News Karnataka
Saturday, June 10 2023
ರಾಜಕೀಯ

ಬಿಜೆಪಿ ಅಭ್ಯರ್ಥಿ ಪ್ರೀತಮ್ ಗೌಡರಿಗೆ ಬೆಂಬಲ

Dalit leader RPI Satish said that they are support Pritam Gowda, the BJP candidate from Hassan assembly constituency in the upcoming election.
Photo Credit : Bharath

ಹಾಸನ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತಮ್ ಗೌಡ ಅವರನ್ನು ಬೆಂಬಲಿಸಲಿದ್ದೇವೆ ಎಂದು ದಲಿತ ಮುಖಂಡ ಆರ್‌ಪಿಐ ಸತೀಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಾಸನ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಈ ನಿಟ್ಟಿನಲ್ಲಿ ಶಾಸಕ ಪ್ರೀತಂ ಗೌಡ ಅವರ ಅಭಿವೃದ್ಧಿ ಪರ ಜನರು ಒಲವು ತೋರಿಸುತ್ತಿದ್ದಾರೆ. ಆದ್ದರಿಂದ ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸುವುದಾಗಿ ಹೇಳಿದರು.

ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಹಾಲಿ ಹಾಸನ ಶಾಸಕರ ವಿರುದ್ಧ ಅಪ-ಪ್ರಚಾರ ಮಾಡುತ್ತ ಚುನಾವಣೆ ಎದುರಿಸುತ್ತಿದ್ದಾರೆ. ಸ್ವರೂಪ್ ಓರ್ವ ಸಾಮಾನ್ಯ ಕಾರ್ಯಕರ್ತ ಎಂದು ಬಿಂಬಿಸಲು ಹೊರಟು ಟಿಕೆಟ್ ಹಂಚಿಕೆಯಲ್ಲೂ ಗೊಂದಲ ಸೃಷ್ಟಿ ಮಾಡಿದರು. ಇದೇ ರೀತಿ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಲಿಂಗೇಶ್ ಹಾಗೂ ಭವಾನಿ ರೇವಣ್ಣ ನಡುವೆ ಟಿಕೆಟ್ ಗೊಂದಲ ಸೃಷ್ಟಿಸಿ ಗೆದ್ದಂತೆ ಹಾಸನದಲ್ಲಿಯೂ ಗೆಲ್ಲಬಹುದು ಎಂದು ಅಂದುಕೊಂಡಿದ್ದಾರೆ. ಆದರೆ ಈ ಬಾರಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಜೆಡಿಎಸ್‌ನ ಕೆಲ ಮುಖಂಡರು ದಲಿತ ವಿರೋಧಿಯಾಗಿದ್ದು ಇದಕ್ಕೆ ಶಿಗರನಹಳ್ಳಿ ಪ್ರಕರಣವೇ ಪ್ರತ್ಯಕ್ಷ ಸಾಕ್ಷಿಯಾಗಿದೆ. ಈ ಪಕ್ಷದ ನಾಯಕರ ದೌರ್ಜನ್ಯ, ದುರಾಡಳಿತ, ದಬ್ಬಾಳಿಕೆ, ದುರಹಂಕಾರ ಇನ್ನು ಮುಂದೆ ನಡೆಯುವುದಿಲ್ಲ ಎಂದರು.

ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ಅವರು ದೇಣಿಗೆ ಸಂಗ್ರಹಿಸಿ ಚುನಾವಣೆಯ ಸ್ಪರ್ಧಿಸುವ ಪರಿಸ್ಥಿತಿಯಲ್ಲಿ ಇಲ್ಲ, ಅವರ ತಂದೆ ನಾಲ್ಕು ಬಾರಿ ಶಾಸಕರಾಗಿದ್ದವರು ಕುಟುಂಬದವರೆಲ್ಲ ರಾಜಕೀಯ ಅನುಭವಿಸಿದ್ದಾರೆ. ಇತ್ತೀಚಿಗೆ ಸ್ವರೂಪ್ ಅವರು ಕೋಟ್ಯಾಂತರ ರೂ.ನ ಮನೆಯನ್ನು ಕಟ್ಟಿದ್ದು, ದೇಣಿಗೆ ಸಂಗ್ರಹದ ಮೂಲಕ ಚುನಾವಣೆ ಸ್ಪರ್ಧೆ ಕೇವಲ ಚುನಾವಣೆ ಗಿಮಿಕ್ ಬೂಟಾಟಿಕೆಯಾಗಿದೆ ಎಂದು ಟೀಕಿಸಿದರು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಸಾಬೀತು ಮಾಡಲಿ ಅದನ್ನು ಬಿಟ್ಟು ಕೇವಲ ಅಪಪ್ರಚಾರ ಮಾಡುವುದು ವಿರೋಧ ಪಕ್ಷಗಳಿಗೆ ಶೋಭೆ ತರುವುದಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸುಬ್ರಹ್ಮಣ್ಯ, ರಾಜು, ಸತೀಶ್, ರಾಜೇಶ್, ಇತರರು ಇದ್ದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *