News Karnataka
ರಾಜಕೀಯ

“ಯಾರಿಗೆ ಒಲವು ಯಾರಿಗೆ ಗೆಲುವು ಯಾರಾಗ್ತಾರೆ ಬೇಲೂರ ಸೂತ್ರದಾರ”

In Belur, Taluk Panchayat and Zilla Panchayat elections have been forgotten and they have turned towards assembly elections.
Photo Credit : Bharath

ಬೇಲೂರು: ಬೇಲೂರು ಅಂದಾಕ್ಷಣ ನೆನಪಾಗುವುದು ಅಭಿವೃದ್ದಿ. ವಿಚಾರದಲ್ಲಿ ಇಲ್ಲಿನ ಎಂಎಲ್‌ಎ. ಯಾರು…? ಏನು ಅಭಿವೃದ್ಧಿ ಮಾಡಿದ್ದಾರೆ ಎಂಬ ಪ್ರಶ್ನೆ…? ಇನ್ನೇನು, ಕೆಲವೇ ದಿನಗಳಲ್ಲಿ ಚುನಾವಣೆ ಬರುವ ಸಾಧ್ಯತೆ ಇದೆ. ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಗಳಂತು ಹಳ್ಳ ಸೇರಿವೆ. ತಾಲ್ಲೂಕು ಮತ್ತು ಜಿ.ಪಂ ಆಕಾಂಕ್ಷಿಗಳಂತು, ಚುನಾವಣೆಯನ್ನೆ ಮರೆತು ಶಾಸಕರ ಚುನಾವಣೆಯತ್ತ ಮುಖ ಮಾಡಿದ್ದಾರೆ.

ಹಾಗಾದರೆ ಯಾರಾಗ್ತಾರೆ ಬೇಲೂರು ವಿಧಾನ ಸಭಾ ಸೂತ್ರದಾರ? ಯಾರಿಗೆ ಜನ ಒಲವು ತೋರಿಸ್ತಾರೆ? ಅನ್ನೋದು ಮಾತ್ರ ನಿಗೂಢವೇನೂ ಇಲ್ಲ. ಈಗಾಗಲೆ ಎಲ್ಲಾ ಆಕಾಂಕ್ಷಿಗಳ ಯೋಗ್ಯತೆ ಜನ ತಿಳಿದು ಕೊಂಡಿದ್ದಾರೆ. ಆದರೂ “ಯೋಗ” ಇದೆಯಲ್ಲ, ಯಾರಿಗೆ ಒಲಿಯುತ್ತದೆ ಎಂಬ ಕುತೂಹಲ ಮಾತ್ರ ಚುನಾವಣೆ ಮುಗಿದ ಮೇಲೇಯೆ ಗೊತ್ತಾಗುವುದು. ಆದರೆ, ಈ ಭಾರಿ ಬೇಲೂರಿನಲ್ಲಿ ಚುನಾವಣಾ ಆಕಾಂಕ್ಷಿಗಳು, ಮಾತ್ರ ಹಬ್ಬ-ಹರಿದಿನ, ತಿಥಿ, ಮದುವೆ, ಇನ್ನಿತರೆ ಕಾರ್ಯಕ್ರಮಗಳಿಗೆ ಹೋಗೋದು ಶುರುವಾಗಿ, ಬಾಡೂಟ ಹಾಕುವ ಮೂಲಕ ಮತದಾರರಿಗೆ ಓಟಿನ ಬಲೆ ಬೀಸಲು ಶುರು ಮಾಡಿಯೆ ಬಿಟ್ಟಿದ್ದಾರೆ.

ಹಾಗಾದರೆ ಯಾರಿಗೆ ಎಷ್ಟು.. ಓಟು ಬೀಳ್ತಾವೆ? ಅದರಲ್ಲಿ ತಪ್ಪಿಸಿಕೋಳ್ಳೋದೆಷ್ಟು? ಕೈಗೆ ಸಿಗೋದೆಷ್ಟು? ಎಂಬ ಲೆಕ್ಕಾಚಾರವಂತೂ ಯಾರಿಗೂ ಗೊತ್ತಿಲ್ಲ ಬಿಡಿ..! ಒಟ್ಟಾರೆ ಜಾತಿವಾರು ಲೆಕ್ಕಹಾಕಿ, ಎಲ್ಲರಿಗೂ ಕೂಡ ನಾನು ಗೆಲ್ಲುತ್ತೇನೆ ಎಂಬ ಆಸೆಯಂತೂ ಜೋರಾಗಿಯೆ ಇದೆ. ಆದರೆ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಬಿಎಸ್ಪಿ, ಪಕ್ಷ ಸೇರಿದಂತೆ ಎಲ್ಲಾ ಪಕ್ಷದಲ್ಲೂ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ಆದರೆ ಎಲ್ಲಾ ನಾಯಕರುಗಳು ಪ್ರಚಾರದಲ್ಲಿ ತೊಡಗಿರುವುದಂತು ನಿಜ.

ಅದೇನೆ ಇರಲಿ, ಬೇಲೂರು ವಿಧಾನ ಸಭೆ ಚುನಾವಣೆಗಂತೂ ಪ್ರಸ್ತುತ ಮುಂಚೂಣಿಯಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ನ ಕೆಲ ನಾಯಕರಂತೂ ಅವರಿಗೆ ಟಿಕೇಟ್ ಫಿಕ್ಸ್ ಅಂದುಕೊಂಡಿದ್ದಾರೆ. ಆದರೆ ಅವರ ಯೋಗ್ಯತೆ ಅಳತೆ ಮಾಡೋರು ಮತದಾರರಲ್ಲವೆ…!, ಇನ್ನೂ ಕೆಲವರು ಟಿಕೇಟ್ ತರ್ತೀನೀ ಅಂತ ನೀ ಮುಂದು ತಾ ಮುಂದು ಅಂತ ಪ್ರಚಾರ ಮಾಡುವುದರಲ್ಲಿ ಮುಂದಾಗಿದ್ದಾರೆ.

ಈಗಾಗಲೆ ಬಿಜೆಪಿಯಿಂದ ಹುಲ್ಲಳ್ಳಿ ಸುರೇಶ್, ಕೊರಟಿಕೆರೆ ಪ್ರಕಾಶ್, ಸಿದ್ದೇಶ ನಾಗೇಂದ್ರ, ಶ್ರೀಮತಿ ಸುರಭಿ ರಘು ಆಕಾಂಕ್ಷಿಯಾದರೆ, ಕಾಂಗ್ರೆಸ್‌ನಿಂದ ಮಾಜಿ ಸಚಿವ ಬಿ.ಶಿವರಾಂ, ವೈ.ಎನ್.ಕೃಷ್ಣೆಗೌಡ, ಇ.ಎಚ್.ಲಕ್ಷ್ಮಣ, ಗ್ರಾನೈಟ್ ರಾಜಶೇಖರ್, ಇನ್ನೂ ಜೆಡಿಎಸ್ ನಿಂದ ಹಾಲಿ ಶಾಸಕ ಕೆ.ಎಸ್.ಲಿಂಗೇಶ, ಬಿಎಸ್ಪಿಯಿಂದ ಗಂಗಾಧರ ಬಹುಜನ್ ಆಕಾಂಕ್ಷಿಯಾಗಬಹುದು ಎಂಬ ನಿರೀಕ್ಷೆ ಇದೆ. ಹಾಗಾದರೆ.. ಯಾರಿಗೆ ಮತದಾರರ ಒಲವಿದೆ ಎಂಬ ಜನಾಭಿಪ್ರಾಯ ನೋಡ್ತಾ ಹೋಗೋಣ…

