ಬೇಲೂರು: ಪಟ್ಟಣದ 7 ಮತ್ತು ಇತರೆ ವಾರ್ಡುಗಳಿಂದ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಪಟ್ಟಣದ ಪುರಸಭೆ ಅಧ್ಯಕ್ಷರ 7ನೇ ವಾರ್ಡಿನಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಉಲ್ಲಹಳ್ಳಿ ಸುರೇಶ್ ಹಾಗೂ ಪುರಸಭೆ ನಾಮಿನಿ ಸದಸ್ಯ ಪೈಂಟ್ ರವಿ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಉಲ್ಲಹಳ್ಳಿ ಸುರೇಶ್ ಮಾತನಾಡಿ ಒಂದು ಪಕ್ಷದ ಕಪಿಮುಷ್ಠಿಯಲ್ಲಿ ಇದ್ದ ಬೇಲೂರು ತಾಲೂಕು ಜನತೆಯು ಇಂದು ಸ್ವತಂತ್ರವಾಗಿ ಬಿಜೆಪಿ ಪಕ್ಷವನ್ನು ಸೇರಲು ಮುಂದೆ ಬರುತ್ತಿರುವುದು ಸ್ವಾಗತಾರ್ಹ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹಾಗೂ ರಾಜ್ಯದ ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಅವರ ಸ್ವಚ್ಛ ಆಡಳಿತದಿಂದ ರಾಜ್ಯದ ಜನತೆ ಈ ಬಾರಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದರು.
ನಾಮಿನಿ ಸದಸ್ಯ ಪೈಂಟ್ ರವಿ ಮಾತನಾಡಿ ತಾಲೂಕು ಅಭಿವೃದ್ಧಿ ಹೊಂದಲು ದಕ್ಷ ಪ್ರಾಮಾಣಿಕ ಅಭ್ಯರ್ಥಿಯ ಅವಶ್ಯಕತೆ ಇದೆ. ವಿಶ್ವವಿಖ್ಯಾತ ಬೇಲೂರು ಪಟ್ಟಣವನ್ನು ಸೌಂದರ್ಯೀಕರಣಗೊಳಿಸಲು ಹಾಗೂ ವಾರ್ಡ್‌ಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಬಿಜೆಪಿ ಅಭ್ಯರ್ಥಿ ಎಚ್. ಕೆ. ಸುರೇಶ್ ರವರನ್ನು ಗೆಲ್ಲಿಸಲು ಎಲ್ಲರೂ ಶ್ರಮವಹಿಸಬೇಕು ಎಂದರು.
ನಾರಾಯಣ ದಬ್ಬೆ, ನಾಗರಾಜು, ಈಶ್ವರ, ರಮೇಶ, ಶ್ರೀನಿವಾಸ, ಮೋಹನ, ಪ್ರದೀಪ ಸೇರಿದಂತೆ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ಸೇರ್ಪಡೆಗೊಂಡರು.