ಹಾಸನ: ಮೂರು ದಿನದ ಹೆಣ್ಣು ಮಗುವಿನ ಹೃದಯದಲ್ಲಿ ಚಿಕ್ಕದಾದ ರಂದ್ರ ಕಾಣಿಸಿಕೊಂಡಿದ್ದು, ತುರ್ತಾಗಿ ಆಪರೇಷನ್ ಆಗಬೇಕಾಗಿರುವುದರಿಂದ ಬೆಳಿಗ್ಗೆ ಅಂಬ್ಯುಲೆನ್ಸ್ ಇನೋವಾ ವಾಹನದಲ್ಲಿ ಮತ್ತೊಂದು ತುರ್ತು ವಾಹನ ಎಸ್ಕಾರ್ಟ್ ಮೂಲಕ ಜೀರೋ ಟ್ರಾಫೀಕ್ ಮೂಲಕ ಕರೆದೊಯ್ಯಲಾಯಿತು.
ಹೇನಾ ಕೌಸರ್ ಹಾಗೂ ಪರ್‍ವೀಸ್ ಪಾಷ ಎಂಬುವರ ಎರಡನೇ ಮಗಳು ಅರಸೀಕೆರೆಯ ಆಸ್ಪತ್ರೆಯಲ್ಲಿ ಜನ್ಮ ತಾಳಿದ್ದು, ಈ ವೇಳೆ ಹೃದಯದಲ್ಲಿ ರಂದ್ರ ಕಾಣಿಸಿಕೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕೊಂಡೂಯ್ಯಲು ಸಲಹೆ ನೀಡಲಾಯಿತು. ಇಲ್ಲಿಂದ ಜಯದೇವ ಆಸ್ಪತ್ರೆಗೆ ತುರ್ತಾಗಿ ಸಾಗಿಸಲು ವೈದ್ಯರು ಸಲಹೆ ನೀಡಿದಂತೆ ಬೆಳಿಗ್ಗೆ 8 ಗಂಟೆಗೆ ಅಂಬ್ಯುಲೆನ್ಸ್ ವಾಹನದಲ್ಲಿ ಕರೆದೊಯ್ಯಲಾಯಿತು.
ಆಂಬುಲೆನ್ಸ್ ಚಾಲಕ ಮಧು ಮಾಧ್ಯಮದೊಂದಿಗೆ ಮಾತನಾಡಿ, ಎರಡು ದಿನದ ಮಗುವಿನ ಹೃದಯದಲ್ಲಿ ರಂದ್ರ ಕಾಣಿಸಿಕೊಂಡಿರುವುದರಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತುರ್ತಾಗಿ ಸಾಗಿಸಬೇಕೆಂದು ಕರೆ ಬಂದಿತ್ತು. ಅದರಂತೆ ತುರ್ತು ಚಿಕಿತ್ಸೆಗಾಗಿ ಬೆಳಿಗ್ಗೆ ೯ಕ್ಕೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸಾಗಿಸಬೇಕಾಗಿತ್ತು. ಇದುವರೆಗೂ ಇಂತಹ ತುರ್ತು ಸಂದರ್ಭದಲ್ಲಿ ೯ ಮಕ್ಕಳನ್ನು ಜೀರೋ ಟ್ರಾಫೀಕ್ ಸ್ಪೀಡ್ ನಲ್ಲಿ ಕರೆದೊಯ್ಯಲಾಗಿದೆ. ಇದರಲ್ಲಿ ಎರಡು ಮಕ್ಕಳು ಸಾವನಪ್ಪಿದೆ. ಇಂದು ಪ್ರಯಾಣ ಮಾಡುತ್ತಿರುವ ಮಗುಯನ್ನು ಕೇವಲ ಎರಡು ಗಂಟೆಯಲ್ಲಿಯೇ ಆಸ್ಪತ್ರೆಗೆ ಸಾಗಿಸಬೇಕೆಂದು ವೈದ್ಯರು ತಿಳಿಸಿದ್ದಾರೆ. ಬೆಳಗಿನ ಸಮಯದಲ್ಲಿ ಟ್ರಾಫಿಕ್ ಇರುತ್ತದೆ. ಜನರು ಆದಷ್ಟು ಟ್ರಾಫಿಕ್ ಕ್ಲಿಯರ್ ಮಾಡಿಕೊಟ್ಟರೇ ಸರಿಯಾದ ಸಮಯಕ್ಕೆ ಮಗುವನ್ನು ಕೊಂಡೂಯ್ಯಬಹುದಾಗಿದೆ. ತುರ್ತು ಚಿಕಿತ್ಸೆಗಾಗಿ ವಾಹನದಲ್ಲಿ ಶ್ರೀಘ್ರವಾಗಿ ಮಗುವನ್ನು ಕರೆದೊಯ್ಯಲು ಮಗುವಿನ ಪೋಷಕರು ಪೊಲೀಸ್ ಠಾಣೆಯಲ್ಲಿ ಮಾತನಾಡಿ ಮನವಿ ಮಾಡಿದ್ದಾರೆ.
ಇಂತಹ ತುರ್ತು ಸಂದರ್ಭದಲ್ಲಿ ತುರ್ತು ವಾಹನಕ್ಕೆ ಪೊಲೀಸರು ಮತ್ತು ಸಾರ್ವಜನಿಕರು ಕೂಡ ಸಹಕರಿಸುವ ಮೂಲಕ ಜೀವ ಉಳಿಸಲು ಮುಂದಾಗಬೇಕೆಂದು ಕೋರಿದರು. ಒಟ್ಟು ಮೂರು ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದು, ಮೊದಲಿಗೆ ಅಂಬ್ಯುಲೆನ್ಸ್ ಎಸ್ಕಾರ್ಟ್ ಬೆಂಗಳೂರಿನ ಜಯದೇವ ಆಸ್ಪತ್ರೆವರೆಗೂ ಹೋಗಲಿದೆ. ಇನ್ನು ಮಾರ್ಗ ಮಧ್ಯೆ ಆಗಾಗ್ಗೆ ತುರ್ತು ವಾಹನಗಳು ನಮಗೆ ಸಹಕಾರ ಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ೧೪೦ ಕಿ.ಮೀ ಗೂ ಹೆಚ್ಚಿನ ವೇಗದಲ್ಲಿ ಪ್ರಯಾಣ ಮಾಡಬೇಕಾಗಿದ್ದು, ನೆಲಮಂಗಲದಿಂದ ಟ್ರಾಫೀಕ್ ಸಮಸ್ಯೆ ಇಲ್ಲದಿದ್ದರೇ ನಿಗದಿತ ಸಮಯಕ್ಕೆ ತಲುಪಬಹುದು ಎಂದರು.