ಹಾಸನ: ದೊಡ್ಡಪುರ ಗ್ರಾಮದಲ್ಲಿ ಶ್ರೀ ಉದ್ಬವ ರಾಮೇಶ್ವರ ಸ್ವಾಮಿಯ ದೇವಸ್ಥಾನದ ಜೀರ್ಣೋದ್ದಾರ ಮತ್ತು ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮ ನಡೆದಿದ್ದು, ಕೊನೆಯ ದಿವಸದ ಸಮಾರಂಭದಲ್ಲಿ ಪಟಾಕಿ ಸಿಡಿಸಿದ ಒಂದು ಗುಂಪು ನಡುವೆ ನಡೆದ ಚಿಕ್ಕ ವಿಚಾರಕ್ಕೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮಾತಿಗೆ ಮಾತು ಬೆಳೆದು ದೊಡ್ಡ ಘರ್ಷಣೆ ಉಂಟಾಗಿದ ಪರಿಣಾಮ ಅಲ್ಲಿದ್ದ ಪಕ್ಷಗಳ ಬ್ಯಾನರ್ ಹರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಜಗಳ ನಡೆದು ಐವರಿಗೆ ಗಾಯಗಳಾಗಿ ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ರಾತ್ರಿ ನಡೆದಿದೆ. ಹಾಸನದ ಕಸಬಾ ಹೋಬಳಿ ದೊಡ್ಡಪುರ ಗ್ರಾಮದಲ್ಲಿರುವ ಶ್ರೀ ಉದ್ಬವ ರಾಮೇಶ್ವರ ಸ್ವಾಮಿಯ ದೇವಸ್ಥಾನದ ಜೀರ್ಣೋದ್ದಾರ ಮತ್ತು ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮ ನಡೆದಿದ್ದು, ಕೊನೆಯ ದಿವಸದಂದು ರಾತ್ರಿ ೯.೩೦ ಗಂಟೆ ಸಮಯದಲ್ಲಿ ರಸಮಂಜರಿ ಕಾರ್ಯಕ್ರಮ ಮತ್ತು ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರಮಿಸಿದ ಗ್ರಾಮದ ಎಲ್ಲಾ ಪಕ್ಷದ ಮುಖಂಡರುಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿ ಕೊಂಡಿದ್ದು, ಸನ್ಮಾನ ಕಾರ್ಯುಕ್ರಮ ನಡೆಯುವ ಸಮಯದಲ್ಲಿ ಬಿಜೆಪಿ ಮುಖಂಡ ಮತ್ತು ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಅಶೋಕಕುಮಾರ ಅವರಿಗೆ ಸನ್ಮಾನ ಮಾಡುವ ಸಮಯದಲ್ಲಿ ಬಿಜೆಪಿ ಕಾರ್ಯಕರ್ತ ರಾಕೇಶ ಎಂಬುವವನು ಪಟಾಕಿ ಸಿಡಿಸಿದ್ದು, ಈ ವೇಳೆ ಅಲ್ಲಿ ಕುಳಿತಿದ್ದವರಿಗೆ ಪಟಾಕಿ ಕಿಡಿ ಹಾರಿದೆ. ಇದರಿಂದ ಕುಪಿತರಾದ ಜೆಡಿಎಸ್ ಕಾರ್ಯಕರ್ತರು ರಾಕೇಶನೊಂದಿಗೆ ಗಲಾಟೆ ತೆಗೆದಿದ್ದು, ನೂಕಾಟ ಮತ್ತು ತಳ್ಳಾಟಗಳು ನಡೆದಿರುತ್ತದೆ. ಆಗ ಅಲ್ಲೇ ಇದ್ದ ಪೋಲಿಸರು ಮದ್ಯ ಪ್ರವೇಶಿಸಿ ಲಘು ಲಾಠಿ ಪ್ರಹಾರ ಕೂಡ ನಡೆಸಿ ಜನರನ್ನು ಚದುರಿಸಿದ್ದಾರೆ. ಈ ವೇಳೆ ಘರ್ಷಣೆಯಲ್ಲಿ ಗಾಯಗೊಂಡ ಜೆಡಿಎಸ್ ಬೆಂಬಲಿತ ಐವರನ್ನು ನಗರದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ.
ದೂರಿನ ಮೇರೆಗೆ ಅನೇಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಗಾಯಳು ಆಗಿರುವ ಜೆಡಿಎಸ್ ಕಾರ್ಯಕರ್ತರನ್ನು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್ ಅವರು ರಾತ್ರಿ ಸುಮಾರು ೨ ಗಂಟೆ ಸಮಯದಲ್ಲಿ ಸರಕಾರಿ ಆಸ್ಪತ್ರೆಗೆ ಹೋಗಿ ವಿಚಾರಿಸಿಕೊಂಡು ಬಂದಿದ್ದಾರೆ.