ಅರಸೀಕೆರೆ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮೂರು ಬಾರಿ ಶಾಸಕರಾಗಿದ್ದ ಕೆ.ಎಂ ಶಿವಲಿಂಗೇಗೌಡರು ಹಾಗೂ ಕಾಂಗ್ರೆಸ್ ಮುಖಂಡ ಜಿಬಿ ಶಶಿಧರ್ ನೇತೃತ್ವದಲ್ಲಿ ಕಣಕಟ್ಟೆ ಹೋಬಳಿ ಭಾಗದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದು, ಶಾಸಕರ ಅಭಿವೃದ್ದಿ ಮೆಚ್ಚಿ ಜೆಡಿಎಸ್ ಪಕ್ಷ ತ್ಯಜಿಸಿ ಕಾಂಗ್ರೆಸ್ಸ್ ಪಕ್ಷಕ್ಕೆ ಹಲವಾರು ಮುಖಂಡರು ಸೇರ್ಪಡೆಯಾದರು.
ಮೇಳೆನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಸಂತೋಷ್ ನೇತೃತ್ವದಲ್ಲಿ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ, ಸದಸ್ಯರುಗಳಾದ ಪುನೀತ್, ದಾನಪ್ಪ, ರಘು, ಪ್ರಭುಸ್ವಾಮಿ, ಎಂ.ಕೆ ಚಂದ್ರಶೇಖರ, ಇನ್ನಿತರರು ಕಾಂಗ್ರೆಸ್ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕಣಕಟ್ಟೆ ಹೋಬಳಿ ಮುಖಂಡರಾದ ಸುರೇಶ್, ಜಿ.ಪಂ ಮಾಜಿ ಸದಸ್ಯ ಮಾಡಾಳು ಸ್ವಾಮಿ, ಕಣಕಟ್ಟೆ ಗ್ರಾಮ ಪಂಚಾಯಿತಿ ಸದಸ್ಯ ಪ್ರಜ್ವಲ್ ಉಪಸ್ಥಿತರಿದ್ದರು.