಗೆ ವಾಂತಿ ಹಾಗೂ ಕಣ್ಣು ಮಂಜಾಗುವ ಪರಿಸ್ಥಿತಿಯಲ್ಲಿ ಇದ್ದ ಅವರು ನಮ್ಮ ಆಸ್ಪತ್ರೆಗೆ ಆಗಮಿಸಿ ಎಂಆರ್‌ಐ ಸ್ಕ್ಯಾನ್ ಮಾಡಿಸಿದಾಗ ಮೆದುಳಿನ ಕಾಂಡ ಸೇರುವ ಭಾಗದಲ್ಲಿ ಗೆಡ್ಡೆ ಇರುವುದು ಪತ್ತೆಯಾಗಿದ್ದು ನಂತರ ಆಸ್ಪತ್ರೆಯ ನುರಿತ ಅರೆವಳಿಕೆ ತಜ್ಞೆ ಲಕ್ಷ್ಮಿ ಅವರ ಸಹಕಾರದೊಂದಿಗೆ ಮಾರ್ಚ್ 14ರಂದು 12 ಗಂಟೆಗಳ ಕಾಲ ಸುದೀರ್ಘವಾಗಿ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ ಎಂದರು.
ಸಾಕಮ್ಮ ಅವರು ಪತಿ ಟೈಲರ್ ವೃತ್ತಿಯನ್ನು ಮಾಡುತ್ತಿದ್ದು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಯಶಸ್ವಿನಿ ಯೋಜನೆ ಅಡಿ ಫಲಾನುಭವಿಯಾಗಿದ್ದು ಅವರಿಗೆ 80,000 ಅನುದಾನ ಚಿಕಿತ್ಸೆಗೆ ಸರ್ಕಾರ ಭರಿಸುತ್ತಿದ್ದು ಉಳಿದ ಹಣವನ್ನು ಆಸ್ಪತ್ರೆಯಿಂದ ವಹಿಸಲಾಗಿದೆ ಎಂದರು.
ಹಾಸನ ಜಿಲ್ಲೆಯಲ್ಲಿಯೇ ಯಶಸ್ವಿನಿ ಯೋಜನೆ ಅಡಿಯಲ್ಲಿ ಮೊಟ್ಟಮೊದಲ ಬಾರಿಗೆ ನಡೆದಿರುವ ಶಸ್ತ್ರಚಿಕಿತ್ಸೆ ಫಲಕಾರಿಯಾಗಿದೆ. ಮುಂದಿನ ದಿನವೂ ಸಹ ಜೀವ ಜ್ಯೋತಿ ಆಸ್ಪತ್ರೆಯಲ್ಲಿ ನುರಿತ ವೈದ್ಯರು ಹಾಗೂ ತಂಡದಿಂದ ಇದೇ ರೀತಿಯ ಹಲವು ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುವುದು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಚಂದನ್, ಡಾ. ಮನು, ಡಾ. ಭವಿಕ ಇದ್ದರು.