ಬೇಲೂರು: ಚನ್ನಕೇಶವ ಸ್ವಾಮಿ ರಥೋತ್ಸವ ಕಾರ್ಯಕ್ರಮಕ್ಕೆ ವಿಧಾನಪರಿಷತ್ ಸದಸ್ಯ ಮಧು ಜಿ. ಮಾದೇಗೌಡರ ಹೆಸರು ಕಡೆಗಣಿಸಿದ್ದು ಪ್ರತಿಭಟನೆ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತಯುವ ಮೊರ್ಚ ಕಾಂಗ್ರೆಸ್ ಉಪಾಧ್ಯಕ್ಷ ಧನಪಾಲ ಬೇಲೂರಿನ ಶ್ರೀ ಚನ್ನಕೇಶವ ರಥೋತ್ಸವ ದಿನಾಂಕ ಏ. ೪ರಂದು ನಡೆಯಲಿದ್ದು ದೇಗುಲದ ಆಡಳಿತ ಮಂಡಳಿ ಹಾಗೂ ಪುರಾತತ್ವ ಇಲಾಖೆ ಗಣ್ಯರನ್ನು ಪತ್ರಿಕೆಯಲ್ಲಿ ಆಹ್ವಾನಿಸಿದ್ದು ಅದರಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡರ ಹೆಸರು ಕೈ ಬಿಟ್ಟಿದ್ದು ಇದು ದುರದ್ದೇಶದಿಂದ ಕೂಡಿದೆ. ಕಾಂಗ್ರೆಸ್ ಪಕ್ಷವನ್ನು ಕಡೆಗಣಿಸಿದ್ದು ಏಕ ಮಾತ್ರ ಕಾರಣವಾಗಿದೆ. ಶಿಷ್ಟಾಚಾರಕ್ಕಾದರೂ ಅವರನ್ನು ಕರೆಯುವ ನೆಪ ಮಾಡಿಲ್ಲ. ಈಗಾಗಲೇ ಆಹ್ವಾನ ಪತ್ರಿಕೆ ಎಲ್ಲಾ ಕಡೆ ಕೊಟ್ಟಿದ್ದಾರೆ. ಆದರೆ ಮಧು ಅವರ ಹೆಸರೇ ಇಲ್ಲದೆ ಬೇಜವಬ್ದಾರಿ ಮಾಡಿದ್ದು ಅವರ ಹೆಸರು ಸೇರಿಸಲು ೪ ದಿನಗಳ ಅವಕಾಶ ನೀಡಿದ್ದು ದಿನಾಂಕ ೨೨ರೊಳಗೆ ಮಧು ಜಿ. ಮಾದೇಗೌಡರ ಹೆಸರು ಆಹ್ವಾನ ಪತ್ರಿಕೆಯಲ್ಲಿ ನಮೂದಿಸಿ ಕ್ಷಮೆ ಕೇಳಬೇಕು ಇಲ್ಲದೇ ಹೋದಲ್ಲಿ, ದೇಗುಲ ಆಡಳಿತ ಮಂಡಳಿ ಎದುರು ಮಧು ಮಾದೇಗೌಡರ ಬೆಂಬಲಿಗರು ಹಾಗೂ ಕಾಂಗ್ರೆಸ್ ಬೆಂಬಲಿಗರೊಂದಿಗೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪುರಸಭೆ ಸದಸ್ಯೆ ರತ್ನ ಸತ್ಯನಾರಾಯಣ, ಜಿಲ್ಲಾ ಸೇವಾ ದಳ ಯಂಗ್ ಬ್ರಿಗೇಡ್ ಕಾಂಗ್ರೆಸ್ ಅಧ್ಯಕ್ಷ ಗೋಬಿ ಕುಮಾರಸ್ವಾಮಿ, ಮುಖಂಡರಾದ ಮಲ್ಲೇಶ್ ಗೌಡ, ಶಿವಯ್ಯ ಹಾಜರಿದ್ದರು.