News Karnataka
Saturday, June 10 2023
ರಾಜಕೀಯ

ಬಿಜೆಪಿ ಸರ್ಕಾರದ ವಿರುದ್ಧ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ

Ranadeep Singh Surjewala inaugurated the meeting of Congress leaders and workers held at Hassan and distributed guarantee cards.
Photo Credit : Bharath

ಹಾಸನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರವಾಸದ ಸಮಯದಲ್ಲಿ ಅವರನ್ನು 40% ಸರ್ಕಾರ ಎಂದು ಸ್ವಾಗತ ಮಾಡುತ್ತಿದ್ದು, ಹೆಸರುವಾಸಿ ಆಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದರು.

ನಗರದ ಹೊರ ವಲಯದ ಖಾಸಗಿ ರೆಸಾರ್ಟ್‌ ಒಂದರಲ್ಲಿ ಸಂಜೆ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಸಭೆ ಉದ್ಘಾಟಿಸಿ ಹಾಗೂ ಗ್ಯಾರಂಟಿ ಕಾರ್ಡ್ ವಿತರಿಸಿ ಮಾತನಾಡಿದ ಅವರು, ನಾವು ಗ್ಯಾರಂಟಿ ಕಾರ್ಡ್ ಕೊಟ್ಟಿದ್ದೆವೆ. ಇದನ್ನು ದೇಶದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಪಕ್ಷಗಳ ಸರ್ಕಾರ ಅನುಷ್ಟಾನಕ್ಕೆ ತರಲು ಪ್ರಯತ್ನ ಮಾಡುತ್ತಾರೆ. ಎಲ್ಲೆ ಹೋದರು ಕರ್ನಾಟಕ 40% ಕಮಿಷನ್‌ಗೆ ಹೆಸರುವಾಸಿಯಾಗಿದೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರವಾಸದ ಸಮಯದಲ್ಲಿ ಅವರನ್ನು 40% ಸರ್ಕಾರ ಎಂದು ಸ್ವಾಗತ ಮಾಡುತ್ತಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರಗೆ ಬಸವರಾಜ ಬೊಮ್ಮಾಯಿ ಬಗ್ಗೆ 40% ಸಿಎಂ ಎಂದು ಕರೆಯುತ್ತಾರೆ. ಇದು ಕಾಂಗ್ರೆಸ್ ಪಕ್ಷ ಆರೋಪ ಮಾಡುತ್ತಿಲ್ಲ. 50 ಸಾವಿರ ಗುತ್ತಿಗೆದಾರರ ಸಂಘ ಈ ಬಗ್ಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ 8 ಬಾರಿ ಬಂದರೂ, ಈ ಭ್ರಷ್ಟಾಚಾರದ ಆರೋಪದ ಬಗ್ಗೆ ಉತ್ತರ ನೀಡಿರುವುದಿಲ್ಲ ಎಂದು ಆರೋಪಿಸಿದರು.

ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ್ ಕಮಿಷನ್ ಕೊಡದೆ ಆತ್ಮಹತ್ಯೆ ಮಾಡಿಕೊಂಡರು. ಸಂತೋಷ ಪಾಟೀಲ್ ಮನೆಗೆ ಪ್ರಧಾನಿ ನರೇಂದ್ರ ಮೋದಿ ಹೋಗಿ ಸಾಂತ್ವನ ಹೇಳಲಿಲ್ಲ. ಆದರೇ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ, ಸತೀಶ್ ಜಾರಕಿಹೋಳಿ ಅವರ ಕುಟುಂಬ, ಅವರ ತಂದೆ, ಹೆಂಡತಿ, ಮಕ್ಕಳನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಬಂದಿದ್ದಾರೆ. ಅವರ ಕುಟುಂಬ ನೋವಿನಿಂದ ನನ್ನ ಮಗ ಬಿಜೆಪಿಗೆ ಮತ ಹಾಕಿ ಹಾಕಿಸುತ್ತಿದ್ದ ಅವನಿಗೆ ಎಂತಹ ಪರಿಸ್ಥಿತಿ ತಂದರು? ಅಂತ ಹೇಳಿದೆ. ತುಮಕೂರಿನಲ್ಲಿ ರಾಜೇಂದ್ರ ಎಂಬಾತ ಆತ್ಮಹತ್ಯೆ ಮಾಡಿಕೊಂಡರು. ಅಲ್ಲಿಗೆ ಕೂಡ ಬಿಜೆಪಿ ನಾಯಕರು ಹೊಗಲಿಲ್ಲ. ಆ ಸಮಯದಲ್ಲಿ ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ, ರಾಮಲಿಂಗರೆಡ್ಡಿ ಇವರುಗಳು ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಭೇಟಿ ನೀಡಿದ್ದರು.

