ಹಾಸನ: ಜಿಲ್ಲೆಯಲ್ಲಿ ಚುನಾವಣೆ ಕಾವು ರಂಗೇರುತ್ತಿದ್ದು, ಟಿಕೆಟ್ ಆಕಾಂಕ್ಷಿಗಳು ಮತದಾರರನ್ನು ಸೆಳೆಯಲು ಹಲವು ರೀತಿಯ ಆಮಿಷ ಒಡ್ಡುತ್ತಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಹೆಚ್.ಕೆ ಸುರೇಶ ಮತದಾರರಿಗೆ ಭರ್ಜರಿ ಬಾಡೂಟ ಆಯೋಜಿಸಿದ್ದು ಇದರ ಜೊತೆಗೆ ಗಿಫ್ಟ್ ನೀಡಿದ್ದಾರೆ.
ಬೇಲೂರು ತಾಲೂಕಿನ ಅಗಸರಹಳ್ಳಿ ಬಾರೆಯಲ್ಲಿ ನೂರಾರು ಜನರಿಗೆ ಗುಂಡು ತುಂಡು ಪಾರ್ಟಿ ಆಯೋಜನೆ ಮಾಡಿದ್ದು, ಕಂಠಪೂರ್ತಿ ಕುಡಿದು, ಬಾಡೂಟ ಮಾಡಿದ ಮತದಾರರು ಎಲ್ಲೆಂದರಲ್ಲಿ ಮಲಗಿದ್ದರು.
ಪ್ರತಿದಿನ ಒಂದೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್. ಕೆ. ಸುರೇಶ ಬಾಡೂಟ ಆಯೋಜನೆ ಮಾಡುತ್ತಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಬಾಡೂಟ, ಮದ್ಯ ಜೊತೆಗೆ ಗಿಫ್ಟ್ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ನಡುವೆ ಗುರುವಾರ ಬೇಲೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ ನಡೆಯುತ್ತಿದೆ.