“ಕೃಷ್ಣೆಗೌಡ.ವೈ.ಎನ್: ಕಳೆದ ಹತ್ತು ವರ್ಷ ವೈ.ಎನ್. ರುದ್ರೇಶಗೌಡ ಶಾಸಕರಾಗಿದ್ದರು. ಕಳೆದ 2018ರಲ್ಲಿ ಮಾಜಿ ಸಚಿವ ಬಿ.ಶಿವರಾಂ ಆಕಾಂಕ್ಷಿಯಾಗಿದ್ದರು. ಆದರೆ ದಿ.ರುದ್ರೇಶಗೌಡ ಅವರು ಅಕಾಲಿಕ ಮರಣಕ್ಕೀಡಾದ ಪರಿಣಾಮ, ಪಕ್ಷದ ವರಿಷ್ಠರು ಅನುಕಂಪದ ಆಧಾರದ ಮೇಲೆ, ತಮ್ಮ ಪತ್ನಿ ಕೀರ್ತನಾ ರುದ್ರೇಶಗೌಡರಿಗೆ ಟಿಕೇಟ್ ನೀಡಿತ್ತು. ಆದರೆ ಅನುಕಂಪ ಕೈ ಹಿಡಿಯಲೆ ಇಲ್ಲ ಕಾರಣ ರುದ್ರೇಶಗೌಡರ ಅಧಿಕಾರವನ್ನು ಜನ ಮೆಚ್ಚಿಕೊಂಡಿದ್ದು ನಿಜ. ಆದರೆ ಅವರ ಸಹೋದರ ವೈ.ಎನ್.ಕೃಷ್ಣೆಗೌಡ, ಅಣ್ಣನ ಆಡಳಿತವನ್ನು ದುರುಪಯೋಗಪಡಿಸಿಕೊಂಡರು ಅನ್ನೋ ಮಾತು ಇದೆ. ಕೀರ್ತನಾ ರುದ್ರೇಶಗೌಡ ಡಮ್ಮಿಅಭ್ಯರ್ಥಿ ಎಂಬ ಕಾರಣಕ್ಕೆ ಹಿಂದುಳಿದ ವರ್ಗ ಹಾಗೂ ಎಸ್ಸಿ ಎಸ್ಟಿ ಮತದಾರರು ಜೆಡಿಎಸ್‌ನ ಕೆ.ಎಸ್.ಲಿಂಗೇಶ ಕೈ ಹಿಡಿದರು. ಕಾರಣ ಲಿಂಗೇಶ ಒಮ್ಮೆ ಸೋತಿದ್ರು, ಜೊತೆಗೆ ತಮ್ಮ ಮಗ ಅಪಘಾತದಲ್ಲಿ ತೀರಿಕೊಂಡಿದ್ರು ಎಂಬ ಕಾರಣಕ್ಕೆ ಅನುಕಂಪದ ಅಲೆ ಲಿಂಗೇಶಗೆ ಒಲಿದಿತ್ತು. ಆದರೆ ಈ ಭಾರಿ ಲಿಂಗೇಶ ಹೆಸರು ಎಲ್ಲಿಯೂ ಮುಂಚಾಣಿಯಲ್ಲಿಲ್ಲ. ಕಾರಣ ಕೇವಲ ಲಿಂಗಾಯತ ಸಮುದಾಯದ ಪರ ಮಾತ್ರ ಕೆಲಸ ಮಾಡುತ್ತಿದ್ದಾರೆ, ದಲಿತರನ್ನ ಕಡೆಗಣಿಸಿದ್ದಾರೆ ಎಂಬ ಮಾತೂ ಇದೆ. ಜೊತೆಗೆ, ಸಾರ್ವಜನಿಕರ ಜೊತೆ ಉತ್ತಮ ಒಡನಾಟ ಹೊಂದಿಲ್ಲ, ಜೊತೆಗೆ ಸ್ವ ಪಕ್ಷದ ಕೆಲ ಮುಖಂಡರ ಜೊತೆ ಭಿನ್ನಾಭಿಪ್ರಾಯ ಇವೆಲ್ಲವನ್ನೂ ಗಮನಿಸಿದರೆ ಈ ಭಾರಿ ಲಿಂಗೇಶ್‌ಗೆ ಅಷ್ಟೇನೂ ಮತದಾರರ ಒಲವು ಇಲ್ಲವೇನೋ ..ಎಂಬಂತಿದೆ.

