ಬೇಲೂರು: ಜಿಲ್ಲೆಗೆ ಬಿಜೆಪಿ-ಕಾಂಗ್ರೆಸ್ ಕೊಡುಗೆ ಏನು..? ಎಂದು ಪ್ರಶ್ನಿಸಿರುವ ಮಾಜಿ ಸಚಿವ ರೇವಣ್ಣ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಜಿಲ್ಲೆಗೆ ಶೂನ್ಯ ಕೊಡುಗೆ ಸಿಕ್ಕಿದೆ. ಬೇಲೂರಿನಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಸಿ.ಎಲ್ 7 ಮದ್ಯದಂಗಡಿಗಳನ್ನು ನೀಡಿದ್ದು, ಬಿಜೆಪಿ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ದೇವೇಗೌಡರ ಕೊಡುಗೆ ಹೆಚ್ಚು. ಯಗಚಿ ಡ್ಯಾಂ ಕಟ್ಟಿದ್ದು, ಹೇಮಾವತಿ ಡ್ಯಾಂ ಕಟ್ಟಿದ್ದು ಯಾರು? ಈ ಜಿಲ್ಲೆಗೆ ದೇವೇಗೌಡರು ಹಲವು ಕೊಡುಗೆ ಕೊಟ್ಟಿದ್ದಾರೆ. ಕಡೂರು-ಚಿಕ್ಕಮಗಳೂರು ರೈಲ್ವೆ ಮಾರ್ಗ ಮಾಡಲು ದೇವೇಗೌಡರು ಬರಬೇಕಾಯ್ತು.
ಬಿಜೆಪಿಯವರಿಗೆ ಮಾನ ಮಾರ್ಯಾದೆ ಇಲ್ಲದೆ ನಾವು ಮಾಡಿದ ಕೆಲಸಗಳನ್ನು ಉದ್ಘಾಟನೆ ಮಾಡುತ್ತಿದ್ದಾರೆ. ನಾನು ಮಾಡಿದ ಕೆಲಸಕ್ಕೆ ಅಡಿಗಲ್ಲು ಹಾಕುತ್ತಿದ್ದಾರೆ. ಇನ್ನೂ ಆಸ್ಪತ್ರೆಯ ಕೆಲಸವೇ ಮುಗಿದಿಲ್ಲ ಆಗಲೇ ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಬಿಜೆಪಿಯವರು ಹೆಣ್ಮಕ್ಕಳಿಗೆ ಕೂಟ್ಟ ಕೊಡುಗೆ ಏನು ಅಂದ್ರೆ ಸಿಎಲ್7 ಮದ್ಯದಂಗಡಿ. ಎಲ್ಲಾ ಕಡೆ ಎಲ್ಲಾ ರೀತಿಯ ಎಣ್ಣೆ ಸಿಗುವಂತೆ ಮಾಡಿದ್ದಾರೆ. ಹಾಸನ ಜಿಲ್ಲೆಗೆ ಹೆಚ್ಚು ಸಿಎಲ್-೭ ಕೊಟ್ಟಿದ್ದೇ ಬಿಜೆಪಿ ಸಾಧನೆ. ಹೆಚ್ಚು ಸಿಎಲ್-7 ಮದ್ಯದಂಗಡಿ ಕೊಟ್ಟಿರುವುದಕ್ಕೂ ಮುಖ್ಯಮಂತ್ರಿಗಳು ಒಂದು ಅಡಿಗಲ್ಲು ಹಾಕಲಿ.
ಇವರೆಡು ರಾಷ್ಟ್ರೀಯ ಪಕ್ಷಗಳು ಪರ್ಸೆಂಟೇಜ್ ಪಕ್ಷಗಳು. ಯಾರಾದ್ರೂ ಕುಮಾರಣ್ಣ, ರೇವಣ್ಣ ಪರ್ಸೆಂಟೇಜ್ ತೆಗೆದುಕೊಂಡಿದ್ದಾರೆ ಅಂತ ಹೇಳಲಿ ನೋಡುವ, ಒಬ್ಬ ಸೋಪಿನ ಫ್ಯಾಕ್ಟರಿ ಮಾಲೀಕನ ಮನೆಯಲ್ಲಿ ಎಂಟು ಕೋಟಿ ಹಣ ಸಿಗುತ್ತೆ ಅವನಿಗೆ ಒಂದೇ ದಿನಕ್ಕೆ ಬೇಲ್ ಸಿಗುತ್ತೆ ಹೇಗೆ ಸರ್ಕಾರ ನಡೆಯುತ್ತಿದೆ ಅಂತ ನೋಡಿ ಎಂದರು.
ಶಾಸಕ ಲಿಂಗೇಶ್ ಮಾತನಾಡಿ ನೀವು ನೀಡಿದ ಗೌರವಕ್ಕೆ ಯಾರಿಗೂ ನೋವಾಗದಂತೆ ಕೆಲಸ ಮಾಡಿದ್ದೇನೆ. ನಮ್ಮ ಕ್ಷೇತ್ರಕ್ಕೆ ಐದು ವರ್ಷದಲ್ಲಿ ೧೮೦೦ ಕೋಟಿ ಅನುದಾನ ತಂದಿದ್ದೇನೆ. ಸಿಎಂ ಅವರೇ ನನ್ನ ಹೊಗಳಿ ಹೋಗಿದ್ದಾರೆ. ಬೇಲೂರಿಗೆ ಬಂದಾಗ ರಾಜಕೀಯಕ್ಕಾಗಿ ಟೀಕೆ ಮಾಡಿದ್ದಾರೆ ಅದರೂ ಕೂಡ ಕೆಲಸ ಮಾಡಿದ್ದೇನೆ. ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡ್ತೇನೆ ಮತ್ತೊಮ್ಮೆ ನನಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.