ಹಾಸನ: ನಾನು ಮತ್ತು ನಮ್ಮ ಕುಟುಂಬ ಜೆಡಿಎಸ್ ಪಕ್ಷದ ಕಟ್ಟಾ ಬೆಂಬಲಿಗರಾಗಿದ್ದು ನಾನು ಕಾಂಗ್ರೆಸ್ ಪಕ್ಷದ ಸಂಪರ್ಕದಲ್ಲಿರುವ ಕುರಿತು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ನೀಡಿದ್ದಾರೆನ್ನಲಾದ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲವೆಂದು ಸ್ಪಷ್ಟಪಡಿಸಿರುವ ಜಿ.ಪಂ ಮಾಜಿ ಉಪಾಧ್ಯಕ್ಷ ಸ್ವರೂಪ್ ನಾನು ಜೆಡಿಎಸ್‌ನ ಕಟ್ಟಾಳಾಗಿದ್ದು ಜೆಡಿಎಸ್ ಪಕ್ಷವೇ ನನಗೆ ಆಶ್ರಯ ತಾಣವಾಗಿದ್ದು ರೇವಣ್ಣ ಹಾಗೂ ಕುಮಾರಣ್ಣ ಅವರೇ ಆಶ್ರಯದಾತರಾಗಿದ್ದಾರೆಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ನನ್ನನ್ನು ಯಾವುದೇ ಕಾಂಗ್ರೆಸ್ ಮುಖಂಡರು ಸಂಪರ್ಕಿಸಿಲ್ಲ. ಹಾಗೂ ನಾನೂ ಕೂಡ ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸುವ ಪ್ರಯತ್ನ ಮಾಡಿಲ್ಲವೆಂದು ಹೇಳಿರುವ ಅವರು ನನಗೆ ದೇವೇಗೌಡರೇ ದೇವರ ಸ್ವರೂಪವಾಗಿದ್ದು ಜೆಡಿಎಸ್ ನನ್ನ ಆಶ್ರಯ ತಾಣವಾಗಿದೆ. ನಾನು ಬೇರೆ ಪಕ್ಷಗಳ ಸಂಪರ್ಕದಲ್ಲಿದ್ದೇನೆ ಎನ್ನುವುದು ಕೂಡ ನನಗೆ ತೊಂದರೆ ನೀಡುವ ಪ್ರಯತ್ನಗಳಾಗಿದ್ದು ನಾನು ಜೆಡಿಎಸ್ ಪಕ್ಷದಲ್ಲಿಯೇ ಇದ್ದು ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ನಾವೆಲ್ಲ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿಯುವುದಾಗಿ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.