News Karnataka
Saturday, June 10 2023
ರಾಜಕೀಯ

ಒಕ್ಕಲಿಗ ಸಂಘದಲ್ಲಿ ಅವ್ಯವಹಾರ ನಡೆದಿದ್ದಾರೆ ದಾಖಲೆ ನೀಡಲಿ

the president of Belur Okkaliga Association said if there has been any illegality in the Okkaliga association give a record.
Photo Credit : Bharath

ಬೇಲೂರು: ನಮ್ಮ ಅವಧಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ, ನಡೆದಿದ್ದಾರೆ ಸೂಕ್ತ ದಾಖಲೆ ಸಮೇತ ಸಾಬೀತು ಪಡಿಸಲಿ ಎಂದು ಒಕ್ಕಲಿಗ ಸಂಘದ ಅಧ್ಯಕ್ಷ ಕೆ.ಪಿ. ಶೈಲೇಶ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಲವು ದಿನಗಳ ಹಿಂದೆ ಪತ್ರಿಕಾ ಹೇಳಿಕೆಯಲ್ಲಿ ನನ್ನ ವಿರುದ್ಧ ಹೇಳಿಕೆ ನೀಡಿದ್ದರು. ನಾನು ಒಕ್ಕಲಿಗ ಸಂಘದಲ್ಲಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ, ಅಲ್ಲದೆ ಚುನಾವಣೆ ಘೋಷಣೆಗೆ ಹಿಂದೆ ಸರಿಯುತ್ತಿದ್ದಾರೆ, ಸಭೆಗೆ ಯಾರನ್ನು ಆಹ್ವಾನಿಸದೆ ಕೇವಲ ಒಕ್ಕಲಿಗ ಮುಖಂಡರನ್ನು ಕರೆದು ಸಭೆ ನಡೆಸುತ್ತಿದ್ದಾರೆ ಎಂದು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಅದೆಲ್ಲ ಸುಳ್ಳು, ಸೂಕ್ತ ದಾಖಲೆಗಳಿದ್ದರೆ ಸಾಬೀತುಪಡಿಸಲಿ, ನನ್ನ ಅವಧಿಯಲ್ಲಿ ಸುಮಾರು ೫೦ ಲಕ್ಷ ರೂ. ಗಳನ್ನು ಸಂಘದಲ್ಲಿ ಠೇವಣಿ ಇಡಲಾಗಿದೆ, ಈ ಹಿಂದೆ ಇದ್ದ ವೈ. ಎನ್. ರುದ್ರೇಶಗೌಡರ ಅವಧಿಯಲ್ಲಿ ಕೇವಲ ೧೧ ಲಕ್ಷ ರೂ.ಗಳನ್ನು ಇಟ್ಟಿದ್ದರು. ಅಲ್ಲದೆ ದಾನಿಗಳು ಹಣವನ್ನು ಕೊಟ್ಟಿರುವುದಕ್ಕೆ ಯಾವುದೇ ರಸೀದಿ ನೀಡದೆ ಕೇವಲ ಕಲ್ಲುಗಳಲ್ಲಿ ಹಣವನ್ನು ಬರೆಸಿದ್ದಾರೆ. ಲೆಕ್ಕದಲ್ಲಿ ಹಣವೇ ಇಲ್ಲದೆ ಕೇವಲ ವಸೂಲಿಯಲ್ಲಿ ಹಣವನ್ನು ಪಡೆದಿದ್ದಾರೆ. ಚುನಾವಣೆ ನಡೆಸಲು ನಮ್ಮ ಅಭ್ಯಂತರ ಯಾವುದೇ ಇಲ್ಲ, ನಾವು ಚುನಾವಣೆಗೆ ಸಿದ್ದ. ನಮ್ಮ ಆಡಳಿತದಲ್ಲಿ ಪಾರದರ್ಶಕ ಆಡಳಿತ ನೀಡಿದ್ದು ಲೆಕ್ಕಪರಿಶೋಧಕರಲ್ಲಿ ಸರಿಯಾದ ಲೆಕ್ಕವನ್ನು ಮಾಡಿಸಿದ್ದು ಅದನ್ನು ಬಹಿರಂಗಪಡಿಸಲು ಸಿದ್ದ, ದೇವರಲ್ಲಿ ಆಣೆ ಮಾಡಲು ಸಿದ್ದ, ಅವರು ದಾಖಲೆ ಇಟ್ಟಿಕೊಂಡು ನಮ್ಮ ವಿರುದ್ಧ ಮಾತನಾಡಬೇಕು, ಕೇವಲ ಹೇಳಿಕೆ ನೀಡಿದರೆ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ. ನನ್ನನು ಒಕ್ಕಲಿಗೆ ಬೋರ್ಡ್ ಕಮಿಟಿಯಲ್ಲಿ ಅಲ್ಲದೆ ನಿರ್ದೇಶಕರ ಸಮಾಕ್ಷಮದಲ್ಲಿ ನನ್ನನ್ನು ಬಹು ಮತದ ಆಧಾರದ ಮೇಲೆ ಅಧ್ಯಕ್ಷನ್ನಾಗಿ ಆಯ್ಕೆ ಮಾಡಿದ್ದಾರೆ.

ಒಕ್ಕಲಿಗ ಸಂಘದ ಕಾರ್ಯದರ್ಶಿ ಸುರೇಶ ಮಾತನಾಡಿ, ೧೩ ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡಿದ್ದ ಅಲ್ಲದೆ ಅಧ್ಯಕ್ಷರ ವೈ .ಎನ್. ರುದ್ರೇಶಗೌಡರ ಆಡಳಿತದಲ್ಲಿ ಯಾವುದೇ ಲೆಕ್ಕ ಪುಸ್ತಕದ ದಾಖಲೆಗಳಿಲ್ಲ, ಅಲ್ಲದೆ ದಾನಿಗಳು ನೀಡಿದ ಹಣಕ್ಕೂ ರಸೀದಿಯಲ್ಲಿ ಇರುವ ಹಣಕ್ಕೂ ಸಂಬಂಧವೆ ಇಲ್ಲ, ಅವರ ಕಾಲದಲ್ಲಿ ನಡೆದಿರುವ ಅವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ, ನಾವು ಪ್ರಾಮಾಣಿಕ ಆಡಳಿತ ನೀಡಿದ್ದವೇ ಎಂದು ಹೇಳಿದರು. ಗೋಷ್ಠಿಯಲ್ಲಿ ಒಕ್ಕಲಿಗ ಸಂಘದ ಉಪಾಧ್ಯಕ್ಷ ಜಿ. ಕೆ. ಕುಮಾರ ಇದ್ದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *