ಅರಸೀಕೆರೆ: ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂದು ಗುರುತಿಸಿಕೊಂಡಿದ್ದ ಎನ್.ಆರ್.ಸಂತೋಷ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಬಿಜೆಪಿ ಅಭ್ಯರ್ಥಿಯಾಗಲು ಸಿದ್ದೇಶ್ ನಾಗೇಂದ್ರ ಅವರಿಗೆ ಬಿಜೆಪಿ ಉನ್ನತ ಮಟ್ಟದ ನಾಯಕರು ಸೂಚನೆ ರವಾನಿಸಿದ್ದಾರೆನ್ನಲಾಗುತ್ತಿದೆ.
ಸಿದ್ದೇಶ್ ಅವರಿಗೆ ಒಂದು ವೇಳೆ ಬಿಜೆಪಿ ಅರಸೀಕೆರೆ ಟಿಕೆಟ್ ನೀಡಿದರೆ ಎನ್.ಆರ್. ಸಂತೋಷ ಜೆಡಿಎಸ್‌ನತ್ತ ಮುಖ ಮಾಡುವುದು ಶತಸಿದ್ಧವೆಂದು ಬಣ್ಣಿಸಲಾಗಿದ್ದು, ಜೆಡಿಎಸ್ ಹಾಲಿ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡಿಕೊಂಡಿರುವ ಬಾಣಾವರ ಅಶೋಕ ಅವರನ್ನು ಸಂತೋಷ ಮನವೊಲಿಕೆಯಲ್ಲಿ ತೊಡಗಿದ್ದಾರೆನ್ನಲಾಗಿದೆ.
ಒಟ್ಟಾರೆ ಈ ಭಾರಿ 2023ರ ವಿಧಾನ ಸಭಾ ಚುನಾವಣೆಯಲ್ಲಿ ಕೆ.ಎಂ.ಶಿವಲಿಂಗೇಗೌಡ ಎಂಬ ಬ್ರಹ್ಮಾಸ್ತ್ರವನ್ನು ಎದುರಿಸಲು ಯಾರ್ಯಾರು ಯಾವ ಯಾವ ಪಕ್ಷ ಸೇರಲಿದ್ದಾರೆಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.