ಅರಸೀಕೆರೆ: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಬಾಣವಾರ ಅಶೋಕ್ ಬದಲಿಗೆ ಬಿಜೆಪಿ ಟಿಕೆಟ್ ವಂಚಿತರಾಗಿ ಬಿಜೆಪಿಯಿಂದ ಹೊರ ಬಂದಿರುವ ಎನ್. ಆರ್ ಸಂತೋಷ ಜೆಡಿಎಸ್ ಅಭ್ಯರ್ಥಿಯಾಗುವುದು ಖಚಿತವೆನ್ನಲಾಗಿದೆ.
ಮಾಜಿ ಸಚಿವ ಹೆಚ್.ಡಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರ ಮನವಿ ಪುರಸ್ಕರಿಸಿರುವ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅಂತಿಮವಾಗಿ ಎನ್.ಆರ್.ಸಂತೋಷ್ ಅವರನ್ನು ಜೆಡಿಎಸ್‌ನಿಂದ ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆನ್ನಲಾಗಿದೆ.
ಕಳೆದ ರಾತ್ರಿ ಎನ್.ಆರ್ ಸಂತೋಷ್ ಅವರು ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಜೆಡಿಎಸ್‌ನಿಂದ ಅವಕಾಶ ಮಾಡಿಕೊಡುವಂತೆ ಮನವಿ ಮಾಡುವುದರೊಂದಿಗೆ ಆಶೀರ್ವಾದ ಪಡೆದಿದ್ದಾರೆ. ಈ ಕುರಿತ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅರಸೀಕೆರೆ ಜೆಡಿಎಸ್ ಟಿಕೆಟ್ ಎನ್.ಆರ್ ಸಂತೊಷ್ ಪಾಲಾಗಿದೆ ಎನ್ನಲಾಗಿದೆ.