ದಸರಾ ದರ್ಬಾರ್ ಕೆ.ಎಸ್ ಲಿಂಗೇಶ್‌ಗೆ, ಕೈ ಹಿಡಿಯುತ್ತಾ..ಅನ್ನೋದಾದರೆ.. ಸಾಧ್ಯವಿಲ್ಲ. ಕಾರಣ, ಜಾತ್ಯಾತೀತವಾಗಿ ಎಲ್ಲಾ ವರ್ಗದ ಜನಾಂಗದ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂಬ ಮಾತು ಮೇಲ್ನೋಟಕ್ಕೆ ಕಂಡರೂ ಕೇವಲ ಲಿಂಗಾಯತ ಸಮುದಾಯದ ಮತ ಬೇಟೆಗೆ ಮಾಡಿದ ಹುನ್ನಾರ ಎಂಬಂತಿತ್ತು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಹಾಗಾದರೆ… ಲಿಂಗೇಶ್ ಈ ಭಾರಿ ಗೆಲುವು ಸಾಧಿಸ್ತಾರಾ ಎಂಬ ಪ್ರಶ್ನೆ ಮತದಾರರಲ್ಲಿ ಸತ್ಯ ಮೌನವಾಗಿದೆ. ಇನ್ನೂ… ಹೇಳಿ ಕೇಳಿ, ವೈ.ಎನ್ ಕೃಷ್ಣೆಗೌಡ ಮಾತ್ರ ಅಣ್ಣನ ಜೊತೆಯಲ್ಲಿದ್ದರೂ ಕೂಡ ಅಷ್ಟೇನೂ ಜನ ಇಷ್ಟ ಪಡುವ ವ್ಯಕ್ತಿ ಏನಲ್ಲ. ಅವರ ಬಗ್ಗೆ ಹಲವಾರು ಆರೋಪಗಳು ಕೂಡ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿವೆ. ವಿಷ್ಣುಸಮುದ್ರ ಕೆರೆಯ ಊಳೆತ್ತುವ ಕಾಮಾಗಾರಿಯಲ್ಲಿ 5 ಕೋಟಿ ಗುಳುಂ ಮಾಡಿದ್ದಾರೆ ಎಂಬ ಮಾತೂ ಇದೆ. ಜೊತೆಗೆ, ಅಕ್ರಮ- ಸಕ್ರಮ 53ರಲ್ಲಿ ಹಣ ವಸೂಲಿ ಮಾಡಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಲ್ಲಿ (ಕೊಳವೆ ಭಾವಿ) ಹಣ ವಸೂಲಿ ಮಾಡಿದ್ದಾರೆ. ಎಂಬ ಮಾತು ಇದೆ. ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳವಂತಹ ಸಾಮಾರ್ಥ್ಯ ಅವರಲ್ಲಿ ಇಲ್ಲ ಎಂಬ ಮಾತು ಇದೆ. ಇವೆಲ್ಲವನ್ನೂ ನೋಡಿದರೆ, ಕೃಷ್ಣೆಗೌಡ ಬೇಲೂರು ವಿಧಾನ ಸಭೆ ಚುನಾವಣೆಗೆ ಸೂಕ್ತ ವ್ಯಕ್ತಿ ಅಲ್ಲ ಎಂಬ ಮಾತು ಇದೆ.

