ಹಾಸನ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪದಲ್ಲಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ನಾಯಕರುಗಳು ಆರೋಪ ಪ್ರತ್ಯಾರೋಪಗಳನ್ನು ನಡೆಸುತಿದ್ದಾರೆ. ಅದರಂತೆ ಆಶ್ವಾಸನೆಗಳು ಸಹ ಕೊಡುತ್ತಿದ್ದಾರೆ. ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಯನ್ನು ಜಾರಿ ಮಾಡುವುದಾಗಿ ಜೆಡಿಎಸ್ ಪಕ್ಷದ ಪರಮೋಚ್ಚನಾಯಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಾಜ್ಯಾಧ್ಯಂತ ಪ್ರವಾಸ ಮಾಡುವಾಗ ಬಹಿರಂಗ ಸಭೆಯಲ್ಲಿ ರಾಜ್ಯದ ಜನತೆಗೆ ಆಶ್ವಾಸನೆಯನ್ನು ನೀಡುತ್ತಿದ್ದಾರೆ.
ಅದರಂತೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಅಕ್ಕಿ ಉಚಿತವಾಗಿ ನೀಡುತ್ತೇವೆ. ಮನೆಯ ಯಜಮಾನಿಗೆ ಪ್ರತೀ ತಿಂಗಳು ರೂ. ೨೦೦೦/-ಹಣ ಅವರ ಖಾತೆಗೆ ಜಮಾ ಮಾಡುತ್ತೇವೆ, ಮತ್ತು ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ರಾಜ್ಯದ ಜನತೆಗೆ ಆಶ್ವಾಸನೆಯನ್ನು ನೀಡುತ್ತಿದ್ದಾರೆ.
ಅದರಂತೆ ಹಾಸನ ನಗರದ ಹಲವು ಬಡಾವಣೆಗಳಲ್ಲಿ ರಾಜಕೀಯ ಪಕ್ಷದ ಕಾರ್ಯಕರ್ತರು ಎಂದು ಹೇಳಿಕೊಳ್ಳುವ ಕೆಲವರು ಪ್ರತಿ ಮನೆಗೆ ತೆರಳಿ ವಿದ್ಯುತ್ ಬಿಲ್ಲನ್ನು ಸಂಗ್ರಹಿಸುತ್ತಿರುವುದು ಸುದ್ದಿ ಲಭಿಸಿದೆ. ಇದು ಸಾರ್ವಜನಿಕರ ಭಾವನೆಗಳ ಜೊತೆ ಚಲ್ಲಾಟವಾಡುವ ಕೃತ್ಯವಾಗಿದೆ ಎಂದು ರಾಜಕೀಯ ಪಂಡಿತರ ವಾದವಾಗಿದೆ. ಇವರು ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಭರವಸೆ ನೀಡಲಿ ಅದು ಬಿಟ್ಟು ವಿದ್ಯುತ್ ಹಳೇ ಬಿಲ್ಲನ್ನು ಸಂಗ್ರಹಿಸುತ್ತಿರುವುದು ಎಷ್ಟು ಸರಿ. ಇದು ಮನೆಯ ಯಜಮಾನನ ಯೋಗ್ಯತೆಯನ್ನು ಪ್ರಶ್ನಿಸುವಂತಾಗಿದೆ. ಮನೆಯ ಯಜಮಾನಿಗೆ ಪ್ರತೀ ತಿಂಗಳು ರೂ. ೨೦೦೦/-ಕೊಡುತ್ತೇವೆ ಎಂದು ಭರವಸೆ ನೀಡಿ ವಿದ್ಯುತ್ ಬಿಲ್ಲನ್ನು ಕೇಳುವುದು ಎಷ್ಟು ಸರಿ?
ರಾಜಕೀಯ ಲೆಕ್ಕಾಚಾರದಲ್ಲಿ ಆಶ್ವಾಸನೆಗಳು ಸರ್ವೆಸಾಮಾನ್ಯ, ಅದಕ್ಕಾಗಿ ಮನೆಯ ಯಜಮಾನನ ಯೋಗ್ಯತೆಯನ್ನು ಅಡಮಾನ ಮಾಡುವುದು ಎಷ್ಟು ಸರಿ?