News Karnataka
ರಾಜಕೀಯ

ಶಕ್ತಿ ಪ್ರದರ್ಶನಕ್ಕೆ ಕೆ.ಎಂ. ಶಿವಲಿಂಗೇಗೌಡ ಸಜ್ಜು

MLA KM Shivalingegowda, who has left JDS, will join the Congress this sunday.
Photo Credit : Bharath

ಹಾಸನ: ಈಗಾಗಲೇ ಜೆಡಿಎಸ್‌ನಿಂದ ಹೊರ ಬಂದಿರುವ ಶಾಸಕ ಕೆ.ಎಂ.ಶಿವ ಲಿಂಗೇಗೌಡ ಅವರು ಇದೇ ಭಾನುವಾರ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ಕೆ.ಎಂ.ಶಿ ತಮ್ಮ ರಾಜಕೀಯ ವಿರೋಧಿಗಳಿಗೆ ಠಕ್ಕರ್ ನೀಡಲು ಮುಂದಾಗಿದ್ದಾರೆ.

ಅಂದು ನಡೆಯುವ ಕಾರ್ಯಕ್ರಮಕ್ಕೆ ಎಐಸಿಸಿ ಮುಖಂಡ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಎಂ.ಬಿ.ಪಾಟೀಲ, ಸೇರಿದಂತೆ ಹತ್ತಾರು ಹಿರಿಯ ಕಾಂಗ್ರೆಸ್ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಅಂದಿನ ಕಾರ್ಯಕ್ರಮದಲ್ಲಿ ಅರಸೀಕೆರೆ ವಿಧಾನ ಸಭಾ ಕ್ಷೇತ್ರದ ಸರಿ ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದು, ಆ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈಗಾಗಲೇ ಶಿವಲಿಂಗೇಗೌಡರನ್ನು ಸೋಲಿಸಲೇಬೇಕೆಂದು ತೊಡೆ ತಟ್ಟಿರುವ ಜೆ.ಡಿ.ಎಸ್ ಹಾಗೂ ಕಳೆದ ಒಂದೆರಡು ವರ್ಷದಿಂದ ತಾಲೂಕಿನಲ್ಲಿ ಸಕ್ರೀಯ ರಾಜಕಾರಣ ಮಾಡುತ್ತಾ, ಶಿವಲಿಂಗೇಗೌಡರನ್ನು ಮಣಿಸಿ ತಾನು ಗೆದ್ದು ಬೀಗಬೇಕೆಂದು ತಂತ್ರ – ಕುತಂತ್ರ- ಪ್ರತಿತಂತ್ರ ಎಣೆದಿರುವ ಎನ್.ಆರ್. ಸಂತೋಷ ಅಂತಹವರಿಗೆ ಈ ಸಮಾರಂಭ ಹೊಸ ಸಂದೇಶ ರವಾನಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *