ಹಾಸನ: ನಿನ್ನನ್ನು ಚುನಾವಣೆಯಲ್ಲಿ ಅಭ್ಯರ್ಥಿ ಮಾಡ್ತಿವಿ ಅಂತ ಜೆಡಿಎಸ್‌ನವರು ಹೇಳಿಲ್ಲ ಅಥವಾ ನನ್ನನ್ನ ಅಭ್ಯರ್ಥಿ ಮಾಡಿ ಅಂತ ನಾನು ಕೇಳಿಲ್ಲ ಈ ಬಗ್ಗೆ ನಾನು ಯಾರ ಜೊತೆಯೂ ಸಂಪರ್ಕದಲ್ಲಿಲ್ಲ ಎಂದು ಕಾಂಗ್ರೆಸ್ ಮುಖಂಡ ಹೆಚ್.ಕೆ.ಮಹೇಶ್ ಸ್ಪಷ್ಟನೆ ನೀಡಿದ್ದಾರೆ.
ಹಾಸನ ತಾಲೂಕಿನ, ಕಟ್ಟಾಯ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಶಾಸಕ ಹೆಚ್.ಡಿ.ರೇವಣ್ಣ ಅವರು ಕಾಂಗ್ರೆಸ್ ಮುಖಂಡ ಹೆಚ್.ಕೆ.ಮಹೇಶ ಹೆಸರು ಪ್ರಸ್ತಾಪಿಸಿರುವ ಕುರಿತು, ಜೆಡಿಎಸ್ ನಾಯಕರ ಸಂಪರ್ಕ ಹಾಗೂ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವ ವಿಚಾರವಾಗಿ ಮಾತನಾಡಿದ ಅವರು ಜೆಡಿಎಸ್ ನವರ್‍ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ಅವರ ಜೊತೆ ವಿಶ್ವಾಸವಿದೆ, ಪಾರ್ಲಿಮೆಂಟ್ ಚುನಾವಣೆಗೆ ಜೊತೆಯಲ್ಲಿ ಕೆಲಸ ಮಾಡಿದ್ದೆವು ಅಷ್ಟೇ, ಅದನ್ನು ಬಿಟ್ಟರೆ ನಿನ್ನನ್ನು ಚುನಾವಣೆಯಲ್ಲಿ ಅಭ್ಯರ್ಥಿ ಮಾಡ್ತಿವಿ ಅಂತ ಅವರಾಗಲಿ ಹೇಳಿಲ್ಲ ಅಥವಾ ನನ್ನನ್ನ ಅಭ್ಯರ್ಥಿ ಮಾಡಿ ಅಂತ ನಾನು ಕೇಳಿಲ್ಲ, ಯಾರ ಜೊತೆಯೂ ಈ ಬಗ್ಗೆ ನಾನು ಸಂಪರ್ಕದಲ್ಲಿಲ್ಲ, ಇವತ್ತು ಬೆಳಿಗ್ಗೆ ನನಗೆ ತಿಳಿದಂಗೆ ಎಲ್ಲಾರೂ ಕೂಡ ಭವಾನಿ ಅಕ್ಕಂಗೆ ಟಿಕೆಟ್ ಕೊಡಬೇಕು ಅಂತ ಜನ ಹೋಗುತ್ತಿದ್ದನ್ನು ನೋಡಿದ್ದೀನಿ. ಬೆಳಿಗ್ಗೆ ಪಾರ್ಕ್ ಹತ್ತಿರದಿಂದ ಹತ್ತು, ಹನ್ನೆರಡು ಕಾರು ಹೊರಟವು ನಮ್ಮ ಪಕ್ಷದಲ್ಲಿ ಇದ್ದವರು ಆ ಪಕ್ಷದಲ್ಲಿ ಇದ್ದಾರೆ. ಅವರು ಸಿಕ್ಕಿದ್ರು ಮಾತಾಡಿದ್ರು, ಹೋಗ್ತಾ ಇದ್ದಿವಿ ಅಂದ್ರು. ಅವರು ಕೂಡ ನನ್ನನ್ನು ಕರೆದಿಲ್ಲ, ನಾನು ಕೂಡ ಅವರನ್ನು ಕೇಳಿಲ್ಲ. ಕರೆದೇ ಇಲ್ಲಾ ಅಂದ ಮೇಲೆ ಜೆಡಿಎಸ್‌ಗೆ ಹೋಗುವ ಪ್ರಶ್ನೆ ಇನ್ನೆಲ್ಲಿ? ಎಂದರು.