ಬಿ.ಶಿವರಾಂ: ಇನ್ನೂ,ಕಾಂಗ್ರೆಸ್ ನಿಂದ ಬಹುತೇಕ ಬಿ.ಶಿವರಾಂಗೆ ಟಿಕೇಟ್ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ವೈ.ಎನ್.ಕೃಷ್ಣೆಗೌಡ ಹಾಗೂ ಗ್ರಾನೈಟ್ ರಾಜಶೇಖರ್ ಶಿವರಾಂ ವಿರುದ್ದ ಸಿಡಿದೆದ್ದ ಸಹೋದರರಂತೆ ಹೋರಾಟ ಮಾಡ್ತಾ ಇದ್ದಾರೆ. ಕಳೆದ ಹತ್ತು ವರ್ಷದ ಅವದಿಯಲ್ಲಿ ದಿ.ವೈ.ಎನ್.ರುದ್ರೇಶ್‌ಗೌಡ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ, ಬೇಲೂರು ಅಭಿವೃದ್ಧಿ ಅಷ್ಟೆನೂ ಕಾಣಲಿಲ್ಲ. ರಸ್ತೆ ಅಗಲೀಕರಣ ಆಗಲಿಲ್ಲ. ಸರ್ಕಾರಿ ಕಛೇರಿ ಕಟ್ಟಡಗಳು ಬಾಡಿಗೆ ಕಟ್ಟಡಗಳಾಗಿಯೆ ಉಳಿದವು. ಕೇವಲ ಕೆಲ ನಾಯಕರಿಗೆ ಮಾತ್ರ ಮಣೆ ಹಾಕಿದ್ದಾರೆ. ಹಿಂದುಳಿದ ವರ್ಗ, ಎಸ್ಸಿ, ಎಸ್ಟಿ ನಾಯಕರನ್ನ ಬೆಳಸಲಿಲ್ಲ ಎಂಬ ಮಾತಿದೆ.

ಅದೇನೆ..ಇರಲಿ…ನಬಿ.ಶಿವರಾಂಗೆ ತಾಲ್ಲೂಕಿನಲ್ಲಿ ಈ ಭಾರಿ ಮತದಾರರು ಮಣೆ ಹಾಕ್ತಾರಾ ಅಂತ ನೋಡೋದಾದ್ರೆ, ಹೇಳಿ ಕೇಳಿ ಶಿವರಾಂ ಸ್ಥಳೀಯರೇನೂ ಅಲ್ಲ. ಹಣ ಖರ್ಚು ಮಾಡಲ್ಲ ಅನ್ನೋ ಮಾತು ಇದೆ. ಜೊತೆಗೆ ಅವರ ಹಿಂಬಾಲಕರು ಹನ್ನೊಂದು ಜನ ಸೈನಿಕರು ಯುದ್ದಕ್ಕೆ ಇಳಿದರೆ, ಮಾತ್ರ ಸೋಲು ಖಚಿತ ಎಂಬ ಮಾತು ಇದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಜೋರಾಗಿಯೆ ಇರುವುದರಿಂದ ಮತದಾರರ ಮನವೊಲಿಕೆ ಬಹಳ ಅಗತ್ಯವಿದೆ ಎಂಬ ಮಾತು ಕೂಡ ಇದೆ. ಮತ್ತೊಂದೆಡೆ ಶಿವರಾಂರವರನ್ನ ಮಣಿಸಲು ರಾಜಶೇಖರನ ರಾಜ್ಯಭಾರ ಜೋರಾಗಿಯೆ ನಡಿತಿದೆ. ಒಟ್ಟಾರೆ ಯಾರಿಗೆ ಗೆಲುವು, ಯಾರಿಗೆ ಸೋಲು ಎಂಬುದು ಟಿಕೇಟ್ ಹಂಚಿಕೆ ಮೇಲೆ ನಿಂತಿದೆ ಅಂತಾರೆ ಮತದಾರರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *