ಬೇಲೂರು: ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆ.ಡಿ.ಎಸ್ ಒಂದಲ್ಲ ಒಂದು ಕ್ಯಾತೆ, ಗೊಂದಲ, ಭಿನ್ನಾಭಿಪ್ರಾಯ, ಹಗರಣಗಳು ಸುತ್ತುಕೊಂಡ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷವಾದ ಬಿಎಸ್‌ಪಿ ಮಾತ್ರ ಸದ್ದು ಗದ್ದಲವಿಲ್ಲದೆ ಇಡೀ ಕ್ಷೇತ್ರದಲ್ಲಿ ಮಿಂಚಿನ ಸಂಚಾರಕ್ಕೆ ಮುಂದಾಗಿರುವುದು ಪ್ರಮುಖ ಮೂರು ಪಕ್ಷಗಳಿಗೆ ತಲೆನೋವು ತಂದಿದೆ ಎನ್ನಲಾಗಿದೆ.
ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದೊಂದಿಗೆ ಒಪ್ಪಂದದಿಂದ ಚುನಾವಣೆಯನ್ನು ಎದುರಿಸಿದ್ದ ಬಿಎಸ್‌ಪಿ, 2023ರಲ್ಲಿ ತನ್ನದೆಯಾದ ಸ್ವತಂತ್ರ ಅಭ್ಯರ್ಥಿಯನ್ನು ಈಗಾಗಲೇ ಕಣ ಇಳಿಸುವ ಮೂಲಕ ಕ್ಷೇತ್ರದಲ್ಲಿ ಸಂಘಟನೆಗೆ ಮುಂದಾಗಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಬೇಲೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಇದೇ ತಾಲೂಕಿನ ಮನೆಮಗ ಗಂಗಾಧರ ಬಹುಜನ್ 2023ರಬಿಎಸ್‌ಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕ್ಷೇತ್ರದಲ್ಲಿ ಮತಯಾಚನೆ ಜೊತೆಗೆ ಕ್ಷೇತ್ರದ ಸಮಸ್ಯೆಗಳನ್ನು ಅಲಿಸುತ್ತಾ ಮಿಂಚಿನ ಸಂಚಾರಕ್ಕೆ ಮುಂದಾಗಿದ್ದಾರೆ.
ಬಿಎಸ್‌ಪಿರಾಷ್ಟ್ರೀಯ ಪಕ್ಷವಾಗಿ ಸೈದ್ಧಾಂತಿಕ ತತ್ವ ಸಿದ್ಧಾಂತದ ಮೇಲೆ ರೂಪಿತವಾಗಿ ಜನ ಮನ್ನಣೆ ಗಳಿಸಿದೆ. ಸಂವಿಧಾನದ ಆಶೋತ್ತರಗಳ ಹಿನ್ನಲೆಯಲ್ಲಿ ಕೆಲಸವನ್ನು ಮಾಡುತ್ತಿರುವುದರಿಂದ, ಜನತೆ ಬೆಂಬಲ ನೀಡುವಂತೆ ಮನವಿ ಮಾಡಿದರು.