ಬಿಜೆಪಿ ಶಾಸಕರು ಲಂಚ ತೆಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್ ಭ್ರಷ್ಟಾಚಾರದಲ್ಲಿ ಮುಳುಗಿಸಿದ್ದಾರೆ. ನಾವು ಟಿವಿಯಲ್ಲಿ ನೋಡಿದ್ದೆವೆ. ಬಿಜೆಪಿ ಶಾಸಕ ಅವನ ಮನೆಯಲ್ಲಿ 6 ಕೋಟಿ ನಗದು ಹಣ ಸಿಕ್ಕಿದೆ. ಕೆ.ಆರ್.ಪುರಂ ಸರ್ಕಲ್ ಇನ್ಸ್ಪೆಕ್ಟರ್ ಸೂಸೈಡ್ ಮಾಡಿಕೊಂಡರು ಅವರ ಪರಿಸ್ಥಿತಿ ಇದೆ ತರಹ ಒಂದು ವರ್ಗಾವಣೆಗೆ ಲಕ್ಷಗಟ್ಟಲೆ ಹಣ ನೀಡಬೇಕು. ರೂಪ್ಸ ಸಂಘಟನೆ ಕರ್ನಾಟಕದ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದರೂ, ಲಿಂಗೇಶ್ವರ ಸ್ವಾಮೀಜಿ ಆರೋಪ ಮಾಡಿದರೂ, ಪ್ರಧಾನಿ ನರೇಂದ್ರ ಮೋದಿ ಯಾವುದೇ ಕ್ರಮ ಜರುಗಿಸಿಲ್ಲ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ 80 ಲಕ್ಷಕ್ಕೆ ಮಾರಾಟ ಆಗಿದ್ದು, ಒಬ್ಬ ಎಡಿಜಿಪಿ ಜೈಲಿನಲ್ಲಿ ಇದ್ದಾರೆ. ಬರಿ ಎಡಿಜಿಪಿಗೆ ಹಣ ಹೋಗಿಲ್ಲ ಅವರ ಮೇಲೆ ಇದ್ದಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಗೃಹ ಸಚಿವ ಅರಂಗ ಜ್ಞಾನೇಂದ್ರ ಅವರಿಗೆ ಹಣ ಹೊಗಿದೆ. ಇವರನ್ನು ಯಾರು ತನಿಖೆ ಮಾಡುತ್ತಾರೆ. ಸಹಾಯಕ ಪ್ರಾಧ್ಯಾಪಕರು, ಎಇಜೆಇ ಅಸಿಸ್ಟೆಂಟ್ ರಿಜಿಸ್ಟರ್ ಹುದ್ದೆ ಮಾರಾಟಕ್ಕೆ ಇಟ್ಟಿದ್ದಾರೆ. ಕೆಎಂಎಫ್ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರು ಹಾಗೂ ಹಾಸನ ಕಾಂಗ್ರೆಸ್ ಉಸ್ತುವಾರಿ ಡಿ.ಕೆ.ಸುರೇಶ ಮಾತನಾಡಿ, ಹಾಸನ ಜಿಲ್ಲೆಯ ಪ್ರಜಾಧ್ವನಿ ಯಾತ್ರೆ ಯಶಸ್ವಿಯಾಗಿದ್ದು, ಜಿಲ್ಲೆಯ ಎರಡು ವಿಧಾನಸಭೆ ಕ್ಷೇತ್ರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಬಾಕಿ ಇದೆ. ಅತಿ ಶೀಘ್ರದಲ್ಲಿ ಅರಕಲಗೂಡು ಮತ್ತು ಅರಸೀಕೆರೆ ತಾಲೂಕಿನಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ನಡೆಸುತ್ತೆವೆ. ಕಾಂಗ್ರೆಸ್ ಪಕ್ಷ ಕೇಂದ್ರ ಹಾಗೂ ರಾಜ್ಯದಲ್ಲಿ, ಅಧಿಕಾರದಲ್ಲಿ ಇಲ್ಲದಿದ್ದರೂ ಜನಪರ ಕೆಲಸ ಮತ್ತು ಹೋರಟಗಳನ್ನು ನಿರಂತರವಾಗಿ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಮಾಡಿದ್ದೆವೆ. ಕೋವಿಡ್ ಸಮಯದಲ್ಲಿ ಜನತಾದಳ ಕಾರ್ಯಕರ್ತರು ಮನೆಯಲ್ಲಿ ಕುಳಿತಿದ್ದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ನಾವು ಬೀದಿಯಲ್ಲಿ ನಿಂತು ಜನರಿಗೆ ಸಹಾಯ ಮಾಡಿದ್ದೆವೆ ಮತ್ತು ಬಡವರಿಗೆ ಆಹಾರದ ಕಿಟ್, ಆರೋಗ್ಯ ಹಸ್ತ ಕಾರ್ಯಕ್ರಮ ಮಾಡಿದ್ದೆವೆ ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಮಧು ಬಂಗಾರಪ್ಪ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಇ.ಹೆಚ್. ಲಕ್ಷ್ಮಣ, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ವಕ್ತಾರ ದೇವರಾಜೇಗೌಡ, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗೊರೂರು ರಂಜಿತ್, ಅಶೋಕ್ ಹಾಗೂ ಹಾಸನ ಕ್ಷೇತ್ರದ ಆಕಾಂಕ್ಷಿಗಳು ಉಪಸ್ಥಿತರಿದ್ದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *