ಅರಸೀಕೆರೆ: ಶ್ರವಣಬೆಳಗೊಳ ಕ್ಷೇತ್ರದ ಜನಪ್ರಿಯ ಶಾಸಕರಾದ ಸಿ.ಎನ್.ಬಾಲಕೃಷ್ಣರವರಿಗೆ ಬಾಗೂರು ಹೋಬಳಿ ತಗಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಅರಸೀಕೆರೆ ಜೇನುಕಲ್ಲು ಬೆಟ್ಟದ ಸಿದ್ದೇಶ್ವರ ದೇವಾಲಯಕ್ಕೆ ಸುಮಾರು ೪೫೦ ಬೈಕ್‌ಗಳ ಮೂಲಕ ತೆರಳಿ ೩೦೧ ಹೆಡೆಗಳ ವಿಶೇಷ ಪೂಜೆ ಸಲ್ಲಿಸಿ ಶಾಸಕ ಸಿ.ಎನ್.ಬಾಲಕೃಷ್ಣ ರವರಿಗೆ ೩ ಲಕ್ಷದ ಮುನ್ನೂರೊಂದು ರೂಪಾಯಿ ದೇಣಿಗೆ ನೀಡಿ ಅಧಿಕ ಮತಗಳ ಅಂತರದಿಂದ ಗೆದ್ದು ಬರುವಂತೆ ಜೇನುಕಲ್ಲು ಸಿದ್ದೇಶ್ವರನಲ್ಲಿ ಪ್ರಾರ್ಥಿಸಿದರು.
ಜೊತೆಯಲ್ಲಿ ಪತ್ನಿ ಕುಸುಮಾ ಬಾಲಕೃಷ್ಣ, ಜೆಡಿಎಸ್ ಮುಖಂಡ ಓಬಳಾಪುರ ಬಸವರಾಜ ಹಾಗೂ ಮುಖಂಡರು , ಕಾರ್ಯಕರ್ತರು ಇದ್ದರು.