ಹಾಸನ: ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರವರು ಗುರುವಾರ ಹಾಸನಕ್ಕೆ ಆಗಮಿಸಲಿದ್ದಾರೆ ಎಂದು ಜೆಡಿಎಸ್ ವಕ್ತಾರ ಹೊಂಗೆರೆ ರಘು ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 10;30ಕ್ಕೆ ಅರಸೀಕೆರೆಯಲ್ಲಿ, 11;30ಕ್ಕೆ ಬೇಲೂರಿನಲ್ಲಿ, ಮಧ್ಯಾಹ್ನ 1 ಘಂಟೆಗೆ ಸಕಲೇಶಪುರದಲ್ಲಿ, 3 ಘಂಟೆಗೆ ಅರಕಲಗೂಡಿನಲ್ಲಿ, ಸಂಜೆ 4:15ಕ್ಕೆ ಹಾಸನದಲ್ಲಿ ಮತಯಾಚನೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.