ಹಾಸನ: ಉರಿಗೌಡ-ನಂಜೇಗೌಡ ಹೆಸರಿನಲ್ಲಿ ಈ ಸಮಾಜಕ್ಕೆ ಕಳಂಕ ಬರುವ ರೀತಿಯಲ್ಲಿ ಈಗಾಗಲೇ ಸೃಷ್ಟಿ ಮಾಡಿಕೊಂಡಿದ್ದಾರೆ. ನಮ್ಮ ಸಮಾಜದವರು ಹಿಂಬದಿಯಿಂದ ಚೂರಿ ಹಾಕುವವರಲ್ಲ ನೇರವಾಗಿ ಹೋರಾಟ ಮಾಡುವಂತಹವರು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗುಡುಗಿದ್ದಾರೆ.
ಸಕಲೇಶಪುರ ಪಂಚರತ್ನ ಯಾತ್ರೆ ವೇಳೆ ಹಾಸನ ಜಿಲ್ಲೆ, ಶುಕ್ರವಾರಸಂತೆಯಲ್ಲಿ ಮಾತನಾಡಿರುವ ಅವರು ಸಚಿವ ಮುನಿರತ್ನ ಬ್ಯಾನರ್‌ನಲ್ಲಿ ಉರಿಗೌಡ, ನಂಜೇಗೌಡ ಟೈಟಲ್ ರಿಜಿಸ್ಟರ್ ಮಾಡಿರುವವರು ಸರ್ವನಾಶ ಆಗ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗೀನ ರಾಜಕಾರಣದಲ್ಲಿ ಜನತೆಯ ಸಂಪತ್ತನ್ನು ಲೂಟಿ ಮಾಡಿದಾಗ, ಜಾತಿಯ ಹೆಸರನ್ನು ಪ್ರೊಟೆಕ್ಷನ್ ತೆಗೆದುಕೊಳ್ಳಲು ಹೋದಾಗ, ಜನತೆಯ ರಕ್ಷಣೆಗೋಸ್ಕರವಾಗಿ, ಜನತೆಯ ಹಣ ಲೂಟಿ ಮಾಡುವ ವಿಷಯದಲ್ಲಿ ಜಾತಿಯ ಸ್ವಪ್ರೇಮಕ್ಕೆ ಒಳಗಾಗದೆ ಈ ನಾಡಿನ ಜನತೆಯ ಆಸ್ತಿ ಉಳಿಸಲು ನಮ್ಮ ಸಮಾಜದಲ್ಲಿ ನಾವು ರಾಜಿಗೆ ಒಳಗಾಗಲ್ಲ.
ಇದು ನಮ್ಮ ಸಮಾಜ, ಇವತ್ತು ನಾಡಿನ ಸಂಪತ್ತು. ನಾಡಿನ ಜನತೆಯ ಮುಗ್ದತನದ ದುಡಿಮೆ ಏನಿದೆ ಆ ದುಡಿಮೆಯನ್ನು ಯಾರೂ ಕಾನೂನು ಬಾಹಿರವಾಗಿ ಹಾಳು ಮಾಡಲು ಹೋಗ್ತಾರೆ ಅಂತಹ ವಿಷಯದಲ್ಲಿ ಸ್ವಜಾತಿ ಪ್ರೇಮ ಅಂತ ಹೇಳಿ ನಮ್ಮ ಸಮಾಜದಲ್ಲಿ ಯಾರಾದರೂ ಅಂತಹ ಕೆಲಸ ಮಾಡಿದ್ರು ಅದರ ವಿರುದ್ದ ಹೋರಾಟ ಮಾಡುವ ಕೆಚ್ಚೆದೆ ಇರುವ ಸಮಾಜ ಇದು.
ಅಯ್ಯೋ ನಮ್ಮವನು ಲೂಟಿ ಮಾಡಿರಲಿ ಕೊಲೆ ಮಾಡಿರಲಿ ಉಳಿಸಿಕೊಳ್ಳಬೇಕು ಎನ್ನುವ ಗುಣದಲ್ಲಿ ಬಂದ ಸಮಾಜ ಅಲ್ಲ. ಅದು ನ್ಯಾಯಕ್ಕೆ, ಧರ್ಮಕ್ಕೆ, ಸತ್ಯಕ್ಕೆ ಹೋರಾಟ ಮಾಡಿರುವ ಸಮಾಜ. ಈ ಸಮಾಜದಲ್ಲಿ ಇಲ್ಲದೇ ಇರುವ ಹೆಸರುಗಳನ್ನು ಸೃಷ್ಟಿ ಮಾಡಿ ಈ ಸಮಾಜಕ್ಕೆ ಅಗೌರವ ತರುವ ಇಂತಹ ಕೀಳು ಮಟ್ಟದ ರಾಜಕಾರಣಿಗಳ ಬಗ್ಗೆ ಜನ ಅಷ್ಟು ಸುಲಭವಾಗಿ ಬಿಡಲ್ಲ ಸರ್ವನಾಶ ಮಾಡ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.