ಸಕಲೇಶಪುರ: ಸಕಲೇಶಪುರ ಹಾಗೂ ಆಲೂರು ವಿಧಾನಸಭಾ ಕ್ಷೇತ್ರದ ಜನತೆಯಲ್ಲಿ ಬಾರಿ ಗೊಂದಲ ಶುರುವಾದಂತೆ ಕಾಣುತ್ತಿದೆ. ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಬಾರಿ ಚುನಾವಣೆಯಲ್ಲಿ ಗೆದ್ದು ಹೆಚ್.ಕೆ. ಕುಮಾರಸ್ವಾಮಿ ಅಧಿಕಾರ ಚಲಾಯಿಸಿದ್ದಾರೆ. ಆದರೆ ಸಕಲೇಶಪುರದಲ್ಲಿ ಕಾಡಾನೆ ಸಮಸ್ಯೆ ಬಿಟ್ಟು ಇನ್ನಿತರ ಆರೋಪಗಳಿಗೆ ಸಿಲುಕದೆ ಜವಾಬ್ದಾರಿವಾಯಿತವಾಗಿ ಅಧಿಕಾರ ನಿರ್ವಹಿಸಿದ್ದಾರೆ ಎಂದು ಕ್ಷೇತ್ರದ ಜನರ ಹೇಳಿಕೆ ಆಗಿದೆ.
ಮತ್ತೊಂದೆಡೆ ಶಾಸಕರು ಕ್ಷೇತ್ರದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಮಾಡಲಿಲ್ಲ ಎನ್ನುವ ಸಣ್ಣಪುಟ್ಟ ದೂರಿನ ಮೇರೆಗೆ ಎಲ್ಲಾ ಗ್ರಾಮಕ್ಕೆ ಭೇಟಿ ನೀಡಿ ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ. ಆದರೆ ಇದುವರೆಗೆ ಶಾಸಕ ಹೆಚ್ ಕೆ ಕುಮಾರಸ್ವಾಮಿ ಯಾವುದೇ ಧರ್ಮದವರನ್ನು ಕಡೆಗಣಿಸದೆ ಎಲ್ಲ ಧರ್ಮದವರನ್ನು ಸಮಾನತೆಯಾಗಿ ನೋಡಿಕೊಂಡಿದ್ದಾರೆ. ಎಚ್ ಕೆ ಕುಮಾರಸ್ವಾಮಿಯವರು ಹಿಂದೆ ಬಂದರೆ ಒದೆಯುವುದಿಲ್ಲ, ಮುಂದೆ ಬಂದರೆ ತಿವಿಯುವುದಿಲ್ಲ ಎಂಬ ಪುಣ್ಯಕೋಟಿ ಹಸುವಿನ ತರ ಎಲ್ಲರೊಂದಿಗೆ ಬೆರೆಯುತ್ತಾರೆ ಎಂದು ಕ್ಷೇತ್ರದ ಜನರು 75% ಒಪ್ಪಿಕೊಳ್ಳುತ್ತಾರೆ ಮತ್ತು 25% ಜನತೆ ಒಪ್ಪಿಕೊಳ್ಳಲು ತಯಾರಿರುವುದಿಲ್ಲ ಎಂದು ಕ್ಷೇತ್ರದ ಜನತೆ ಮಾತನಾಡುತ್ತಿದ್ದಾರೆ.
ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿ ಮುರಳಿ ಮೋಹನ್ ರವರು ಹೆಸರಿಗಷ್ಟೇ ನಾನು ದಲಿತ, ದಲಿತ ಎಂದು ಟಿಕೆಟ್‌ಗಾಗಿ ಸುತ್ತಾಡಿ ಟಿಕೆಟ್ ಗಿಟ್ಟಿಸಿಕೊಳ್ಳಲಾಗಿ, ಆದರೆ ಇಲ್ಲಿ ಮತದಾರ ಬಂಧುಗಳು ಮುರುಳಿ ಮೋಹನ ಗೋ ಬ್ಯಾಕ್ ಗೋ ಬ್ಯಾಕ್ ಎಂದು ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಯಿತು ಹಾಗೂ ಕ್ಷೇತ್ರದಲ್ಲಿ ಹೊರಗಿನ ವ್ಯಕ್ತಿಗಳಿಗೆ ಟಿಕೆಟ್ ನೀಡದೆ ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಎಂದು ಹಲವು ಬಾರಿ ಹೋರಾಟಗಳೆ ನಡೆಯಿತು. ಮುರಳಿ ಮೋಹನ ಹೆಸರಿಗಷ್ಟೇ ನಾನು ದಲಿತ ಎಂದು ಹೇಳಿಕೊಳ್ಳುತ್ತಾರೆ ಇದುವರೆಗೆ ಯಾವೊಬ್ಬ ದಲಿತನ ಮನೆಗೆ ಹೋಗಿ ಕಷ್ಟ ಸುಖಗಳಿಗೆ ಭಾಗಿಯಾಗಿದ್ದಾರೋ ತಿಳಿಯದು ಎಂದಿದ್ದಾರೆ.
