ಸಕಲೇಶಪುರ: ಸಕಲೇಶಪುರ ಹಾಗೂ ಆಲೂರು ತಾಲೂಕು ಮತ್ತು ಕಟ್ಟಾಯ ಹೋಬಳಿಯಲ್ಲಿ ಕಳೆದ ಐದು ವರ್ಷಗಳ ತಮ್ಮ ಶಾಸಕ ಸ್ಥಾನದ ಅವಧಿಯಲ್ಲಿ ಸರ್ಕಾರದಿಂದ ಒಟ್ಟು 1379 ಕೋ.ರೂ ಅನುದಾನ ತಂದು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗಿದೆ ಎಂದು ಶಾಸಕ ಹೆಚ್.ಕೆ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ತಾವು ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಅವರು ಸಕಲೇಶಪುರ ತಾಲೂಕಿನಲ್ಲಿ 572 ಕೋಟಿ ರೂ., ಆಲೂರು ತಾಲೂಕಿನಲ್ಲಿ 827 ಕೋಟಿ ರೂ. ಹಾಗೂ ಕಟ್ಟಾಯ ಹೋಬಳಿಯಲ್ಲಿ 380 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ವಿವರಣೆ ನೀಡಿದ್ದಾರೆ. ಎತ್ತಿನ ಹೊಳೆ ಯೋಜನೆ ಅನುದಾನದಿಂದ 218 ಕೋ.ರೂ. ವೆಚ್ಚ ಮಾಡಿ ತಾಲೂಕಿನಾದ್ಯಂತ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸಕಲೇಶಪುರದಲ್ಲಿ ಕೊಳಚೆ ನಿರ್ಮೂಲನಾ ಮಂಡಲಿಯಿಂದ 12.62 ಕೋಟಿ ವೆಚ್ಚದಲ್ಲಿ 250 ಮನೆಗಳನ್ನು ನಿರ್ಮಿಸಲಾಗಿದೆ, 4 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿ, ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಸಕಲೇಶಪುರ ಪುರಸಭೆ ವತಿಯಿಂದ 15 ಕೋಟಿ ರೂ. ಬಳಸಿ ಪಾರ್ಕ್ ಗಳನ್ನು ಅಭಿವೃದ್ಧಿ, ಫುಡ್ ಕೋರ್ಟ್, ಕುಡಿಯುವ ನೀರಿನ ಕಾಮಗಾರಿ, ರಸ್ತೆ ಅಗಲೀಕರಣ, ಮಾಟನ್ ಮಾರ್ಕೆಟ್, ಚಿಕನ್ ಮಾರ್ಕೆಟ್, ತರಕಾರಿ ಮಾರ್ಕೆಟ್ ಅಭಿವೃದ್ಧಿ ಮತ್ತು ತಾಲೂಕು ಕ್ರೀಡಾಂಗಣ ಅಭಿವೃದ್ಧಿ ಮಾಡಲಾಗಿದೆ.
ಚೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಕಛೇರಿ ನಿರ್ಮಾಣಕ್ಕಾಗಿ 5 ಕೋಟಿ, ಹೆತ್ತೂರಿನಲ್ಲಿ ಎಂ.ಯು.ಎಸ್ ಕೇಂದ್ರ ಅಭಿವೃದ್ಧಿಗೆ 6 ಕೋಟಿ ರೂ, ಬಾಳೆಗದ್ದೆಯಲ್ಲಿ ಎಂ.ಯು.ಎಸ್ ಕೇಂದ್ರ ಅಭಿವೃದ್ಧಿಗೆ 1.50 ಕೋಟಿ. ರೂ, ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ಅಭಿವೃದ್ಧಿ 4.50 ಕೋಟಿ ರೂ., ಆಯುಷ್ ತಾಲೂಕು ಆಸ್ಪತ್ರೆ ಮಂಜೂರಾತಿ ಮತ್ತು ಕಟ್ಟಡ ನಿರ್ಮಾಣಕ್ಕೆ 1.50 ಕೋಟಿ ರೂ, ಸಕಲೇಶಪುರದಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕರ ಕಛೇರಿ ಕಟ್ಟಡ ನಿರ್ಮಾಣಕ್ಕೆ 2.5 ಕೋ.