ಹಾಸನ: ಈಗಿನ ರಾಜಕೀಯ ಹೋರಾಟದಲ್ಲಿ ಹಣ, ಜಾತಿ ಬಲ, ಕುತಂತ್ರದ ವಿರುದ್ಧವಾಗಿ ಡಾ| ಅಂಬೇಡ್ಕರ್ ಸಂವಿಧಾನದ ಅಡಿ “ಆದರ್ಶ ಸಂಸದ” ಎಂಬ ಘೋಷ ವಾಕ್ಯದೊಡನೆ ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದಾಗಿ ಸುರೇಶ್ ಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಪ್ರಾಮಾಣಿಕ ಜನಪ್ರತಿನಿಧಿ ಜನರ ಸೇವೆಯನ್ನು ಮಾಡಲು ಆಗುತ್ತಿಲ್ಲ ಇಲ್ಲಿನ ವ್ಯವಸ್ಥೆಯನ್ನು ಕಂಡು ಚುನಾವಣೆ ಸ್ಪರ್ಧೆಗೆ ಹಿಂಜರಿಯುತ್ತಿದ್ದಾರೆ. ಆದ್ದರಿಂದ ನಿರ್ದಿಷ್ಟ ತತ್ವದ ಅಡಿಯಲ್ಲಿ ಮುಂದಿನ ಹಾಸನ ಲೋಕಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದೇನೆ ಎಂದರು.
ಈ ಚುನಾವಣೆಯಲ್ಲಿ ಸ್ಪರ್ಧಿ ಸಂದರ್ಭದಲ್ಲಿ ರಾಜಕೀಯ ಸಿದ್ಧಾಂತದಲ್ಲಿ ಹುಟ್ಟು ಹೋರಾಟಗಾರರಾದ ಎಚ್ ಡಿ ದೇವೇಗೌಡರು, ನಾ ಖಾವೂಂಗ ನಾ ಖಾನೆ ದೂಂಗಾ ಎಂಬ ತತ್ವದಲ್ಲಿ ಆಡಳಿತ ಮಾಡುತ್ತಿರುವ ದೇಶದ ಪ್ರಧಾನಿ ನರೇಂದ್ರ ಮೋದಿ, ಖಡಕ್ ಆಡಳಿತ ಹಿಂದುತ್ವವಾದಿ ಯೋಗಿ ಆದಿತ್ಯನಾಥ್ ಅವರ ಆಡಳಿತ ವೈಖರಿ, ಸಾಮಾನ್ಯ ಪ್ರಜೆಗೆ ಅಧಿಕಾರ ಎಂಬ ನಿಯಮದಡಿ ರಾಜಕೀಯಕ್ಕೆ ಬಂದಿರುವ ಚಿತ್ರನಟ ಉಪೇಂದ್ರ ಅವರ ಆದರ್ಶಗಳ ತಳಹದಿಯಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಹೇಳಿದರು.
ಮುಂದಿನ ಒಂದು ವರ್ಷ ಈ ಆದರ್ಶದಲ್ಲಿ ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ತೆರಳಿ ಜನರ ಗಮನ ಸೆಳೆಯಲಾಗುವುದು ಎಂದು ತಿಳಿಸಿದ ಅವರು ಕಾರ್ಕಳದಲ್ಲಿ ಪ್ರಾಮಾಣಿಕ ಮುತಾಲಿಕ್ ವಿರುದ್ಧ ಹಿಂದುತ್ವ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿದ ಸುನಿಲ್ ಕುಮಾರ್ ಗೆಲುವು ನನ್ನ ಅಸಮಾಧಾನ ಈ ತೀರ್ಮಾನಕ್ಕೆ ಕಾರಣ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮೋಹನ್ ಕುಮಾರ್ ಇದ್ದರು.