ಕೊರೋನ ಸಮಯದಲ್ಲಿ ಫುಡ್ ಕಿಟ್ ವಿತರಣೆ ಮಾಡಿದೆ ಎಂದು ಬೀಗುತಿರುತ್ತಾರೆ. ಆದರೆ ನಮ್ಮ ಮಲೆನಾಡಿನ ಭಾಗದವರು ಮುರುಳಿ ಮೋಹನ ಕೊಡುವ ಸಣ್ಣಪುಟ್ಟ ಪ್ಯಾಕೆಟ್ ವಸ್ತುಗಳಿಗೆ ಮರುಳಾಗುತ್ತಾರೆಯೇ ? ಅನ್ನೋ ಭಾವನೆ ಇದ್ದರೆ ಮೊದಲು ಅವನು ತಲೆಯಿಂದ ತೆಗೆದು ಹಾಕಲಿ. ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಹಾಗು ವಾಲಿಬಾಲ್ ಆಡುವ ವ್ಯಕ್ತಿಗಳಿಗೆ ಹಣ ನೀಡಿ ನಾನು ಕ್ಷೇತ್ರದ ಜನತೆಗೆ ಸಹಾಯ ಮಾಡಿದ್ದೇನೆ ಎಂದು ಅವರ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಆದರೆ ಇಲ್ಲಿ ನಿಜವಾಗಿಯೂ ನಡೆಯುತ್ತಿರುವುದೇ ಬೇರೆ ಯಾವೊಬ್ಬ ದಲಿತರ ಮನೆಗೆ ಹೋಗಿ ಕಷ್ಟಕ್ಕೆ ಭಾಗಿಯಾಗಿಲ್ಲ ಹಾಗೂ ದಲಿತ ಕಾಂಗ್ರೆಸ್ ಕಾರ್ಯಕರ್ತರನ್ನು ಹತ್ತಿರಕ್ಕೆ ತೆಗೆದುಕೊಳ್ಳದೆ ಬೇಕಾ ಬಿಟ್ಟಿಯಾಗಿ ವರ್ತಿಸಿರುವುದು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿವೆ.
ಮೊನ್ನೆ ನಡೆದ ಕಟ್ಟಾಯ ಗೊರೂರು ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಸಿ ಘಟಕದ ಜಿಲ್ಲಾ ಅಧ್ಯಕ್ಷ ಮಲ್ಲಿಗೆವಾಳು ದ್ಯಾವಪ್ಪ ಹಾಗೂ ಯೂಥ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಗೊರೂರು ರಂಜಿತ್ ಇವರಿಬ್ಬರೂ ಕಟ್ಟಾಯ ಕ್ಷೇತ್ರದ ಜಿಲ್ಲಾ ಮುಖಂಡರುಗಳು ಆದರೂ ಕೂಡ ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಬ್ಯಾನರ್‌ಗಳಿಗೆ ಇವರ ಫೋಟೋಗಳನ್ನು ಹಾಕದೆ ಅವಮಾನ ಮಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದಲ್ಲಿ ತುಂಬಾ ಚರ್ಚೆ ನಡೆಸಿದ್ದಾರೆ. ಇವನಿಗೆ ತಕ್ಕ ಬುದ್ಧಿ ಕಲಿಸಲೇಬೇಕು ಎಂದು ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಚರ್ಚೆ ನಡೆಸಲಾಯಿತು. ಆದ್ದರಿಂದ ಸಕಲೇಶಪುರ ಹಾಗೂ ಆಲೂರು ಕಟ್ಟಾಯ ಕ್ಷೇತ್ರದ ಜನರು ತಕ್ಕ ಪಾಠ ಕಲಿಸುವುದಾಗಿ ಮತದಾರರು ತಿಳಿಸಿದ್ದಾರೆ.
ಇನ್ನೂ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಎಲ್ಲರನ್ನು ಭೇಟಿ ಮಾಡಿ ಮಕ್ಕಳಿಂದ ದೊಡ್ಡವರ ವರೆಗೂ ಮನಸಲ್ಲಿ ಉಳಿಯುತ್ತಿರುವ ವ್ಯಕ್ತಿ ಎಂದರೆ ಜಿ.ಟಿ.ವೆಂಕಟೇಶ್ ಅವರ ಹೆಸರೇ ಮುಂಚೂಣಿಯಲ್ಲಿ ಓಡುತ್ತಿದೆ. ಸ್ವಲ್ಪ ದಿನಗಳ ಹಿಂದೆ ಸಿಮೆಂಟ್ ಮಂಜು ಅವರ ಹೆಸರು ಬಿಜೆಪಿಯ ಪಕ್ಷದಲ್ಲಿ ಮಂಚೂಣಿಯಲ್ಲಿತ್ತು ಆದರೆ ಸಿಮೆಂಟ್ ಮಂಜು ಎಂಬ ಹೆಸರನ್ನು ಹಿಂದಕ್ಕೆ ತಳ್ಳಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ ಮತ್ತು ಟಿಕೆಟ್ ಇನ್ನೇನು ಸಿಕ್ಕೆ ಬಿಟ್ಟಿದೇ ಎನ್ನುವ ನಿಟ್ಟಿನಲ್ಲಿ ಜಿ.ಟಿ ವೆಂಕಟೇಶರವರಿಗೆ ಪಕ್ಷದ ಕಾರ್ಯಕರ್ತರು ಗೊಂದಲದಿಂದ ಮಾತನಾಡಲು ಶುರು ಮಾಡಿದ್ದಾರೆ.
ಅದೇನು ಎಂದು ನೋಡುವುದಾದರೆ ಬಿಜೆಪಿ ಪಕ್ಷದ ಹಿರಿಯ ಮುಖಂಡರುಗಳಿಗೆ ಖರ್ಚು ವೆಚ್ಚಕ್ಕೆ ಹಣ ನೀಡುತ್ತಾರೆ ಹಾಗೂ ಲಿಂಗಾಯತ ಒಕ್ಕಲಿಗ ಸಮುದಾಯದ ಕಾರ್ಯಕರ್ತರು ಪಕ್ಷ ಸಂಘಟನೆಗೆ ಹಾಗೂ ಮತ್ತಿತರ ಖರ್ಚುಗಳಿಗೆ ಹಣ ಕೇಳಿದರೆ ಹಿಂದೆ ಮುಂದೆ ನೋಡದೆ ಕೊಡುತ್ತಾರೆ ಆದರೆ ದಲಿತ ಸಮುದಾಯದ ಕಾರ್ಯಕರ್ತರು ಕೆಲಸ ಮಾಡಿದರೂ ಅವರಿಗೆ ಬೆಲೆ ಕೊಡದೆ ಇವಾಗ, ಮತ್ತೊಮ್ಮೆ, ಸಿಗುತ್ತೇನೆ, ಕೊಡುತ್ತೇನೆ ಎಂದು ಸಬೂಬು ಹೇಳಿ ಜಾರಿಕೊಳ್ಳುತ್ತಾರೆ. ಜಿ.ಟಿ ವೆಂಕಟೇಶ ಇವಾಗಲೇ ಹೀಗೆ ಮಾಡಿದರೆ ಮುಂದೆ ಏನು ತಿಳಿಯದು ಎಂದು ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಶುರುವಾಗಿದೆ. ಹಾಗಾದರೆ ಇಷ್ಟೆಲ್ಲ ಗೊಂದಲಗಳ ನಡುವೆ ಸಕಲೇಶಪುರ ವಿಧಾನಸಭೆಯಲ್ಲಿ ಯಾರು ಗದ್ದಿಗೆ ಹಿಡಿಯುತ್ತಾರೆ. ಮತದಾರ ಬಂಧುಗಳು ಯಾರಿಗೆ ಮತ ನೀಡುತ್ತಾರೆ ಎನ್ನುವುದೇ ಕುತೂಹಲಕಾರಿಯಾಗಿದೆ. ಮತ್ತೊಮ್ಮೆ ಕ್ಷೇತ್ರದ ಮತದಾರರನ್ನು ಭೇಟಿ ನೀಡಿ ಮತದಾರರು ಯಾರ ಪರವಾಗಿ ನಿಲ್ಲುತ್ತಾರೆ ಅವರ ಅಭಿಪ್ರಾಯ ಏನು ಎಂದು ಸಮೀಕ್ಷೆ ನಂತರ ಮುಂದಿನ ಭಾಗದಲ್ಲಿ ತಿಳಿಸುತ್ತೇವೆ.