News Karnataka
ರಾಜಕೀಯ

14 ಸಾವಿರಕ್ಕೂ ಹೆಚ್ಚು ಮತ ನೀಡಿ ಜನ ಆಶೀರ್ವದಿಸಿದ್ದಾರೆ: ಪ್ರೀತಂ ಗೌಡ

Former MLA Pritam Gowda said that in the last election, people blessed by voting 63,000, this time they voted more than 14 thousand.
Photo Credit : Bharath

ಹಾಸನ: ಕಳೆದ ಚುನಾವಣೆಯಲ್ಲಿ 63 ಸಾವಿರ ಮತ ಕೊಟ್ಟು ಆಶೀರ್ವಾದ ಮಾಡಿದ್ದು, ಈ ಭಾರಿ ಕಳೆದ ಬಾರಿಗಿಂತ ಹದಿನಾಲ್ಕು ಸಾವಿರ ಹೆಚ್ಚು ಮತ ಕೊಟ್ಟು ಜನ ಆಶೀರ್ವಾದ ಮಾಡಿದ್ದಾರೆ ಎಂದು ಮಾಜಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ನನ್ನ ಅಭಿವೃದ್ಧಿ ಕೆಲಸ, ಮಾಡ್ತಿರುವ ಸೇವೆ ಗುರುತಿಸಿ ಜನ ಬಹಳ ಹುಮ್ಮಸ್ಸಿನಿಂದ ಆಶೀರ್ವಾದ ಮಾಡಿದ್ದಾರೆ, ಚುನಾವಣೆ ಫಲಿತಾಂಶ ವಿರುದ್ಧವಾಗಿ ಬಂದಿರಬಹುದು ಆದರೆ ಜನರ ಆಶೀರ್ವಾದ ಪ್ರೀತಂಗೌಡ ಪರ ಇದೆ ಎನ್ನುವುದಕ್ಕೆ ಶೇ.25 ಹೆಚ್ಚು ಮತ ನೀಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ನನಗೆ 77,300 ಕ್ಕೂ ಹೆಚ್ಚು ಮತ ನೀಡಿದ ಮತದಾರರಿಗೆ ಧನ್ಯವಾದ ತಿಳಿಸುತ್ತೇನೆ, ಬಿಜೆಪಿ ಕಾರ್ಯಕರ್ತ ದೇವರುಗಳಿಗೆ ಅಭಾರಿಯಾಗಿದ್ದೇನೆ, ನನ್ನ ರಾಜಕೀಯ ಜೀವನದ ಕಷ್ಟಕರ ಸಮಯದಲ್ಲಿ ನನಗೆ ಬೆಂಬಲ ಕೊಟ್ಟಿದ್ದಾರೆ ಎಂದರು.

ಸಂಘ ಪರಿವಾರದ ಎಲ್ಲಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರ ಭಾವನೆಗೆ ಪೂರಕವಾಗುವ ರೀತಿಯಲ್ಲಿ ಸಹಕಾರ ಕೊಟ್ಟಿದ್ದಾರೆ, ಕಳೆದ ಬಾರಿ 13 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದೆ, ಈ ಭಾರಿ ಅದರ ಅರ್ಧದಷ್ಟು ಮತಗಳಿಂದ ವಂಚಿತನಾಗಿದ್ದೇನೆ. ಯಾವುದೇ ಕಾರಣದಿಂದಲೂ ನನಗೆ ಸೋಲಾಗಿದೆ ಎಂದು ಭಾವಿಸುವುದಿಲ್ಲ, ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶೇ.15ರಷ್ಟು ಮತ ಪಡೆದಿದ್ದಾರೆ, 224 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅತಿ ಕಡಿಮೆ ಶೇಕಡಾವಾರು ಮತ ಪಡೆದಿರುವುದು, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 4 ಸಾವಿರ ಮತ ಪಡೆದ ಪರಿಣಾಮ ಈ ಬಾರಿ ತನಗೆ ಸೋಲಾಗಿದೆ ಎಂದರು.

ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಒಂದು ವರ್ಗ, ಆ ಪಕ್ಷದ ಅಭ್ಯರ್ಥಿ 35ರಿಂದ 40 ಸಾವಿರ ಓಟು ತೆಗೆದುಕೊಳ್ಳುತ್ತಿದ್ದರು, ಆದರೆ ಈ ಭಾರಿ ಚುನಾವಣೆಯಲ್ಲಿ ಕೇವಲ ನಾಲ್ಕು ಸಾವಿರ ಮತ ಪಡೆದಿದ್ದಾರೆ. ಪ್ರೀತಂಗೌಡ ಯಾರನ್ನು ಭಯಪಡಿಸುವ ಕೆಲಸಕ್ಕೆ ಕೈ ಹಾಕಿಲ್ಲ, ಮುಸ್ಲಿಂ ಭಾಂದವರನ್ನು ಅತಿ ಹೆಚ್ಚು ಪ್ರೀತಿಸುವ, ಗೌರವ ಕೊಡುವ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿ ಇದ್ದರೆ ಅದು ಪ್ರೀತಂಗೌಡ, ಅವರ ಮೇಲೆ ಆಕ್ರೋಶ ಹೊರ ಹಾಕುವ ಅವಶ್ಯಕತೆ ನನಗಿಲ್ಲ ಎಂದರು.

ರಾಜ್ಯದಲ್ಲಿ 135 ಸ್ಥಾನ ಪಡೆದ ಕಾಂಗ್ರೆಸ್ ಪಕ್ಷಕ್ಕೆ ಹಾಸನದಲ್ಲಿ ಅತೀ ಕಡಿಮೆ ಮತಗಳನ್ನು ಪಡೆದಿರುವ ಕ್ಷೇತ್ರ ಹಾಸನದಲ್ಲೀ, ಕಳೆದ ಭಾರಿ ಕಾಂಗ್ರೆಸ್‌ಗೆ ಓಟು ಹಾಕಿದಂತಹ ಒಂದು ವರ್ಗ ಜನತಾ ದಳಕ್ಕೆ ಮತ ಹಾಕಿದ್ದಾರೆ ಅದರಲ್ಲಿ ವ್ಯತ್ಯಾಸ ಇದ್ದರೆ ಹೇಳಿ ತಿದ್ದಿಕೊಳ್ಳುವ ಕೆಲಸ ಮಾಡ್ತಿನಿ ಎಂದರು.

ನಾನು ಒಂದು ವರ್ಗ ಅಂತ ಹೇಳಿದ್ದೇನೆ, ಒಂದು ಸಮುದಾಯ ಅಂತ ಹೇಳಿಲ್ಲ, ಒಂದು ವರ್ಗದ ಜನ ಕಳೆದ ಭಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದರು, ಈಗ ಜೆಡಿಎಸ್ ಪಕ್ಷಕ್ಕೆ ಹಾಕಿದ್ದಾರೆ, ಆ ವರ್ಗದ ಮತಗಳು ನನಗೆ ಬೇಕಿಲ್ಲ, ಅದರಲ್ಲೇನು ಮಡಿವಂತಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ನೂತನ ಶಾಸಕರು ಇನ್ನಷ್ಟು ಕೆಲಸ ಮಾಡಲಿ
ಪ್ರೀತಂಗೌಡ ಯಾವ ರೀತಿ ಕೆಲಸ ಮಾಡಿದ್ದಾನೆ ಅದನ್ನು ನೂತನ ಶಾಸಕರು ಮುಂದುವರಿಸಿಕೊಂಡು ಹೋಗಲಿ ಎಂದ ಅವರು, ಯುವಕರು, ವಿದ್ಯಾವಂತರಿದ್ದಾರೆ. ಇನ್ನೂ ಹೆಚ್ಚು ಕೆಲಸ ಮಾಡುವ ನಿರೀಕ್ಷೆ ಇದೆ, ನಾವು ಮಾಡಿರುವ ಕೆಲಸಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಇನ್ನಷ್ಟು ಕೆಲಸ ಮಾಡಲಿ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ನೂತನ ಶಾಸಕರು ಮಾಡಲಿ ಎಂದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *