ಸಕಲೇಶಪುರ: ಶಿಸ್ತಿಗೆ ಹೆಸರಾದ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಪಕ್ಷದ ಕಚೇರಿಯೊಳಗೆ ಗುಂಡು-ತುಂಡು ಪಾರ್ಟಿ ಮಾಡಿರೋದು ಸದ್ಯ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಸಕಲೇಶಪುರ ಕ್ಷೇತ್ರದ ಉಚ್ಚಂಗಿ ಹಾಗೂ ವಣಗೂರು ಗ್ರಾಮಪಂಚಾಯ್ತಿ ಚುಣಾವಣೆಯ ಮತ ಎಣಿಕೆ ನೆನ್ನೆ ನಡೆದು ಎರಡು ಕಡೆ ಬಿಜೆಪಿ ಪರಾಭವ ಹೊಂದಿದ್ದು ನಂತರ ಸಂಜೆ ಪಕ್ಷದವರೊಂದಿಗೆ ಪಕ್ಷದ ಅಧಿಕೃತ ಕಛೇರಿಯಲ್ಲಿ ಸಕಲೇಶಪುರ ಮಂಡಲ ಅಧ್ಯಕ್ಷ ಮಂಜುನಾಥ ಸಾಂಗ್ವಿ, ತಾಲೂಕು ಪ್ರಧಾನ ಕಾರ್ಯದರ್ಶಿ ಸಂದೇಶ, ಹಿಂದುಳಿದ ವರ್ಗದ ಜಿಲ್ಲಾ ಅಧ್ಯಕ್ಷ ಮಣಿಕಂಠ, ಹಾಸನ ಬಿಜೆಪಿ ಮುಖಂಡ ದಯಾ, ಸಕಲೇಶಪುರ ತಾಲೂಕು ಬಗರ್-ಹುಕಮ್ ಸದಸ್ಯ ರಾಜಕುಮಾರ್.ಡಿ ಇತರರು ಸೇರಿ ಗುಂಡು ತುಂಡಿನ ಪಾರ್ಟಿ ಮಾಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ತಕ್ಷಣ ಇವರನ್ನ ಪಕ್ಷದಿಂದ ವಜಾಗೊಳಿಸಬೇಕು ಎಂದು ಸಕಲೇಶಪುರ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.