ಹಾಸನ: ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಜನಸಂಖ್ಯೆಯ ಹೊಂದಿರುವ ಸಮುದಾಯವೆಂದು ಗುರುತಿಸಿರುವ ಮುಸ್ಲಿಂ ಅಲ್ಪಸಂಖ್ಯಾತರಿಗೆ ಹಿಂದುಳಿದ ವರ್ಗಗಳ ಅಡಿ ೪% ಮೀಸಲಾತಿಯನ್ನು ಏಕಾಏಕಿ ರಾಜಕೀಯ ದುರುದ್ದೇಶದಿಂದ ಬಿಜೆಪಿ ಸರ್ಕಾರ ರದ್ದುಪಡಿಸಿರುವುದನ್ನು ಖಂಡಿಸುತ್ತೇವೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಸಮ್ಮದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಮೀಸಲಾತಿಯಂತೆ ೨ಬಿ ಕ್ಯಾಟಗರಿಯಲ್ಲಿ ಶೇಕಡ ೪% ಮೀಸಲಾತಿಯನ್ನು ೧೯೯೫ರಿಂದಲೂ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ರಾಜಕೀಯ ದುರುದ್ದೇಶದಿಂದ ಈ ರೀತಿಯ ಕ್ರಮ ಕೈಗೊಂಡಿರುವುದು ಸರಿಯಲ್ಲ ಎಂದರು. ರಾಜ್ಯದಲ್ಲಿ ಜಸ್ಟಿಸ್ ನಾಗನಗೌಡ ವೆಂಕಟಸ್ವಾಮಿ ಆಯೋಗ ಹಾಗೂ ೧೯೯೦ರಲ್ಲಿ ಜಸ್ಟಿಸ್ ಚಿನ್ನಪ್ಪ ರೆಡ್ಡಿ ಆಯೋಗ ವರದಿಗಳ ಆಧಾರದಲ್ಲಿ ಮುಖ್ಯಮಂತ್ರಿ ವಿರಪ್ಪ ಮೋಯಿಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರಿಗೆ ೨ಬಿ ಕೆಟಗರಿಯಲ್ಲಿ ೪% ಮಿಸಲಾತಿಯನ್ನು ಶೈಕ್ಷಣಿಕವಾಗಿ ಹಾಗೂ ಸರ್ಕಾರಿ ಉದ್ಯೋಗದಲ್ಲಿ ನೀಡಲು ತೀರ್ಮಾನಿಸಲಾಗಿತ್ತು ಆದರೆ ಇಂದಿನ ಸರ್ಕಾರ ಮೀಸಲಾತಿ ರದ್ಧತಿ ದ್ವೇಷದಿಂದ ಕೂಡಿದ್ದು, ಮುಸ್ಲಿಂ ಸಮುದಾಯ ಬಿಜೆಪಿ ಪಕ್ಷಕ್ಕೆ ಮತದಾನ ಮಾಡುವುದಿಲ್ಲ ಎಂಬ ಏಕೈಕ ಕಾರಣದಿಂದ ಮೀಸಲಾತಿಯನ್ನು ರದ್ದುಗೊಳಿಸಿದೆ ಎಂದು ಕಿಡಿಕಾರಿದರು.
ಒಂದು ಸಮುದಾಯದ ಮೀಸಲಾತಿಯನ್ನು ರದ್ದುಗೊಳಿಸುವಂತೆ ಯಾವುದೇ ಕಾರಣಗಳು ಹಾಗೂ ವರದಿಗಳು ಸರ್ಕಾರದ ಮುಂದೆ ಇರಲಿಲ್ಲ ಆದರೂ ಇಂತಹ ಕ್ರಮ ಖಂಡನೆಯಾಗಿದ್ದು ಮುಸ್ಲಿಂ ಸಮುದಾಯ ತಾಳ್ಮೆಯಿಂದ ವರ್ತಿಸುವ ನಿಟ್ಟಿನಲ್ಲಿ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದು ಇತರ ಯಾವುದೇ ಅತಿರೇಕದ ನಿರ್ಣಯಗಳನ್ನು ಕೈಗೊಳ್ಳುವುದಿಲ್ಲ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಮ್ಮದ್ ಆರೀಫ್, ಸಲೀಂ, ಖಾಲಿದ್ ಮನ್ಸುರ್, ಮೊಹಮ್ಮದ್ ಇದ್ದರು.