ಬೇಲೂರು: ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಚುನಾಯಿತ ಪ್ರತಿನಿಧಿಯಾಗುವ ಅಪಾರ ಕನಸು ಹೊತ್ತು ಮೂರು ಭಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಪರಾಭವಗೊಂಡಿರುವ ಹೆಚ್.ಕೆ ಸುರೇಶ್ ಅವರಿಗೆ ಪತ್ನಿ ಕೋಮಲ ಅವರ ಬಲ ಸುರೇಶ್ ಅವರ ಮಹತ್ವಾಕಾಂಕ್ಷೆಗೆ ಬೆಂಬಲವಾಗಿ ನಿಂತಿದೆ. ಸದ್ಯ ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿರುವ ಹುಲ್ಲಳ್ಳಿ ಸುರೇಶ್ ಅವರ ಪರವಾಗಿ ಪತ್ನಿ ಕೋಮಲಾ ಅವರು ಎಡೆ ಬಿಡದೆ ಪ್ರಚಾರದಲ್ಲಿ ತೊಡಗಿದ್ದಾರೆ.
ಪತಿಯ ಪರವಾಗಿ ಐದು ವರ್ಷಗಳಿಂದ ಕ್ಷೇತ್ರದಲ್ಲಿ ಜನಸಾಮಾನ್ಯರೊಟ್ಟಿಗೆ ಬೆರೆತು ಮನೆ ಮಾತಾಗಿದ್ದು ಪತಿಯ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ.