ಹಾಸನ: ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ನಾಳೆ ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ ಪರ ಮತಯಾಚನೆ ಮಾಡಲಿದ್ದಾರೆ.
ಬೆಳಗ್ಗೆ 9 ಗಂಟೆಗೆ ಬೂವನಹಳ್ಳಿ ಏರ್ ಪೋರ್ಟ್ ಗೆ ಆಗಮಿಸಿ ಅಲ್ಲಿಂದ ಬೈಕ್ ರ‍್ಯಾಲಿಯೊಂದಿಗೆ ಎನ್ ಆರ್ ಸರ್ಕಲ್ ಮೂಲಕ ಸಂತೆಪೇಟೆವರೆಗೂ ಸಂಚರಿಸಿ, ಹಾಸನಾಂಬ ದೇವಸ್ಥಾನದಿಂದ ಗಾಂಧಿ ಬಜಾರ್, ಸುಭಾಷ್ ಸ್ಕ್ವೇರ್, ಮಹಾವೀರ್ ಸರ್ಕಲ್ ವರೆಗೂ ರೋಡ್ ಶೋ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.