ಹಾಸನ: ಚುನಾವಣಾ ಪ್ರಚಾರಕ್ಕಾಗಿ ನಮ್ಮ ರಾಷ್ಟ್ರದ ಹೆಮ್ಮೆಯ ಪ್ರಧಾನಿ ನರೆಂದ್ರ ಮೋದಿಯವರು ಆಗಮಿಸುತ್ತಿದ್ದು, ಈಗಾಗಲೇ ಎಲ್ಲಾ ರೀತಿಯಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಉತ್ತರ ದೆಹಲಿಯ ಸಂಸದ ರಮೇಶ್ ಬಿದಾನಿ ಹಾಗೂ ಹಾಸನ ಜಿಲ್ಲೆಯ ಚುನಾವಣಾ ಉಸ್ತುವಾರಿ ರೇಣುಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಏಪ್ರಿಲ್ 30ರಂದು ದೇಶ ಕಂಡ ಅಪ್ರತಿಮ ನಾಯಕ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೆಂದ್ರ ಮೋದಿಯವರು ಇದೇ 30 ರಂದು ಬೇಲೂರಿಗೆ ಚುನಾವಣಾ ಪ್ರಚಾರಕ್ಕಾಗಿ ಆಗಮಿಸುತ್ತಿದ್ದು, ಅಂದು ಹಾಸನ ವಿಧಾನಸಭಾ ಕ್ಷೇತ್ರದ 7 ಹಾಗೂ ಚಿಕ್ಕಮಗಳೂರು 3 ವಿಧಾನಸಭಾ ಕ್ಷೇತ್ರಗಳ ಜಂಟಿ ಸಭೆಯನ್ನು ಹಾಗೂ ಚುನಾವಣಾ ಪ್ರಚಾರ ಒಂದೇ ವೇದಿಕೆಯಲ್ಲಿ ಮಾಡಲಾಗುತ್ತಿದ್ದು, ಅದಕ್ಕಾಗಿ ಸುಮಾರು 35 ಎಕರೆ ವಿಸ್ತಾರದ ಜಾಗದಲ್ಲಿ ಎಲ್ಲಾ ರೀತಿಯಲ್ಲಿ ಪೂರ್ವ ಸಿದ್ದತೆ ಮಾಡಲಾಗುತ್ತಿದೆ. ಅಲ್ಲಿಯೇ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿದ್ದು, ಯಾವುದೇ ರೋಡ್ ಶೋ ಇರುವುದಿಲ್ಲ. ಅಲ್ಲದೇ 10 ವಿಧಾನಸಭಾ ಕ್ಷೇತ್ರಗಳ ಪರವಾಗಿ ಒಂದೇ ವೇದಿಕೆಯಲ್ಲಿ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಲಿದ್ದು, ಈ ಬಾರಿ 150 ಸೀಟ್ ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೆ ಕಮಲ ಅರಳಿಸುವ ಕೆಲಸ ಮೋದಿಯವರು ಮಾಡಲಿದ್ದಾರೆ.
ಸುಮಾರು 3ರಿಂದ 4 ಲಕ್ಷ ಅಭಿಮಾನಿಗಳು ಹಾಗೂ ಕಾರ್ಯ ಕರ್ತರು ಸೇರುವ ನಿರೀಕ್ಷೆ ಇದೆ. ಬಂದಂತ ವಾಹನಗಳಿಗೆ ಸುಮಾರು 25 ಎಕರೆಯಷ್ಟು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಕೆಂದ್ರ ಸಚಿವರು, ನಾಯಕರು ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಮುಸ್ಲಿಮರ ಓಲೈಕೆಗಾಗಿ ಪಿಎಫ್ಐ ಸಂಘಟನೆಯನ್ನು ಬೆಳಸಲು ಓಲೈಸುತ್ತಿದೆ. ಆದರೆ ನಮ್ಮ ನರೆಂದ್ರ ಮೋದಿಯವರು ದೇಶದ ರಕ್ಷಣೆಗಾಗಿ ಪಕ್ಷವನ್ನು ಕಟ್ಟುವಂತ ಕೆಲಸವನ್ನು ಮಾಡಲು, 224 ಕ್ಷೇತ್ರಗಳಲ್ಲೂ ಕೆಲಸ ಮಾಡುವ ಅಭ್ಯರ್ಥಿಯನ್ನು ಹಾಕಿದ್ದು ಎಲ್ಲರ ಪರವಾಗಿ ಮತಯಾಚನೆಯಲ್ಲಿ ತೊಡಗಿದ್ದಾರೆ ಎಂದ ಅವರು ಹಾಸನ ಜಿಲ್ಲೆಯಲ್ಲಿ ಕನಿಷ್ಟ 4 ಸ್ಥಾನಗಳನ್ನು ಗೆಲ್ಲಲಿದ್ದೇವೆ.
ನೆಲೆ ಇಲ್ಲದ ಕಾಂಗ್ರೆಸ್ ಪಕ್ಷದ ಬಗ್ಗೆ ನಾವು ಎಲ್ಲಿಯೂ ಮಾತನಾಡುವುದಿಲ್ಲ. ಬೇಲೂರಿನಲ್ಲಿ ಪಕ್ಷದ ಬಗ್ಗೆ ಯಾವುದೇ ಗೊಂದಲವಿಲ್ಲ. ಎಲ್ಲರೂ ಸಹ ಒಗ್ಗೂಡಿ ಪಕ್ಷಕ್ಕಾಗಿ ಕೆಲಸವನ್ನು ಮಾಡುತ್ತಾರೆ. ಕೇಂದ್ರ ಹಾಗೂ ರಾಜ್ಯದ ಇತರ ನಾಯಕರು ಸಹ ಮೋದಿಯವರ ಜೊತೆಗೂಡಿ ಆಗಮಿಸಲಿದ್ದಾರೆ ಎಂದರು. ತಾಲೂಕು ಅಧ್ಯಕ್ಷ ಅಡಗೂರು ಆನಂದ, ತಾಲೂಕು ಚುನಾವಣಾ ಉಸ್ತುವಾರಿ ಪ್ರಸಾದ್, ದಿನೇಶ್, ಚೇತನ್ ಇದ್ದರು.