ಚನ್ನರಾಯಪಟ್ಟಣ: ಜಾತ್ಯಾತೀತ ಜನತಾದಳ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಿ ಎನ್ ಬಾಲಕೃಷ್ಣರವರು ಇಂದು ಕ್ಷೇತ್ರದ ಈಶಾನ್ಯ ಮೂಲೆಯಾದ ಕಬ್ಬಳಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರ ಕೈಗೊಂಡರು.
ಇದೇ ವೇಳೆ ರಾಜ್ಯದ ಮಾಧ್ಯಮ ವಕ್ತಾರರಾದ ಶ್ವೇತ ಯಾದವ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮ ಮತ್ತು ಮಮತಾ ರಮೇಶ್, ಅಂಬಿಕಾ, ರಾಮಕೃಷ್ಣ, ತಾಲೂಕು ಪಂಚಾಯಿತಿಯ ಮಾಜಿ ಸದಸ್ಯರು ಮತ್ತು ವಿವಿಧ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರುಗಳು ಪಾಲ್ಗೊಂಡಿದ್ದರು.