ರೂ., ಹೊಸ ಪ್ರವಾಸಿ ಮಂದಿರ ನಿರ್ಮಾಣಕ್ಕೆ 4 ಕೋ.ರೂ., ಮಿನಿ ವಿಧಾನಸೌಧ ಕಟ್ಟಡಕ್ಕೆ ಮೊದಲನೆ ಮತ್ತು ಎರಡನೆ ಅಂತಸ್ತು ನಿರ್ಮಾಣಕ್ಕೆ 4 ಕೋ.ರೂ ವೆಚ್ಚ ಮಾಡಲಾಗಿದೆ. ಹೀಗೆ ತಾಲೂಕಿನಾದ್ಯಂತ ಪದವಿ ಪೂರ್ವ ಕಾಲೇಜುಗಳು, ಬಾಲಕಿಯರ ಪ್ರೌಢ ಶಾಲೆ, ಅಗ್ನಿ ಶಾಮಕ ದಳ, ಪೊಲೀಸ್ ವಸತಿಗೃಹಗಳ ನಿರ್ಮಾಣ, ನಗರೋತ್ಥಾನ ಯೋಜನೆ, ಅಮೃತ್ ಯೋಜನೆ, ನೀರಿನ ಯೋಜನೆ, ಪುರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಹೀಗೆ ಹಲವು ಕಾಮಗಾರಿಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆಲೂರು ತಾಲೂಕು ಜಲ ಜೀವನ್ ಮೀಷನ್ ಯೋಜನೆ ಅಡಿಯಲ್ಲಿ 135 ಕೋಟಿ ರೂ. ವೆಚ್ಚದಲ್ಲಿ 15 ಗ್ರಾಮ ಪಂಚಾಯಿತಿಗಳ 448 ಜನ ವಸತಿಗಳ 245 ಗ್ರಾಮಗಳಿಗೆ ನೀರು ಸರಬರಾಜು ಕಾಮಗಾರಿ ಮಾಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
50 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಆಸ್ಪತ್ರೆ ಅಭಿವೃದ್ಧಿ, 75 ಕೋಟಿ ರೂ. ವೆಚ್ಚದಲ್ಲಿ ಅಗ್ನಿ ಶಾಮಕ ಠಾಣೆ ಕಟ್ಟಡ ನಿರ್ಮಾಣ, 50 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಪದವಿ ಕಾಲೇಜುಗಳ ಕಟ್ಟಡ ನಿರ್ಮಾಣ, 60 ಕೋಟಿ ರೂ. ವೆಚ್ಚದಲ್ಲಿ ಪದವಿ ಪೂರ್ವ ಕಾಲೇಜುಗಳ ಕಟ್ಟಡ, 80 ಕೋಟಿ ರೂ. ವೆಚ್ಚದಲ್ಲಿ ಪ್ರೌಢಶಾಲಾ ಕಟ್ಟಡಗಳು, 45 ಕೋಟಿ ರೂ. ವೆಚ್ಚದಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣ, 60 ಕೋಟಿ ರೂ. ವೆಚ್ಚದಲ್ಲಿ ನ್ಯಾಯಾಲಯಗಳ ಕಟ್ಟಡ ಮತ್ತು ವಸತಿ ಗೃಹ, 80 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿ ಹಾಸ್ಟೆಲ್ ಗಳ ನಿರ್ಮಾಣ, 40 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಿಸಲಾಗಿದೆ. ಅಂಬೇಡ್ಕರ್ ಭವನ ನಿರ್ಮಾಣ, ಬಸ್ ನಿರ್ಮಾಣ ನವೀಕರಣ, ಪಾಳ್ಯ ಹೋಬಳಿಗಳಿಗೆ ಹೊಸದಾಗಿ ಎಂ.ಯು.ಎಸ್.ಎಸ್ ಕೇಂದ್ರ ಮಂಜೂರಾತಿ ಹೀಗೆ ಹಲವು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಕಟ್ಟಾಯ ಹೋಬಳಿಯಾದ್ಯಂತ 380 ಕೋಟಿ ರೂ ವೆಚ್ಚದಲ್ಲಿ ಹಲವು ಕಾಮಗಾರಿಗಳನ್ನು ನಿರ್ವಹಿಸಲಾಗಿದೆ ಎಂದೂ ಶಾಸಕರು ಹೇಳಿದ್ದಾರೆ.