ಜಾವಗಲ್: ಹೋಬಳಿಯ ಕುರುಬ ಸಮಾಜ ಹಾಗೂ ಇನ್ನಿತರ ಸಮುದಾಯದ ಮುಖಂಡರುಗಳು, ಕುರುಬ ಸಮಾಜದ ಹಿರಿಯ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಟೇಲ್ ಶಿವಪ್ಪನವರಿಗೆ ರಾಜ್ಯ ಕಾಂಗ್ರೆಸ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಅಯ್ಕೆ ಮಾಡಿದ್ದಕ್ಕೆ ಅರಳೀ ಕಟ್ಟೆ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಿಲ್ಲಾ ಕುರುಬ ಸಂಘದ ಕಾರ್ಯಾಧ್ಯಕ್ಷರಾದ ಮೆಡಿಕಲ್ ಸೋಮಣ್ಣ ಮಾತನಾಡಿ ಸಮುದಾಯದ ಪರವಾಗಿ ಕಾಂಗ್ರೆಸ್ ಪಕ್ಷ ಇದೆ ಎನ್ನುವುದಕ್ಕೆ ಇದೇ ಉದಾಹರಣೆ ಎಂದರು.
ನಿವೃತ್ತ ಶಿಕ್ಷಕ ಗಿರಿಗೌಡ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀರಾಮ್, ಕಾಂಗ್ರೆಸ್ ಮುಖಂಡರಾದ ಹನುಮಂತು, ರಾಮಣ್ಣ, ಯವ ಮುಖಂಡರಾದ ಭರತ್, ಶರತ್, ಲೋಕೆಶ್, ಕಿರಣ್ ಚಂದ್ರಾಚಾರ್ ಹಾಗೂ ಚಂದ್ರಶೇಖರ್ ಉಪಸ್ಥಿತಿಯಿದ್ದರು.