ಬೇಲೂರು: ಚಿಕ್ಕಮಂಗಳೂರಿಗೆ ತೆರಳುವ ಸಂದರ್ಭ ಪಟ್ಟಣದ ನೆಹರು ನಗರಕ್ಕೆ ಅಗಮಿಸಿದ ರಾಷ್ಟೀಯ ಕಾಂಗ್ರೇಸ್ ಸಂಯೋಜಕಿ, ಕರ್ನಾಟಕ ಅಲ್ಪಸಂಖ್ಯಾತ ಕಾಂಗ್ರೇಸ್ ಉಸ್ತುವಾರಿ ಜಲೀನಾ ಗಾಲರವರನ್ನು ಜಿಲ್ಲಾ, ತಾಲೂಕು ಅಲ್ಪಸಂಖ್ಯಾತ ಕಾಂಗ್ರೇಸ್ ವತಿಯಿಂದ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ ರಾಜ್ಯ ಹಾಗೂ ದೇಶದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ದಲಿತರ ಜ್ವಲಂತ ಸಮಸ್ಯೆಗಳು ಬಗೆಹರಿಯಬೇಕೆಂದರೆ ಈ ಬಾರಿ ಕಾಂಗ್ರೆಸ್ ಗೆಲುವು ಅನಿವಾರ್ಯ. ತಮ್ಮ ಕ್ಷೇತ್ರದಲ್ಲಿನ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಸಂಘಟನೆಯಿಂದ ಕೆಲಸ ಮಾಡಬೇಕು. ಬಿಜೆಪಿ ಸರ್ಕಾರದ ಕೆಟ್ಟ ಆಡಳಿತದಿಂದ ಬೇಸತ್ತಿರುವ ಜನತೆ ಈ ಬಾರಿ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ. ಅಲ್ಪಸಂಖ್ಯಾತರ ಹಿಂದುಳಿದವರ ಏಳಿಗೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂಬ ಸತ್ಯ ಮತದಾರರಿಗೆ ತಿಳಿದಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಸಮದ್, ಮಾಜಿ ಜಿ.ಪಂ ಸದಸ್ಯ ಸೈಯದ್ ತೌಫಿಕ್, ಪುರಸಭಾ ಸದಸ್ಯ ಆಕ್ರಂ ಶರೀಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾಲಿದ್, ಪುರಸಭೆ ಮಾಜಿ ಸದಸ್ಯ ಜುಬೇರ್, ಗ್ರಾ.ಪಂ ಸದಸ್ಯ ಇಸ್ಮಾಯಿಲ್, ನವೀದ್, ನೌಶದ್ ಇತರರು ಇದ್ದರು.