News Karnataka
Saturday, June 10 2023
ರಾಜಕೀಯ

ಜೆಡಿಎಸ್ ಕೈಗೊಂಬೆಯಾಗಿರುವ ತಹಶೀಲ್ದಾರ: ಬಿಜೆಪಿ ರವಿ ಆರೋಪ

Sravanabelagola Mandal BJP President DN Ravi has alleged that Channarayapatna Taluk Officer Govindaraj is working as JDS says.
Photo Credit : Bharath

ಚನ್ನರಾಯಪಟ್ಟಣ: ತಾಲೂಕಿನ ದಂಡಾಧಿಕಾರಿ ಗೋವಿಂದರಾಜು ಅವರು ಜೆಡಿಎಸ್ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಶ್ರವಣಬೆಳಗೊಳ ಮಂಡಲ ಬಿಜೆಪಿ ಅಧ್ಯಕ್ಷ ಡಿ.ಎಂ. ರವಿ ಆರೋಪಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರವಿ, ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಸದಸ್ಯರನ್ನು ತಾಲೂಕು ದಂಡಾಧಿಕಾರಿ ಅವರು ಸಭೆಗೆ ಕರೆಯದೆ ಶಾಸಕರು ಹೇಳಿದ ಹಾಗೆ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಮಂಜೂರಾತಿಗೆ ಅರ್ಜಿ ಹಾಕದ ಕಬ್ಬಳಿ ಗ್ರಾಮದ ಶ್ರೀನಿವಾಸ್ ಎಂಬುವರಿಗೆ ಮೂರು ಎಕರೆ ೧೦ ಗುಂಟೆ ಮಂಜೂರು ಮಾಡಿದ್ದಾರೆ. ಶ್ರೀನಿವಾಸ್ ಬೆಂಗಳೂರಿನಲ್ಲಿದ್ದರೂ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದರು.

ಮಂಚೇನಹಳ್ಳಿ ಗ್ರಾಮದಲ್ಲಿ ಕೆರೆ ಒತ್ತುವರಿ ಜಾಗವನ್ನು ಹೋರಿಗೌಡ ಮತ್ತು ಲೋಕೇಶ್ ಎಂಬುವರಿಗೆ ೬ ಎಕರೆ ಮಂಜೂರು ಮಾಡಿದ್ದಾರೆ. ಬಿ ಹೊನ್ನೇನಹಳ್ಳಿ ಗ್ರಾಮದಲ್ಲಿ ಎರಡು ಎಕರೆ ಸರಕಾರಿ ಜಾಗವನ್ನು ಬಸ್ ಕಂಡಕ್ಟರ್‌ಗೆ ಮಂಜೂರು ಮಾಡಿದ್ದಾರೆ. ಈ ಬಗ್ಗೆ ಆರು ತಿಂಗಳ ಹಿಂದೆಯೇ ಉಪ ನೊಂದಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದರು.

ಭೂ ಮಂಜೂರಾತಿ ಸಮಿತಿಯ ಸದಸ್ಯರಾದ ನವಿಲೆಹೊಸೂರು ಬಸವರಾಜ, ಛಾಯಾಕೃಷ್ಣ ಹಾಜರಿದ್ದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *